ಮಹಲಿಂಗಪುರ

ಮಹಾಲಿಂಗಪುರದಲ್ಲಿ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ

ಮಹಾಲಿಂಗಪುರದಲ್ಲಿ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ

ಮಹಾಲಿಂಗಪುರ ೦೬: ಕೋಹಿನೂರ್ ಯೂಥ್ ಸ್ಪೋರ್ಟ್ಸ್ ಕ್ಲಬ್  ಆಶ್ರಯದಲ್ಲಿ ನಗರದ ಮಹಾಲಿಂಗೇಶ್ವರ ಕಾಯಿಪಲ್ಲೆ ಮಾರುಕಟ್ಟೆ ಆವರಣದಲ್ಲಿ ಫೆ. 12ರಂದು ದ್ವಿತೀಯ ಬಾರಿಗೆ ಅಂತಾರಾಜ್ಯ ಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ಜರುಗಲಿದೆ.

ಈ ಪಂದ್ಯಾವಳಿಯಲ್ಲಿ ಮಾಜಿ ಸಚಿವೆ ಉಮಾಶ್ರೀ ಸಹಕಾರ ಹಾಗೂ ಪ್ರೇಕ್ಷಕರ ಬೃಹತ್ ಗ್ಯಾಲರಿ ವ್ಯವಸ್ಥೆಯನ್ನು ಮಾಜಿ ಭಾರತೀಯ ಸೇನೆಯ ಯೋಧ ಶ್ರೀಶೈಲ ಭಜಂತ್ರಿ ನೀಡಿದ್ದಾರೆ. 

ಪ್ರಥಮ ಸ್ಥಾನ ಪಡೆದ ತಂಡಕ್ಕೆ ಬಹುಮಾನ 25 ಸಾವಿರ ರೂ. ನಗರದ ಕಾಂಗ್ರೆಸ್ ಹಿರಿಯ ಧುರೀಣರೂ, ಖ್ಯಾತ ವೈದ್ಯರೂ ಆದ ಡಾ.ಎ.ಆರ್. ಬೆಳಗಲಿಯವರು ನೀಡಿದರೆ, ದ್ವಿತೀಯ ಸ್ಥಾನದ 15 ಸಾವಿರ ರೂ. ಕಾಂಗ್ರೆಸ್ ಧುರಿಣ ರಾಜು ಬಾವಿಕಟ್ಟಿ, ತೃತೀಯ ಸ್ಥಾನ 10ಸಾವಿರ ರೂ. ಗಣ್ಯ ವ್ಯಾಪಾರಸ್ಥರಾದ ಪ್ರಕಾಶ ಓಸವಾಲ, ಚತುರ್ಥ ಬಹುಮಾನ 5 ಸಾವಿರ ರೂ.ಔಷಧಿ ವ್ಯಾಪಾರಿಗಳಾದ ಅರ್ಫಾತ್ ಶಾನೂರ್ ನೀಡಲಿದ್ದಾರೆ.

ಪಂದ್ಯಾವಳಿಯಲ್ಲಿ ಉತ್ತಮ ಹಿಡಿತ, ಉತ್ತಮ ದಾಳಿ, ಎಲ್ಲ ಆಯಾಮಗಳಲ್ಲಿ ಸವಾರ್ಂಗೀಣ ಆಟವಾಡಿದ ಕ್ರೀಡಾಪಟುಗಳಿಗೆ ಬೆಳ್ಳಿಯ ಪದಕಗಳನ್ನು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. 

ತಂಡವನ್ನು ಪ್ರತಿನಿಧಿಸುವ ಆಟಗಾರರು ಒಂದೇ ಊರಿನವರಾಗಿರಬೇಕು. ದೃಢೀಕರಿಸುವ ಅಗತ್ಯ ದಾಖಲಾತಿಗಳನ್ನು ಪಂದ್ಯಕ್ಕೆ ಮುಂಚೆ ವ್ಯವಸ್ಥಾಪಕರಿಗೆ ನೀಡಿ ಸಮಯಕ್ಕೆ ಸರಿಯಾಗಿ ಅಂಕಣದಲ್ಲಿ ಹಾಜರಿರಬೇಕು. ಕೊರೊನಾ ನಿಯಂತ್ರಣ ಸಲುವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಒಂದು ತಂಡದಲ್ಲಿ ಆಡಿದ ಆಟಗಾರ ಮತ್ತೊಂದು ತಂಡದಲ್ಲಿ ಆಡುವ ಅವಕಾಶವಿಲ್ಲ. ಬರುವ ತಂಡಗಳ ಸದಸ್ಯರುಗಳಿಗೆ ಊಟ-ವಸತಿ ನೀಡಲಾಗುವುದು ಎಂದು ಸಂಚಾಲಕರಾದ ಅಬ್ದುಲ್ ಪೆಂಡಾರಿ, ರಿಯಾಜ್ ಪೆಂಡಾರಿ, ಇರ್ಶದ್ ಪಟೇಲ್, ದೈಹಿಕ ಶಿಕ್ಷಕರಾದ ಮೇತ್ರಿ ಸರ್, ಜಂಬಾಟ್ ಕರೋಶಿ ಪ್ರಕಟಣೆಯಲ್ಲಿ ತಿಳಿಸಿ ದೂರವಾಣಿ ಸಂಖ್ಯೆ 88673 85377, 8073384313, 9620760816, 9113562905, 8073869982 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಕೋರಿದ್ದಾರೆ.

ಸುದ್ದಿ ಓದಿ