ಕಾಗವಾಡ

ಪಂಚಮಸಾಲಿ ಸಮಾಜದ ಒಳ ಮೀಸಲಾತಿ ಹೋರಾಟ ತೀವ್ರಗೊಳಿಸಲು ಕಾಗವಾಡದಲ್ಲಿ ಸಭೆ

ಪಂಚಮಸಾಲಿ ಸಮಾಜದ ಒಳ ಮೀಸಲಾತಿ ಹೋರಾಟ ತೀವ್ರಗೊಳಿಸಲು ಕಾಗವಾಡದಲ್ಲಿ ಸಭೆ

ಲೋಕದರ್ಶನ ವರದಿ 

ಕಾಗವಾಡ, ಆ.23: ಪಟ್ಟಣದ ಮಹಾದೇವ ಮಂದಿರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶನಿವಾರ ನಡೆದ ಸಭೆಯಲ್ಲಿ ಪಂಚಮಸಾಲಿ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸುವ ಹೋರಾಟವನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು.  ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಪೂಜ್ಯ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ, ನವೆಂಬರ್ನಲ್ಲಿ ಕಾಗವಾಡ ಪಟ್ಟಣದಲ್ಲಿ ತಾಲೂಕು ಪಂಚಮಸಾಲಿ ಲಿಂಗಾಯತ ಬೃಹತ್ ಮಹಾಸಭೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಬೇಕು. ಅಲ್ಲದೆ, ಕೇಂದ್ರ ಸರ್ಕಾರವು ಎಲ್ಲ ಲಿಂಗಾಯತ ಒಳಪಂಗಡಗಳನ್ನು ಒಬಿಸಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.  

ಸಭೆಯಲ್ಲಿ ಕಾಕಾ ಪಾಟೀಲ, ಉಮೇಶಗೌಡ ಪಾಟೀಲ, ರಮೇಶ ಚೌಗುಲೆ, ಪ್ರಕಾಶ ಪಾಟೀಲ, ಶಿವಾನಂದ ನವಿನಾಳೆ, ರಾಕೇಶ ಪಾಟೀಲ, ಅಶೋಕ ಪಾಟೀಲ, ಮಲಗೌಡ ಪಾಟೀಲ, ರಾಜು ಪಾಟೀಲ, ಜಿ.ಎಂ. ಪಾಟೀಲ, ದೀಲೀಪ ಢಂಗ್, ಬಾಳಗೌಡ ಪಾಟೀಲ, ಪವನ್ ಪಾಟೀಲ, ಆರ್‌.ಎಂ. ಪಾಟೀಲ, ಸಿದ್ದು ಪಾಟೀಲ ಸೇರಿದಂತೆ ತಾಲೂಕಿನ ಪಂಚಮಸಾಲಿ ಸಮಾಜದ ಮುಖಂಡರು, ಸಮಾಜ ಬಾಂಧವರು ಹಾಗೂ ಯುವಕರು ಉಪಸ್ಥಿತರಿದ್ದರು. 


ಸುದ್ದಿ ಓದಿ