ಅಂತರರಾಷ್ಟ್ರೀಯ

ಕೊರೊನಾ ನಿಗ್ರಹ, ಉತ್ತಮ ಕೆಲಸಕ್ಕೆ ಮೋದಿ ಶಹಬಾಸ್ : ಟ್ರಂಪ್ ಬಣ್ಣನೆ

ಕೊರೊನಾ ನಿಗ್ರಹ, ಉತ್ತಮ ಕೆಲಸಕ್ಕೆ ಮೋದಿ ಶಹಬಾಸ್ : ಟ್ರಂಪ್ ಬಣ್ಣನೆ

ವಾಷಿಂಗ್ಟನ್, ಸೆಪ್ಟೆಂಬರ್ 14:  ಕೊರೊನಾ ಸೊಂಕು  ಪರೀಕ್ಷೆಯಲ್ಲಿ  ಯಾರು ಮಾಡಿರದ  ಅದ್ಭುತ ಕೆಲಸ ಮಾಡಿದ್ದೀರಿ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ  ಮನಸಾರೆ ಶ್ಲಾಘಿಸಿದ್ದಾರೆ ಎಂದು  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಾಗಿಯೇ ಅವರ ಬೆನ್ನು ತಟ್ಟಿಕೊಂಡಿದ್ದಾರೆ.

ಅಮೆರಿಕದಲ್ಲಿ  ಹಿಂದಿನ ಸರ್ಕಾರ  ಎಚ್1ಎನ್1 ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು ಎನ್ನುವ ಮೂಲಕ ಡೆಮಾಕ್ರಟಿಕ್ ಪಕ್ಷದ ತಮ್ಮ ಎದುರಾಳಿ ಜೋ ಬಿಡೆನ್ ಅವರ ವಿರುದ್ಧದ ಟೀಕೆಯನ್ನು ಟ್ರಂಪ್ ಮುಂದುವರಿಸಿದ್ದಾರೆ.

 

ಭಾರತದಲ್ಲಿ ಮಾಡಿರುವುದಕ್ಕಿಂತಲೂ,ಅಮೆರಿಕದಲ್ಲಿ  ಹೆಚ್ಚು ಜನರನ್ನು ಪರೀಕ್ಷೆ ಮಾಡಲಾಗಿದೆ  ಪರೀಕ್ಷೆಯಲ್ಲಿ ಅಮೆರಿಕದ ಬಳಿಕ ಭಾರತ ಎರಡನೆಯ ಸ್ಥಾನದಲ್ಲಿದೆ. ಎಂದರು.

 

ಪರೀಕ್ಷೆಯಲ್ಲಿ ನೀವು ಬಹಳ  ಅದ್ಭುತ ಕೆಲಸ ಮಾಡಿದ್ದೀರಿ ಎಂದು  ಪ್ರಧಾನಿ ನರೇಂದ್ರ ಮೋದಿ ನನಗೆ ಕರೆ ಮಾಡಿ ಮೆಚ್ಚುಗೆ ಮಾತು  ಹೇಳಿದ್ದಾರೆ ಎಂದೂ  ಟ್ರಂಪ್ ಚುನಾವಣಾ ಸಮಾವೇಶದಲ್ಲಿ ಹೇಳಿದ್ದಾರೆ.ಅಮೆರಿಕದ ಜನರಿಗೆ ಉದ್ಯೋಗ ಮರಳಿ ತರುವುದಕ್ಕೆ, ಗಡಿಗಳನ್ನು ಭದ್ರಪಡಿಸಲು, ಸೇನೆಯನ್ನು ಪುನರ್ ರಚಿಸಲು  ಹಿಂದೆಂದೂ ಯಾರೂ ಮಾಡಿರದ ಕೆಲಸವನ್ನು  ಮಾಡಿರುವುದಾಗಿ  ಟ್ರಂಪ್ ಹೇಳಿಕೊಂಡಿದ್ದಾರೆ.


ಸುದ್ದಿ ಓದಿ