ಉಮೇಶ ಕತ್ತಿ ವಿಧಿವಶ : ಹುಕ್ಕೇರಿ ಕ್ಷೇತ್ರದಲ್ಲಿ ನಿರವ ಮೌನ : ಸ್ವಯಂಪ್ರೇರಿತ ವ್ಯಾಪಾರ, ವಹಿವಾಟ ಬಂದ್ ಮಾಡಿ ಸಂತಾಪ ಸೂಚಿಸಿದ ನಾಗರಿಕರು

ಉಮೇಶ ಕತ್ತಿ ವಿಧಿವಶ : ಹುಕ್ಕೇರಿ ಕ್ಷೇತ್ರದಲ್ಲಿ ನಿರವ ಮೌನ : ಸ್ವಯಂಪ್ರೇರಿತ ವ್ಯಾಪಾರ, ವಹಿವಾಟ ಬಂದ್ ಮಾಡಿ ಸಂತಾಪ ಸೂಚಿಸಿದ ನಾಗರಿಕರು

ಬೆಳಗಾವಿ, ಸೆ, 7 : ಬೆಂಗಳೂರಿನ ತಮ್ಮ‌ ನಿವಾಸದಲ್ಲಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ವಿಧಿವಶವಾಗಿರುವ ಸಚಿವ ಉಮೇಶ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಸ್ವಕ್ಷೇತ್ರವಾದ ಹುಕ್ಕೇರಿ ಮತಕ್ಷೇತ್ರದಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು, ವ್ಯಾಪಾರ ವಹಿವಾಟು ಬಂದ್ ಮಾಡುವ ಮೂಲಕ ಮೃತರಾಗಿರುವ ತಮ್ಮ ಕ್ಷೇತ್ರದ ಶಾಸಕರಿಗ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಸಂಕೇಶ್ವರ ನಗರವನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಶೋಕಾಚರಣೆ ಮಾಡಲಾಗಿದೆ.


        ಹುಕ್ಕೇರಿ, ಸಂಕೇಶ್ವರ ಪಟ್ಟಣಗಳು ಸೇರಿದಂತೆ ಹುಕ್ಕೇರಿ ಮತಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿ‌ ಮುಂಗಟ್ಟು ಬಂದ್ ಮಾಡುವದರೊಂದಿಗೆ ಮೃತ ನಾಯಕನಿಗೆ ಶೃದ್ದಾಂಜಲಿ ಸಲ್ಲಿಸಿದ್ದಾರೆ. 

        ಅತ್ತ ಬೆಂಗಳೂರಿನಲ್ಲಿ ತಮ್ಮ ನೆಚ್ವಿನ ಶಾಸಕ ಉಮೇಶ ಕತ್ತಿ ಅವರು ವಿಧಿವಶವಾದ ಸುದ್ದಿ ತಿಳಿಯುತ್ತಿದ್ದಂತೆ ಕತ್ತಿ ಕೆಲವು ಅಭಿಮಾನಿಗಳು ಮಂಗಳವಾರ ತಡರಾತ್ರಿಯಲ್ಲಿ ತಮ್ಮ ತಮ್ಮ ಪಟ್ಟಣ, ಗ್ರಾಮಗಳಲ್ಲಿ ಸಚಿವ ಉಮೇಶ ಕತ್ತಿ ಅವರ ಭಾವಚಿತ್ರ ಕೈಯಲ್ಲಿ ಹಿಡಿಕೊಂಡು ಕಂಬನಿ‌ ಮಿಡಿದರು. 


       ಸಚಿವ ಉಮೇಶ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಸಂಕೇಶ್ವರ ಪುರಸಭೆ ಸೇರಿದಂತೆ ಕೆಲವು ಗ್ರಾಪಂಗಳಲ್ಲಿ ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಗಲಿದ ತಮ್ಮ ಕ್ಷೇತ್ರದ ಶಾಸಕರಿಗೆ ಸಂತಾಪ ಸೂಚಿಸಲಾಯಿತು.

ಸುದ್ದಿ ಓದಿ