ಎಲಬುರ್ಗ

ನುಡಿದಂತೆ ನಡೆದ ಸಚಿವ ಹಾಲಪ್ಪ ಆಚಾರ: ಸಂಗಪ್ಪ ಬಂಡಿ

ನುಡಿದಂತೆ ನಡೆದ ಸಚಿವ ಹಾಲಪ್ಪ ಆಚಾರ:  ಸಂಗಪ್ಪ ಬಂಡಿ

ಲೋಕದರ್ಶನ ವರದಿ 

ಯಲಬುರ್ಗಾ: ತಾಲೂಕಿನ ಕರಮುಡಿ ಗ್ರಾಮದಿಂದ ತೊಂಡಿಹಾಳ ಗ್ರಾಮದ ರಸ್ತೆ ನಡುವೆ ಸುಮಾರು ಆರು ಹಳ್ಳಗಳು ಇದ್ದು ಕೆಲ ದಿನಗಳ ಹಿಂದೆ ಕರಮುಡಿಯ ಇಬ್ಬರು ಮಹಿಳೆಯರು ಮತ್ತು ಮುಂಡರಗಿಯ ಇಬ್ಬರು ಪೋಲಿಸರು ಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಮರಣ ಹೊಂದಿದ್ದರು. ಇದರಿಂದ ಈ ಭಾಗದ ಜನರಿಗೆ ಮಳೆ ಬಂದರೆ ಬಂಡಿಹಾಳ, ತೊಂಡಿಹಾಳ, ನರೇಗಲ್ಲ ಮಾರ್ಗದ ಸಂಪರ್ಕ ಕಡಿತವಾಗುತ್ತದೆ. ಮತ್ತು ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಇದನ್ನುಅರಿತ ಮಹಿಳಾ ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರರವರು ಈ ಆರು ಹಳ್ಳಗಳಿಗೆ ಸೇತುವೆ ನಿರ್ಮಿಸಲು ಸರ್ಕಾರದ ಮಟ್ಟದಲ್ಲಿ ಯಶಸ್ವಿಯಾಗಿರುವುದು ಸಂತಸದ ಸಂಗತಿ ಎಂದು ಮತ್ತು ಹಾಲಪ್ಪ ಆಚಾರ ಒಬ್ಬ ಅಭಿವೃದ್ಧಿಪರ ಚಿಂತಕ ಮತ್ತು ನುಡಿದಂತೆ ನಡೆದ ಜನಚಿಂತಕ ಎಂದು ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ಸಂಗಪ್ಪ ಬಂಡಿ ಅಭಿಪ್ರಾಯ ಪಟ್ಟಿದ್ದಾರೆ.  

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಸ್ವಾತಂತ್ರ್ಯ ಬಂದು ಸುಮಾರು75 ವರ್ಷಗಳು ತುಂಬಿದರೂ ಈ ಭಾಗದಿಂದ ಆಯ್ಕೆಯಾದ ಯಾವ ಶಾಸಕರು ಸಹ ಕರಮುಡಿ, ಬಂಡಿಹಾಳ, ತೊಂಡಿಹಾಳ ಜನರ ಬವಣೆಯನ್ನು ನೀಗಿಸಿರಲಿಲ್ಲ. ಆದರೆ ಹಾಲಪ್ಪ ಆಚಾರರವರು ನುಡಿದಂತೆ ಈ ಭಾಗದ ಬಹು ದಿನದ ಬೇಡಿಕೆಯನ್ನು ಈಡೇರಿಸುವುದು ನಿಜಕ್ಕೂ ಸಂತಸದಾಯಕವಾಗಿದೆ. ತಾಲೂಕಿನ ಜನತೆ ಇಂತಹ ಅಭಿವೃದ್ಧಿ ಹರಿಕಾರ ಹಾಲಪ್ಪ ಆಚಾರರವರನ್ನು ಮತ್ತೊಮ್ಮೆ 2023ರ ಚುನಾವಣೆಯುಲ್ಲಿ ಶಾಸಕರನ್ನಾಗಿ ಮಾಡಬೇಕು ಆ ಮೂಲಕ ಯಲಬುರ್ಗಾ ಮತ್ತಷ್ಟು ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ಸಂಗಪ್ಪ ಬಂಡಿ ಹೇಳಿದ್ದಾರೆ. 


ಸುದ್ದಿ ಓದಿ