ಬಾಲ ಚೈತನ್ಯ ಆರೈಕೆ ಕೇಂದ್ರಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ
ಸಿರುಗುಪ್ಪ 13: ಕೃಷ್ಣ ನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಬಾಲ ಚೈತನ್ಯ ಆರೋಗ್ಯ ಕೇಂದ್ರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಮಾತನಾಡುತ್ತಾ ಕೊರೊನಾ ನಿಯಂತ್ರಣದಲ್ಲಿ ಆರೋಗ್ಯ ಅಂಗನವಾಡಿ ಆಶಾ ಕಾರ್ಯ ಕರ್ತೆಯರ ಸೇವೆ ಶ್ಲಾಘನೀಯ ಕೊರೊನಾದಿಂದ ಮೃತ ಪಟ್ಟ ಕಾರ್ಯ ಕರ್ತೆಯರ ಕುಟುಂಬಕ್ಕೆ 30ಲಕ್ಷ ಪರಿಹಾರ ವಿಮೆ ನೀಡಲಾಗುತ್ತಿದೆ ಎಂದು ಹೇಳಿದರು.
ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಶಾಸಕ ಎಂ ಎಸ್ ಸೋಮಲಿಂಗಪ್ಪ ತಹಸೀಲ್ದಾರ್ ಎಸ್ ಬಿ ಕೂಡಲಗಿ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್ ತಾಲೂಕು ಆರೋಗ್ಯಾಧಿಕಾರಿ ಡಾ. ವಿದ್ಯಾಶ್ರೀ ಸಿಡಿಪಿಓ ಜಲಾಲಪ್ಪ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಾಸು ಮೊದೀನ್ ಇತರೆ ಅಧಿಕಾರಿಗಳಿದ್ದರು.