ಅಂತರರಾಷ್ಟ್ರೀಯ

ಜಪಾನ್ ಮಾಜಿ ಪ್ರಧಾನ ಮಂತ್ರಿ ಶಿಂಜೋ ಅಬೆ ಅಂತ್ಯ ಸಂಸ್ಕಾರ, ಟೋಕಿಯೋಗೆ ಮೋದಿ, ಸಂತಾಪ

ಜಪಾನ್ ಮಾಜಿ ಪ್ರಧಾನ ಮಂತ್ರಿ ಶಿಂಜೋ ಅಬೆ ಅಂತ್ಯ ಸಂಸ್ಕಾರ, ಟೋಕಿಯೋಗೆ ಮೋದಿ, ಸಂತಾಪ

ಟೋಕಿಯೋ: ಸೆಪ್ಟೆಂಬರ್ 27: ಜಪಾನ್ ಮಾಜಿ ಪ್ರಧಾನ ಮಂತ್ರಿ ಶಿಂಜೋ ಅಬೆ (Shinzo Abe) ಅವರ ಅಂತ್ಯಸಂಸ್ಕಾರ ಇಂದು ನೆರವೇರುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟೋಕಿಯೋಗೆ ತೆರಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಆತ್ಮೀಯ ಗೆಳೆಯ “ಅಬೆ ಸಾನ್” ಎಂದು ಕರೆದಿದ್ದು, ಜಪಾನ್ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರಿಗೆ ಸಂತಾಪ ಸೂಚಿಸಿದ್ದಾರೆ.

ನಾವು ಇಂದು ಬಹಳ ದುಃಖಕರ ಸಂದರ್ಭದಲ್ಲಿ ಭೇಟಿಯಾಗುತ್ತಿದ್ದೇವೆ. ಕಳೆದ ಬಾರಿ ನಾನು ಜಪಾನ್ ಗೆ ಬಂದಾಗ ಮಾಜಿ ಪ್ರಧಾನ ಮಂತ್ರಿ ಶಿಂಜೋ ಅಬೆ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದೆ. ಭಾರತ ಶಿಂಜೋ ದಬೆ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತದೆ ಮತ್ತು ಜಪಾನ್ ಮತ್ತು ಅವರನ್ನು ನೆನಪಿಸಿಕೊಳ್ಳುತ್ತದೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗಿನ ದ್ವಿಪಕ್ಷೀಯ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದರು.

ಅಬೆ ಭಾರತ ಮತ್ತು ಜಪಾನ್ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು ಮತ್ತು ಅದನ್ನು ಇತರ ಹಲವು ಕ್ಷೇತ್ರಗಳಿಗೆ ವಿಸ್ತರಿಸಿದರು. ಜಾಗತಿಕ ದೃಷ್ಟಿಕೋನದ ಬೆಳವಣಿಗೆಯಲ್ಲಿ ನಮ್ಮ ಸ್ನೇಹವು ಪ್ರಮುಖ ಪಾತ್ರ ವಹಿಸಿದೆ. ಅವರು ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳಿಗಾಗಿ ಭಾರತದ ಜನರು ಅಬೆ ಸಾನ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ನಿಮ್ಮ ನಾಯಕತ್ವದಲ್ಲಿ (ಕಿಶಿಡಾ), ಭಾರತ-ಜಪಾನ್ ಸಂಬಂಧಗಳು ಬಲವಾಗಿ ಬೆಳೆಯುತ್ತವೆ ಮತ್ತು ಹೊಸ ಎತ್ತರವನ್ನು ಪಡೆಯುತ್ತವೆ ಮತ್ತು ವಿಶ್ವದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾನು ನಂಬುತ್ತೇನೆ, ಎಂದು ಪ್ರಧಾನಿ ಹೇಳಿದರು.

ಸುದ್ದಿ ಓದಿ