ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸ್ಮರಣೆ ನಿತ್ಯ ನಡೆಯಲಿ: ಶಂಭು ಜೋಳದ
ಕುಕನೂರ 16: ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ಮಹಾನ್ ನಾಯಕರಿಗೆ ಗೌರವ ಸಲ್ಲಿಸುವ ಮೂಲಕ ಅವರನ್ನ ನಿತ್ಯ ಸ್ಮರಣೆ ಮಾಡುವ ಕಾರ್ಯ ನಡೆಯಲಿ ಎಂದು ಕುಕನೂರ ಪಪಂ ಮಾಜಿ ಅಧ್ಯಕ್ಷ ಶಂಭು ಜೋಳದ ಹೇಳಿದರು.
ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಶ್ರೀಮಠ ಮತ್ತು ಅ ಪತ್ತಿನ ಸೌಹಾರ್ಧ ಸಹಕಾರಿ ವತಿದಿಂದ ಹಮ್ಮಿಕೊಂಡ 75ನೇ ಸ್ವಾತ್ರಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಬ್ರಿಟಿಷರ ದಬ್ಬಾಳಿಕೆಯಿಂದ ಭಾರತವನ್ನು ಸ್ವತಂತ್ರಗೊಳಿಸಲು ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ, ಅವರಲ್ಲಿ ಮಹಾತ್ಮಾ ಗಾಂಧಿಜೀಯವರು ಒಬ್ಬರು. ಮಹಾತ್ಮಾ ಗಾಂಧಿಜೀಯವರು ಸತ್ಯ ಮತ್ತು ಅಹಿಂಸೆಯನ್ನು ತಮ್ಮ ಅಸ್ತ್ರವನ್ನಾಗಿ ಮಾಡಿಕೊಂಡರು ಮತ್ತು ಜನರನ್ನು ಪ್ರೇರೇಪಿಸಿದರು ಮತ್ತು ಅದನ್ನು ಅಳವಡಿಸಿಕೊಂಡು ಬ್ರಿಟಿಷರ ದೌರ್ಜನ್ಯದ ವಿರುದ್ಧ ಹೋರಾಡಲು ಜನರನ್ನು ಕೇಳಿದರು. ದೇಶದ ಜನರು ಅವರನ್ನು ಬಹಳಷ್ಟು ಬೆಂಬಲಿಸಿದರು ಮತ್ತು ಸ್ವಾತಂತ್ರ್ಯದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಬಾಲಗಂಗಾಧರ ತಿಲಕ್ ಮುಂತಾದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಜನರೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿದರು ಎಂದರು.
ಈ ಸಂದರ್ಭದಲ್ಲಿ ಧ್ವಜಾರೋಹಣವನ್ನ ಹಿರಿಯರಾದ ಗದಿಗಪ್ಪ ಪವಾಡಟ್ಟಿ ನೇರವೇರಿಸಿದರು, ಶ್ರೀಮಠದ ಪೂಜ್ಯ ಮಹಾದೇವ ದೇವರು ಹಲವಾರು ಹಿರಿಯರನ್ನ ಸನ್ಮಾನಿಸಿ ಗೌರವಿಸಿದರು. ವೀರಯ್ಯ ತೋಂಟದಾರ್ಯಮಠ, ಆದಯ್ಯ ಹೊಸಮಠ, ಮಹಮಾಯೆ ದೇವಸ್ಥಾನದ ದರ್ಮಾಧಿಕಾರಿ ಶಿವಣ್ಣ ಮಾಸ್ತರ, ಈರ್ಪ ಮ್ಯಾಳಿ, ಅಧ್ಯಕ್ಷ ಕಳಕಪ್ಪ ಕುಂಬಾರ, ಕಾಶೀಂ ಸಾಬ ಸಂಗಟಿ, ಪ್ರಭು ಶಿವಶಿಂಪರ, ಶೇಖಪ್ಪ ಶಿರೂರ, ಬಸವನಗೌಡ ತೊಂಡಿಹಾಳ, ಬಸವರಾಜ ಬಡಿಗೇರ, ಶಶಿಧರ ಬಿಕ್ಷಾವತಿಮಠ ಮತ್ತು ಇತರರು ಇದ್ದರು.