ಕಟ್ಟಡದ ಕೆಳೆಗೊಂದು ಚರಂಡಿಮಾಡಿ ರಸ್ತೆ ಮಾಡಿದರೆಂತಯ್ಯ
ನಗರಸಭೆ,ಲೋಕೋಪಯೋಗಿ ಇಲಾಖೆಯಿಂದ ಯಡವಟ್ಟು;
ವೆಂಕಟೇಶ ಗುಡೆಪ್ಪನವರ
ಮುಧೋಳ: ನಗರದ ಬಬಲೇಶ್ವರ ಯರಗಟ್ಟಿ ರಾಜ್ಯ ಹೆದ್ದಾರಿಯ(ರಾ.ಹೆ55) ಮುಧೋಳದಿಂದ ಯಾದವಾಡಗೆ ಹೋಗುವ ರಸ್ತೆಯು ಡಾಂಬರಿಕರಣವಾಗಿ ಒಂದು ವರ್ಷವಾಗಿದ್ದು ಕೆಲಸಮಸ್ಯೆಗಳ ಮಧ್ಯ ಯಾದವಾಡ ಕ್ರಾಸ್ದಿಂದ ಸಿದ್ದರಾಮೇಶ್ವರ ದೇವಾಲಯದ ವರೆಗಿನ ರಸ್ತೆಯ ಕಾರ್ಯವು ಹಲವಾರು ತೊಂದರೆ ಆತಂಕದ ನಡುವೆಯೇ ಉಳಿದಿದ್ದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯು ಕೈಗೆತ್ತಿಕೊಂಡು ಕಾರ್ಯ ಈಗ ನಡೆದಿದ್ದು ಜನರಲ್ಲಿ ಸಂತಸ ಉಂಟು ಮಾಡಿದ್ದು ಒಂದೆಡೆಯಾದರೆ ಮತ್ತೊಂದೆಡೆ ಕಟ್ಟಡ ತೆರವುಗೊಳಿಸದೆ ಖಾಸಗಿ ಕಟ್ಟಡದ ಕೆಳೆಗಡೆಯೇ ಚರಂಡಿ ನಿರ್ಮಾಣ ಮಾಡಿ ಹಾಸ್ಯಾಸ್ಪದವಾದ ಘಟನೆ ನಗರದಲ್ಲಿ ನಗರದಲ್ಲಿ ನಡೆದಿದ್ದು ಸಾಮಾಜಿಕ ಜಾಲದಲ್ಲಿ ಈ ರೀತಿಯ ಕಾಮಗಾರಿಯ ಬಗ್ಗೆ ಚರ್ಚೆ ನಡೆದಿದೆ.
ನಗರದ ಯಾದವಾಡ ರಸ್ತೆಯ ರಾಣಾ ಪ್ರತಾಪಸಿಂಗ್ ಸರ್ಕಲ್ದಿಂದ ಸಿದ್ದರಾಮೇಶ್ವರ ನಗರದವರೆಗೆ ಕಾಮಗಾರಿ ನಡೆದಿದ್ದು ಅಡೆತಡೆಯಾದ ಕಟ್ಟಡ ಕಂಕೌಂಡ್ಗಳನ್ನು ತೆರವುಗೊಳಿಸಿ ಕಡಿ ಹಾಕಲಾಗಿದೆ.ಆದರೆ ರಸ್ತೆಯ ಮದ್ಯದಲ್ಲಿ ಖಾಸಗಿ ಕಟ್ಟಡವೊಂದನ್ನು ನೆಲಸಮಮಾಡದೆ ಆ ಕಟ್ಟಡದ ಕೆಳಗಡೆ ಚರಂಡಿ ನಿರ್ಮಾಣ ಮಾಡಿದ್ದು ಕಂಡು ಬಂದಿದ್ದು ಇದು ಜನರ ಹಾಗೂ ಈ ಭಾಗದಲ್ಲಿ ತಮ್ಮ ಕಟ್ಟಡ ತೆರವುಗೊಳಿಸದವರ ಕೆಂಗಣ್ಣಿಗೆ ಗುರೊಯಾಗಿದೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವು ನಗರದ ನಿವಾಸಿಗಳು ಪೋಸ್ಟ್ ಮಾಡಿದ್ದರೂ ಸಹ ಕಟ್ಟಡ ತೆರವು ಗೊಳಿಸದೆ ಅಧಿಕಾರಿಗಳು ಸಬೂಬು ಹೇಳಿ ಮುಂದಿನ ಕಾರ್ಯಮಾಡುತ್ತಿರುವುದದು ದುರ್ದೈವದ ಸಂಗತಿಯಾಗಿದೆ.