ಕಟಬಾಕಿ ಆಸ್ತಿ ತೆರಿಗೆ ವಸುಲಿಗೆ ವಿನುತನ ಕ್ರಮ : ಲಮಾಣಿ
ಮಹಾಲಿಂಗಪುರ 23: ಅಸ್ತಿ ತೆರಿಗೆ ಕರ ವಸೂಲಾತಿ ಪ್ರತಿ ನಗರ,ಪಟ್ಟಣ ಪಂಚಾಯತಗಳಿಗೆ ಬಹು ಮುಖ್ಯ ಆದರೆ ಮನೆ ಮತ್ತು ಇತರೆ ಕರ ಸರಿಯಾಗಿ ತುಂಬಿದರೆ ಎಲ್ಲವೂ ಸಲೀಸಾವಾಗುತ್ತದೆ, ಅದರಲ್ಲಿ ನಿರಂತರವಾಗಿ ಕಟಬಾಕಿ ಉಳಿದ ಆಸ್ತಿ ತೆರಿಗೆದಾರರನ್ನು ಜಾಗೃತಿಗೊಳಿಸಲು ರನ್ನ ಬೆಳಗಲಿ ಪಟ್ಟಣ ಪಂಚಾಯತಿಯಲ್ಲಿ ವಿನೂತನ ಆಸ್ತಿ ತೆರಿಗೆ ವಸೂಲಾತಿ ಕಾರ್ಯಕ್ರಮ ಜರುಗಿಸಲಾಯಿತು ಕಟಾಬಾಕಿದಾರರ ಮನೆ ಹೋಗಿ ಹಲಗೆ, ಕೈತಾಳ, ಶಹನಾಯಿ ಬಾರಿಸಿ ಜಾಗ್ರತಿ ಮೂಡಿಸಲಾಯಿತು.
ಸಮೀಪದ ರನ್ನ ಬೆಳಗಲಿಯ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಾದ ಎನ್. ಎ. ಲಮಾಣಿ ರವರು ಸಾರ್ವಜನಿಕ ಆಸ್ತಿಗಳ ಪುನಃ ನವೀಕರಣಗೊಳಿಸಲು, ಮತ್ತು ಪಟ್ಟಣದ ಅಭಿವೃದ್ಧಿಗೆ ವಿವಿಧ ತೆರಿಗೆ ಸಂಗ್ರಹಗಳ ಜೊತೆಗೆ ಆಸ್ತಿ ತೆರಿಗೆ ಸಂಗ್ರಹ ಪ್ರಮುಖವಾಗಿದೆ. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ನೀಡುವ ತೆರಿಗೆ ಒಂದು ಪ್ರಮುಖ ಆದಾಯ . ಆದಕಾರಣ ಪಟ್ಟಣದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ವಿನೂತನವಾಗಿ ಹಲಗೆ, ಕೈತಾಳ, ಶಹನಾಯಿ ವಾದನಗಳ ಜೊತೆಗೆ ಎಲ್ಲಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಆಸ್ತಿ ತೆರಿಗೆ ಕಟ್ಟುವಂತೆ ವಿನಂತಿಸಿಕೊಳ್ಳಲಾಯಿತು ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಪರಶುರಾಮ ನಾಗನೂರು, ಸಂತೋಷ ಚೌಹಾನ, ಸುರೇಶ ಹರಿಜನ, ಸಚಿನ ಕಾಸರ, ಶಿವಾನಂದ ಸುನ್ನಾಳ, ಶಿವಾನಂದ ಬಾವಿಮನಿ, ಮುತ್ತು ಶೀಲವಂತ ಮತ್ತು ಪೌರಕಾರ್ಮಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.