ಹೋಳಿ ಹಬ್ಬದ ನಿಮಿತ್ಯ ಗ್ರಾಮಗಳ ಶಾಂತಿ ಸಭೆ

ಹೋಳಿ ಹಬ್ಬದ ನಿಮಿತ್ಯ ಗ್ರಾಮಗಳ ಶಾಂತಿ ಸಭೆ
ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ ಹೋಳಿ ಹಬ್ಬದ ನಿಮಿತ್ತ ಶಾಂತಿ ಸಭೆಯಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡು

ಗದಗ 25: ಗದಗ ಗ್ರಾಮೀಣ ವೃತ್ತದಲ್ಲಿ ಪೊಲೀಸ ಇಲಾಖೆ ಹೋಳಿ ಹಬ್ಬದ ಪ್ರಯುಕ್ತ ದಿ.24ರಂದು ಆಯೋಜಿಸಿದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿದ ಗದಗ ಗ್ರಾಮೀಣ ವೃತ್ತ ಸಿಪಿಐ ರವಿಕುಮಾರ ಎಸ್. ಕಪ್ಪತ್ತನವರ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವ ಸಂಘಟಕರು ಕೊರೊನಾ ಸಾಂಕ್ರಾಮಿಕ ರೋಗ ಎರಡನೆ ಅಲೆ ವ್ಯಾಪಾಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ನೀಡಿದ ಕೋವಿಡ್-19 ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಹೋಳಿಹಬ್ಬವನ್ನು ಶಾಂತಿ ರೀತಿಯಲ್ಲಿ ಸರಳವಾಗಿ ಆಚರಿಸಬೇಕು ಎಂದು ಸಿಪಿಐ ಕಪ್ಪತ್ತನವರ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ವೃತ್ತ ಪಿಎಸ್‍ಐ ಹೊಸಮನಿ ಮಾತನಾಡಿ ಸಾರ್ವಜನಿಕರು ಶಾಂತಿಯುತವಾಗಿ ಹೋಳಿಹಬ್ಬ ಆಚರಿಸಬೇಕು. ಒಂದು ವೇಳೆ ಅಹಿತಕರ ಘಟನೆಗಳು ಕಿಡಿಗೇಡಿಗಳಿಂದ ನಡೆದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು, ಮಕ್ಕಳು, ಯುವಕರು, ಒತ್ತಾಯಪೂರ್ವಕವಾಗಿ ಯಾರಿಗೂ ಬಣ್ಣ ಎರಿಚುವುದಾಗಲಿ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಸಮಯವಾಗಿರುವುದರಿಂದ ತೊಂದರೆ ಕೊಡುವುದು ಆಗಲಿ ಇಂತಹ ಘಟನೆಗಳ ನಡೆಯದಂತೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಕುರ್ತಕೋಟಿ, ಕೋಟುಮಚಗಿ, ಕಣಗಿನಹಾಳ, ಎಸ್. ಎಂ. ಕೃಷ್ಣಾ ನಗರ, ಗಂಗಿಮಡಿ, ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು ಇಲಾಖೆಯ ಸಿಬ್ಬಂದಿಗಳಾದ ಪ್ರವೀಣ ಶಾಂತಪ್ಪನವರ, ಎಸ್.ಎಚ್.ಕುರಿ, ಉಪಸ್ಥಿತರಿದ್ದರು.

ಸುದ್ದಿ ಓದಿ