ಪ್ರತಿಭೆ ಮೆರೆದ ವಿದ್ಯಾಥರ್ಿಗಳಿಗೆ ಪದಕ ಮತ್ತು ಬಹುಮಾನ ಪ್ರಕಟ
ಮಹಾಲಿಂಗಪುರ : ಸಮೀಪದ ರನ್ನಬೆಳಗಲಿಯ ಶ್ರೀ ಗುರು ಮಹಾಲಿಂಗೇಶ್ವರ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ದ್ವಿತೀಯ ಪಿಯುಸಿ ಫಲಿತಾಂಶ ಶೇ 93% , ಕಲಾ ವಿಭಾಗ ಶೇ 90% ಹಾಗೂ ವಾಣಿಜ್ಯ ವಿಭಾಗ ಶೇ 100% ರಷ್ಟು ಫಲಿತಾಂಶ ಪಡೆದಿರುತ್ತದೆ.
ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ನೀಡುವ ಚಿನ್ನದ ಪದಕ ಪುರಸ್ಕಾರಕ್ಕೆ ವಾಣಿಜ್ಯ ವಿಭಾಗದಲ್ಲಿ 570 (95%) ಅಂಕಗಳೊಂದಿಗೆ ಮುಧೋಳ ತಾಲೂಕಿಗೆ ತೃತೀಯ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಕು. ಮಾಯವ್ವ ಯಲ್ಲಪ್ಪ ಗುಜನಟ್ಟಿ , ರಜತ ಪದಕ ಪುರಸ್ಕಾರಕ್ಕೆ ಕಲಾ ವಿಭಾಗದಲ್ಲಿ 564 (94%) ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಹಾಗೂ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದ ಕು. ಸಂಗೀತಾ ಬಸಪ್ಪ ಹೆಗಾಡಿ, ನಗದು ಪುರಸ್ಕಾರಕ್ಕೆ 560 (93.33%) ಮತ್ತು ವ್ಯವಹಾರ ಅಧ್ಯಯನ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದ ಕು. ರೂಪಾ ಶ್ರೀಶೈಲ ಹಿಪ್ಪರಗಿ, ಹಾಗೂ ಕು. ಶಾಯಿದಾ ಅ ತೇರದಾಳ 551 (91.33%) ಲೆಕ್ಕಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದು ಕಾಲೇಜಿಗೆ ಚತುರ್ಥ ಸ್ಥಾನ ಪಡೆದು ಅರ್ಹರಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯದಶರ್ಿ ಹಾಗೂ ಮುಧೋಳ ತಾಲೂಕು ಭಾಜಪ ಗ್ರಾಮೀಣ ಘಟಕದ ಉಪಾಧ್ಯಕ್ಷ ಪಂಡಿತ ಪೂಜಾರಿ ತಿಳಿಸಿ, ವಿದ್ಯಾಥರ್ಿಗಳ ಸಾಧನೆ ಹಾಗೂ ಉಪನ್ಯಾಸಕ ವೃಂದದ ಪರಿಶ್ರಮಕ್ಕೆ ಅಭಿನಂದಿಸಿದ್ದಾರೆ.