ಈ ಕುರಿತು ಜನಪ್ರತಿನಿಧಿಗಳು ಸಂಬಂದಿಸಿದ ಗುತ್ತಿಗೆದಾರರು ಅಥವಾ ಅಧಿಕಾರಿಗಳು ಮುಂದೆ ಬಂದು ಸಾಮಾಜಿಕ ನ್ಯಾಯ ಒದಗಿಸಬೇಕು ಎನ್ನುವುದು ಮುಧೋಳ ನಾಗರಿಕರ ಒತ್ತಾಯವಾಗಿದೆ.
" ನಗರದೆಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಈ ಕುರಿತು ನಾಗರಕರಲ್ಲಿ ಖುಷಿ ತಂದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣದ ಹಾಗೆ ಕೆಲವು ಕಟ್ಟಡಗಳನ್ನು ರಸ್ತೆ ಕಾಮಗಾರಿಗಾಗಿ ತೆಗೆಯಲಾಗಿದ್ದು ಉಳಿದ ಕಟ್ಟಡಗಳನ್ನು ಹಾಗೆ ಬಿಟ್ಟು ಅಂತಹ ಕಟ್ಟಡ ಕೆಳಗಡೆಯೇ ಕಟ್ಟಡ ನಿರ್ಮಾಣ ಮಾಡಲಾಗಿದೆ.ಇದಕ್ಕೆ ಸೂಕ್ತ ನ್ಯಾಯ ಒದಗಿಸಿ ರಸ್ತೆಯಲ್ಲಿ ಬಂದಿರುವ ಎಲ್ಲ ಕಟ್ಟಡಗಳನ್ನು ನೆಲಸಮ ಮಾಡಿ ಸುಂದರ ರಸ್ತೆ ನಿರ್ಮಾಣವಾಗದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ.
-ಯಾದವಾಡ ರಸ್ತೆಯ ಬದಿಯ ನಾಗರಿಕರು
" ಇಲ್ಲಿ ಯಾವೂದೇ ಜನರಿಗೆ ಅನ್ಯಾಯವಾಗಲಿ ಅಥವಾ ಬೇಕಾಗಿ ಮಾಡಿದ ಕಾರ್ಯವಾಗಲಿ ಮಾಡಿದ್ದು ಅಲ್ಲ, ಆ ಕಟ್ಟಡ ಮಾಲಿಕರ ಗಮನಕ್ಕೆ ತಂದಿದ್ದು ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರಿಂದ ನಮ್ಮ ಕಾರ್ಯ ನಿಲ್ಲಬಾರದು ಎನ್ನುವ ಕಾರಣಕ್ಕಾಗಿ ಈ ರೀತಿ ಮಾಡಲಾಗಿದೆ. ತ್ವರಿತವಾಗಿ ಈ ಕಟ್ಟಡ ತೆರವುಗೊಳಿಸುವ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಈ ಕುರಿತು ಸಹಕಾರ ನೀಡಬೇಕಾಗಿದೆ"
-ಸೋಮಶೇಖರ ಸಾವನ್ ಎಇಇ ಪಿಡಬ್ಲುಡಿ ಮುಧೋಳ
ಶಿವಪ್ಪ ಅಂಬಿಗೇರ ಪೌರಾಯುಕ್ತರು ನಗರಸಭೆ ಮುಧೋಳ