ಮಹಲಿಂಗಪುರ

ಬೆಳಗಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಸಚಿವ ಗೋವಿಂದ ಕಾರಜೋಳ ಮತಯಾಚನೆ.

ಬೆಳಗಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಸಚಿವ ಗೋವಿಂದ ಕಾರಜೋಳ ಮತಯಾಚನೆ.


ಮಹಾಲಿಂಗಪುರ : ನಮ್ಮ ಸರ್ಕಾರ ಹಾಗೂ ಸ್ಥಳೀಯ ಪಟ್ಟಣ ಪಂಚಾಯತ್ ಭಾಜಪ ಆಡಳಿತ ಸದಸ್ಯರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ನಮ್ಮ ಪಕ್ಷದ ಸದಸ್ಯರನ್ನು ಗೆಲ್ಲಿಸಿ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಬೆಳಗಲಿ ಪಟ್ಟಣದ ಮತದಾರರಲ್ಲಿ ವಿನಂತಿಸಿದರು. 

ಶನಿವಾರ ಬಂದಲಕ್ಷ್ಮಿದೇವಿ ದೇವಸ್ಥಾನದ ಸಭಾಂಗಣದಲ್ಲಿ ಬೆಳಗಲಿ ಪಟ್ಟಣ ಪಂಚಾಯತ್ ಗೆ ನಡೆಯುವ ಚುನಾವಣಾ ಪ್ರಚಾರಾರ್ಥವಾಗಿ ಮಾತನಾಡಿದರು. ಬೆಳಗಲಿ ಪಟ್ಟಣಕ್ಕೆ ಅಲ್ಲದೆ ಆಸುಪಾಸಿನ ಹಲವಾರು ಊರುಗಳ ಅಂತರ್ಜಲವನ್ನು ಹೆಚ್ಚಿಸುವ ಐತಿಹಾಸಿಕ 107 ಎಕರೆ ಕೆರೆ 10 ಕೋಟಿ ರೂಗಳ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿದೆ. 

 ಇನ್ನು ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಮುರಾರ್ಜಿ ವಸತಿ ಶಾಲೆ, ಕೆಇಬಿ, ಹೈಸ್ಕೂಲ್ ಹಾಗೂ ಪಿಯು ಕಾಲೇಜು, 50ಲಕ್ಷ ರೂಗಳಲ್ಲಿ ಘಟಪ್ರಭಾ ಎಡದಂಡೆ ಕಾಲುವೆ ದುರಸ್ತಿ ಮತ್ತು ನಿರ್ಮಾಣ ,ಅನೇಕ ರಸ್ತೆಗಳ ನಿರ್ಮಾಣ ಇನ್ನೂ, ರಾಜ್ಯ ಹೆದ್ದಾರಿ ಇಕ್ಕೆಲೆಗಳಲ್ಲಿ ಅಲಂಕೃತ ದೀಪಗಳ ಜೋಡಣೆ, ಅತಿವೃಷ್ಟಿ ಮನೆಗಳಿಗೆ ಪರಿಹಾರ ಮಂಜೂರು, ವಿವಿಧ ಸಮುದಾಯ ಭವನಗಳಿಗೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ಹೀಗೆ ನೂರಾರು ಕೆಲಸ ಕಾರ್ಯಗಳನ್ನು ಕಾಮಗಾರಿಗಳನ್ನು ಈಗಾಗಲೇ ಪೂರೈಸಿದ ತೃಪ್ತಿ ನನಗಿದೆ.ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ತಾವು 18 ವಾರ್ಡಿನ ಅಂದರೆ ಪಟ್ಟಣದ ಎಲ್ಲ ವಾರ್ಡ್‌ ಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮತ್ತೆ ತಮ್ಮ ಊರಿನ ಹೆಚ್ಚಿನ ಅಭಿವೃದ್ಧಿಯನ್ನು ಮಾಡಲು ಅನುವು ಮಾಡಿಕೊಡುವಂತೆ ಮತದಾರರಲ್ಲಿ ವಿನಂತಿಸಿದರು.ಈಗಾಗಲೇ 1ನೇ ವಾರ್ಡಿನ ಸಿದ್ದುಗೌಡ ಪಾಟೀಲ್ ಅವರ ಅವಿರೋಧ ಆಯ್ಕೆ ನಮ್ಮ ಕೆಲಸ ಕಾರ್ಯಗಳ ಪ್ರೇರಣೆಯಾಗಿದೆ ಎಂದರು. 

ಈ ಸಂದರ್ಭದಲ್ಲಿ ವಾರ್ಡ್‌ ನಂಬರ್ 17ರ ಕಾಂಗ್ರೆಸ್ ಪಕ್ಷದ ಆನಂದ ಮಹಾದೇವ ಸೈದಾಪುರ, ಪರಮಾನಂದ ಲೋಕಾಪುರ, ಮಲ್ಲು ಹೆಗಡೆ ಬಿಜೆಪಿ ಪಕ್ಷಕ್ಕೆ ಸೇರೆ​‍್ಡಗೊಂಡರು. 

