ಶಾಸಕ ಎಚ್ ಕೆ ಪಾಟೀಲರೊಂದಿಗೆ ಜೂಮ್ ನಲ್ಲಿ 23 ವಿಷಯಗಳ ಅನುಷ್ಠಾನಕ್ಕಾಗಿ ಸಭೆ
ಗದಗ 11:- ಕಳೆದ ನಾಲ್ಕು ವರ್ಷಗಳಿಂದ ಗದಗ ಬೆಟಗೇರಿ ಅವಳಿ ನಗರ ಹಾಗೂ ವಿಶೇಷವಾಗಿ ಗ್ರಾಮೀಣ ಭಾಗದ ನಾಗರಿಕ ಸಬಲೀಕರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಎಚ್ ಕೆ ಪಾಟೀಲ್ ಸೇವಾ ತಂಡವು ಇಂದು ವಿಶಿಷ್ಠವಾದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ತಾಂತ್ರಿಕತೆಯ ಸದುಪಯೋಗದೊಂದಿಗೆ ಸಾಮಾನ್ಯ ನಾಗರಿಕರ ಸಬಲೀಕರಣಕ್ಕಾಗಿ ನಾಗರಿಕರ ಮನೆಗಳನ್ನು ಸೇವಾ ತಂಡದ ಅಡಿಯಲ್ಲಿ ದತ್ತಕ್ಕೆ ಪಡೆದು ಸೇವಾ ತಂಡದ ನಿಗದಿತ ಸೇವೆಗಳ ಸುರಳಿತ ಅನುಷ್ಠಾನಕ್ಕಾಗಿ ಕ್ಯೂ ಆರ್ ಕೋಡ್ ಮೂಲಕ ಸೇವೆಯನ್ನು ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಆ ಪ್ರಯುಕ್ತ ಇದೇ ದಿನಾಂಕ 09/10/2026 ರಂದು ಎಚ್ ಕೆ ಪಾಟೀಲ್ ಸೇವಾ ತಂಡದ ಅಧ್ಯಕ್ಷರಾದ ಸನ್ಮಾನ್ಯ ಪ್ರಭು ಎಲ್ ಬುರಬುರೆ ರವರು ಅಭಿವೃದ್ಧಿಯ ಹರಿಕಾರರಾದ ಡಾಕ್ಟರ್ ಎಚ್ ಕೆ ಪಾಟೀಲ್ ಸಾಹೇಬರನ್ನು ಜೋಮ್ ಮೀಟಿಂಗ್ ನಲ್ಲಿ ಸಂಪರ್ಕಿಸಿ ನಾಗರಿಕರಿಗೆ ಅಗತ್ಯವಿರುವ ಸೇವೆಯನ್ನು ಒದಗಿಸಲು ವಿಶೇಷ ಕಾರ್ಯಯೋಜನೆಗಳನ್ನು ಅಳವಡಿಸಿಕೊಳ್ಳುವ ಕುರಿತು ಚರ್ಚಿಸಲಾಯಿತು.
ಈ ಸಂಧರ್ಭದಲ್ಲಿ ವಿಶೇಷವಾಗಿ ಜೂಮ್ ಮೀಟ್ ಮೂಲಕ ಸನ್ಮಾನ್ಯ ಶಾಸಕರಾದ ಎಚ್ ಕೆ ಪಾಟೀಲ್ ಸಾಹೇಬರು ಹಿಮಾನ್ಸು ದೇಸಾಯಿ, ಕೃಷ್ಣಗೌಡ ಪಾಟೀಲ್, ಡಾಕ್ಟರ್ ವೇಮನ್ ಸಾಹುಕಾರ್, ಪ್ರಭು ಎಲ್ ಬುರಬುರೆ ಪ್ಯಾರಾಲಿ ನೂರಾನಿ, ಬಿ ಬಿ ಅಸೂಟಿ, ಎಮ್ ಸಿ ಶೇಖ್, ಅಶೋಕ ಮಂದಾಲಿ,ಡಾಕ್ಟರ್ ವೆಂಕಟೇಶ್ ರಾಠೋಡ್,ಶಿವಪ್ಪ ಬಳ್ಳಾರಿ,ಶರಣಪ್ಪ ಗೋಳಗೋಳಕಿ ಮುತ್ತುರಾಜ್ ಮುಳವಾಡ್ ವಾಸಿಮ್ ಖಾಜಿ ಶಿವಾ ಚವಾಣ್, ಉಮರ್ ಫಾರೂಕ್ ಹುಬ್ಬಳ್ಳಿ, ಸುಮಿತ್ ಮಲ್ಲಾಪೂರ, ಸುಲೇಮಾನ್ ಮಾಳೆಕೊಪ್ಪ ರಿಯಾಜ್ ಪಾಮಡಿ,ಮಹಮ್ಮದ್ ಬೆಟಗೇರಿ, ದಾದಾಪೀರ್ ಮುಂಡರಗಿ,ಮಹಮ್ಮದ್ ಗಣಗಿ, ನಾಗರಾಜ್ ಯರಗುಡಿ ವೀರಭದ್ರ್ಪ ಡಂಬಳ, ರಮೇಶ ಹೊನ್ನಿನಾಯ್ಕರ, ಮಂಜುನಾಥ್ ಜೋಗದಂಡಕರ ಜಾರ್ಜ್ ದಂಡಾವತಿ ರಾಮಣ್ಣ ಬಾಕಳೆ ಪ್ರಸನ್ನ ಶಾಬಾದಿಮಠ, ಹಾಗೂ ರಾಘವೇಂದ್ರ ಪಾಲನಕರ ಉಪಸ್ಥಿತರಿದ್ದರು.