ಯರಗಟ್ಟಿ

ಮುಗಳಿಹಾಳ ಸಮೀಪ ಘಟಪ್ರಭಾ ಬಲದಂಡೆ ಕಾಲುವೆ ಪರೀಶೀಲಿಸಿದ ಸಚಿವ ಸತೀಶ್ ಜಾರಕಿಹೊಳಿ

ಮುಗಳಿಹಾಳ ಸಮೀಪ ಘಟಪ್ರಭಾ ಬಲದಂಡೆ ಕಾಲುವೆ ಪರೀಶೀಲಿಸಿದ ಸಚಿವ ಸತೀಶ್ ಜಾರಕಿಹೊಳಿ

ಲೋಕದರ್ಶನ ವರದಿ

ಯರಗಟ್ಟಿ  03: ತಾಲೂಕಿನ ಮುಗಳಿಹಾಳ ಗ್ರಾಮದ ಸಮೀಪ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಗೆ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರೀಶೀಲನೆ ನಡೆಸಿದರು. ನಂತರ ಮಾತನಾಡಿ, "ಕಾಲುವೆಯ ಅಂಚಿನ ಗ್ರಾಮಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ತಲುಪುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಆದ್ದರಿಂದ ಕಾಲುವೆ ಪರೀಶೀಲನೆಗೆ ಬಂದಿದ್ದೇನೆ. ನೀರಿನ ಹರಿವಿಗೆ ಉಂಟಾಗಿರುವ ಅಡಚಣೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ.  

ಕಾಲುವೆ ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಕೈಗೊಂಡು ನೀರಿನ ಹರಿವು ಸುಗಮವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ನೀರಾವರಿ ವ್ಯವಸ್ಥೆ ಸುಧಾರಿಸಿ ಗ್ರಾಮೀಣ ಜನರಿಗೆ ಸಮರ​‍್ಕ ನೀರು ಒದಗಿಸುವುದು ಸರಕಾರದ ಆದ್ಯತೆಯಾಗಿದೆ ಎಂದರು. ಈ ವೇಳೆ ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಬಂಗಾರ​‍್ಪ ಹರಳಿ, ಬಸವರಾಜ ಸತ್ತೂರಿ, ಮಲಿಕಸಾಬ್ ಬಾಗವಾನ, ಗೋಪಾಲ ದಳವಾಯಿ, ಹನುಮಂತ ಪೂಜೇರಿ, ವಿಠ್ಠಲ ಶಿಂತ್ರಿ, ರಾಕೇಶ ದಳವಾಯಿ ಹಾಗೂ ನೀರಾವರಿ ಅಧಿಕಾರಿಗಳು ಸೇರಿದಂತೆ ಮುಂತಾದವರಿದ್ದರು. 


ಸುದ್ದಿ ಓದಿ