ಇಂಡಿ

ಸಚಿವ ಪ್ರಭು ಚವ್ಹಾಣ ಸಮಾಜದ ಕ್ಷಮೆ ಕೇಳಲಿ

ಸಚಿವ ಪ್ರಭು ಚವ್ಹಾಣ ಸಮಾಜದ ಕ್ಷಮೆ ಕೇಳಲಿ

ಇಂಡಿ 6: ಕ್ಷೌರಿಕ ಸಮಾಜಕ್ಕೆ ಹೀನಾಯವಾಗಿ ಮಾತನಾಡಿದ ಸಚಿವ ಪ್ರಭು ಚವ್ಹಾಣ ಇವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು ಕೂಡಲೆ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜಿನಾಮೆ ಪಡೆಯಬೇಕು ಎಂದು ಹಡಪದ ಅಪ್ಪಣ್ಣ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಹಾಗೂ ಸಮಾಜದ ತಾಲೂಕಾ ಅಧ್ಯಕ್ಷ ಸಿದ್ದು ನಾವಿ ಆಗ್ರಹಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಬಸವ ಕಲ್ಯಾಣ ವಿಧಾನಸಭೆ ಮತಕ್ಷೇತ್ರ ಉಪಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಕ್ಷೌರಿಕ ಸಮಾಜಕ್ಕೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಹಿನಾಯವಾಗಿ ಮಾತನಾಡಿದ್ದು ಖಂಡನಿಯ. ರಾಜ್ಯದ ಉನ್ನತ ಮಟ್ಟದ ಸಚಿವನಾಗಿದ್ದು ಇಂತಹ ಹಗುರವಾಗಿ ಹಿಯಾಳಿಸಿ ಮಾತನಾಡುವುದು ಗೌರವ ತರುವಂತದಲ್ಲ. ನಮ್ಮ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಇಂತಹ ಉದ್ದಟತನದ ಮಾತನ್ನಾಡುವ ಮಂತ್ರಿ ಪ್ರಭು ಚವ್ಹಾಣ ಇವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ನಮ್ಮ ಸಮಾಜ ಕ್ಷೌರಿಕ ವೃತ್ತಿಯನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಹಗಲು ರಾತ್ರಿ ದುಡಿಯುತ್ತೆವೆ. ಕ್ಷೌರಿಕ ಸಮುದಾಯ ಅತಿ ಹಿಂದುಳಿದ ಸಮಾಜವಾಗಿದ್ದು ನಮ್ಮಲ್ಲಿ ಸದ್ಯ ಬೆಳೆಯುತ್ತಿರುವ ನಮ್ಮ ಸಮಾಜ ವ್ಯಕ್ತಿ ವಿಧಾನಸಭೆಗೆ ಸ್ಪರ್ದಿಸಿದರೆ ತಪ್ಪೆನು ಹೀಗಿರುವಾಗ ಇಂತಹ ಹೇಳಿಕೆಯಿಂದ ನಮ್ಮ ಸಮಾಜಕ್ಕೆ ಅಗೌರವ ತೋರಿದಂತಾಗಿದೆ. ಚವ್ಹಾಣ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಸಮಾಜದ ಮುಖಂಡರಾದ ಇಂಡಿ ತಾಲೂಕಾ ಸಮಾಜದ ಅಧ್ಯಕ್ಷ ಸಿದ್ದು ನಾವಿ, ನಟರಾಜ ಗವಳಿ, ಶಿವಾನಂದ ನಾವಿ, ಸಂತೊಷ ಗವಳಿ, ಧೂಳಪ್ಪ ನಾವಿ, ಎಸ್.ಎ.ಅಪ್ತಾಗಿರಿ ಮುಂತಾದವರು ಒತ್ತಾಯಿಸಿದ್ದಾರೆ.

ಸುದ್ದಿ ಓದಿ