ರೈತಸಂಘಕ್ಕೆ 3 ಕ್ಷೇತ್ರ ಪಕ್ಷೇತರ 1 ಸೇರಿದಂತೆ ಪಟ್ಟಣದ ಎಲ್ಲ ವಾರ್ಡುಗಳಿಗೆ ಬಿಜೆಪಿ ಸ್ಪರ್ಧಿಸಿದಂತಾಗಿದೆ. ಎಲ್ಲ ವಾರ್ಡುಗಳ ಅಭ್ಯರ್ಥಿಗಳು ಮತದಾರರಿಗೆ ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ತಿಳಿ ಹೇಳಿ, ಚುನಾವಣೆಯಲ್ಲಿ ವಿಜಯಶಾಲಿಯಾಗಿ, ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಗೋವಿಂದ ಕಾರಜೋಳ ಸಾಹೇಬರಿಗೆ ಉಡುಗೊರೆ ನೀಡೋಣವೆಂದು ತಾಲೂಕು ಭಾಜಪ ಅಧ್ಯಕ್ಷ ಹನುಮಂತ ತುಳಶಿಗೇರಿ, ಉಪಾಧ್ಯಕ್ಷರಾದ ಪಂಡಿತ್ ಪೂಜಾರಿ ಅಭ್ಯರ್ಥಿಗಳಿಗೆ ಕರೆ ನೀಡಿದರು. 

ಈ ಸಂದರ್ಭದಲ್ಲಿ ಕಾಶಿಬಾಯಿ ಪುರಾಣಿಕ, ನ್ಯಾಯವಾದಿ ಪ್ರಕಾಶ್ ವಸ್ತ್ರದ, ಮಹಾಂತೇಶ ಹಿಟ್ಟಿಮಠ, ಶ್ರೀಶೈಲಗೌಡ ಪಾಟೀಲ್, ಸಿದ್ದುಗೌಡ ಪಾಟೀಲ್ ಮಾತನಾಡಿದರು. 

ಆರ್‌. ಟಿ ಪಾಟೀಲ, ಬಿ. ಜಿ ಪಾಟೀಲ, ನಾಗಪ್ಪ ಅಂಬಿ, ಅರುಣ್ ಕಾರಜೋಳ, ರಾಜುಗೌಡ ಯಡಹಳ್ಳಿ, ಬಸವರಾಜ ಮಳಲಿ, ಮೋಹನರಾವ್ ಕುಲಕರ್ಣಿ, ಲಕ್ಕಪ್ಪ ಹಾರೂಗೇರಿ, ಚಿಕ್ಕಪ್ಪ ನಾಯಕ, ವಕೀಲರು ಪ್ರಕಾಶ್ ವಸ್ತ್ರದ, ಹಂಚಿನಾಳ ವಕೀಲರು, ಬಸವರಾಜ ಮಾನೆ, ಶಿವನಗೌಡ ಪಾಟೀಲ, ಪುಟ್ಟು ಕುಲಕರ್ಣಿ, ಮಹಾಲಿಂಗ ಶಿರೋಳ, ಅರ್ಜುನ್ ಸರವಿ, ಗಂಗಪ್ಪ ಗುಡ್ಲಾರ್, ಅಶೋಕ ಸಿದ್ದಾಪುರ, ರಾಮನಗೌಡ ಪಾಟೀಲ, ರಂಗಪ್ಪ ಒಂಟಗೋಡಿ, ಪರಶು ಕುಡಚಿ, ಪರಮಾನಂದ ಸಂಕ್ರಟ್ಟಿ, ಬಸವರಾಜ ಚಿಕ್ಕಣ್ಣವರ್, ಮಹಾಲಿಂಗಪ್ಪ ಪುರಾಣಿಕ, ಕಾಶಿನಾಥ್ ಕೂಗಾಟೆ, ಶ್ರೀಶೈಲ ಹೊಸಮನಿ, ಮುತ್ತಪ್ಪ ಸಿದ್ದಾಪೂರ, ಸುರೇಶ್ ಹಿಪ್ಪರಗಿ, ಶ್ರೀಶೈಲ್ ದೊಡ್ಡಟ್ಟಿ, ಅಶೋಕ ಮಲ್ಕಾಪುರೆ, ಸದಾಶಿವ ಸಂಕ್ರಟ್ಟಿ, ಬಸಪ್ಪ ಬಡಿಗೇರ ಉಪಸ್ಥಿತರಿದ್ದು ಮಲ್ಲು ಕ್ವಾನ್ಯಾಗೊಳ ನಿರೂಪಿಸಿ, ಮಹಾಲಿಂಗಪ್ಪ ಲಾಗದವರ ವಂದಿಸಿದರು. 


ಸುದ್ದಿ ಓದಿ