ಎಲಬುರ್ಗ

ಸರಳವಾಗಿ ಜರುಗಿದ ಸಾಮೂಹಿಕ ವಿವಾಹಗಳು

ಸರಳವಾಗಿ ಜರುಗಿದ ಸಾಮೂಹಿಕ ವಿವಾಹಗಳು

ಯಲಬುರ್ಗಾ 12: ತಾಲೂಕಿನ ಕರಮುಡಿ ಗ್ರಾಮದ ಶ್ರೀ ಹುಚ್ಚಿರೆಶ್ವರ ಮಠದಲ್ಲಿ ಇಂದು ಸರಳವಾಗಿ 8 ಸಾಮೂಹಿಕ ವಿವಾಹಗಳು ಜರುಗಿದವು. ಯಲಬುರ್ಗಾ ಸಂಸ್ಥಾನ ಹಿರೇಮಠದ ಸಿದ್ಧರಾಮೇಶ್ವರ ಶಿವಾಚಾರ್ಯರು ಸಾನಿಧ್ಯವಹಿಸಿ ಮಾತನಾಡುತ್ತಾ ಕರಮುಡಿ ಗ್ರಾಮದಲ್ಲಿ ಸದಾ ಕ್ರೀಯಾಶೀಲ ಚಟುವಟಿಗಳು ಜರುಗುತ್ತಿರುವುದು ಶ್ಲಾಘನೀಯ.  

       ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚ ಕಡಿಮೆ ಆಗುವುದರ ಜೋತೆಗೆ ಆರ್ಥಿಕ ಹೊಣೆ ಕಡಿಮೆಯಾಗಿ ಸುಮಧರ ಜೀವನ ಸಾಗಿಸಲು ಸಾಧ್ಯವೆಂದರು. ಯಲಬುರ್ಗಾದ  ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನಿಡಗುಂದಿಕೊಪ್ಪದ ಚನ್ನಬಸವ ಸ್ವಾಮಿಗಳು, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು ಮಾತನಾಡಿ ಕರಮುಡಿ ಗ್ರಾಮ ಕಲೆ ಮತ್ತು ಸಾಹಿತ  ಸಂಸ್ಕೃತಿಗಳ ತವರೂರಾಗಿದೆ ಎಂದರು. ಕರಮುಗಿದು ಬರುವ ಗ್ರಾಮ ಇದಾಗಿದೆ ಎಂದರು. ಮಲ್ಲಾಪೂರದ ಬಸಯ್ಯಸ್ವಾಮಿಗಳು, ಜಿ.ಪಂ.ಮಾಜಿ ಸದಸ್ಯೆ ಶಕುಂತಲಾ ಪಾಟೀಲ, ಗ್ರಾಪಂ ಮಾಜಿ ಸದಸ್ಯರಾದ ವೀರಣ್ಣ ನಿಂಗೋಜಿ, ಶಿವಪುತ್ರ​‍್ಪ ಮಲಿಗೋಡದ, ವಿರುಪಾಕ್ಷಪ್ಪ ಉಳ್ಳಾಗಡ್ಡಿ, ಶ್ಯಾಮೀದಸಾಬ್ ಮುಲ್ಲಾ , ವೀರಣ್ಣ ಮಾನಶೆಟ್ಟಿ, ಡಾ. ಕಳಕಪ್ಪ ಅಬ್ಬಿಗೇರಿ, ಶಿವಪ್ಪ ಉಳ್ಳಾಗಡ್ದಿ, ಬಸವರಾಜ ಬಲಕುಂದಿ, ಕರಿಬಸಯ್ಯ ಶಾಸ್ತ್ರಿಗಳು, ವಿನಯ ಪಾಟೀಲ, ದ್ಯಾಮಣ್ಣ ಬಡಿಗೇರ ಇನ್ನು ಮುಂತಾದವರು ಇದ್ದರು. ಸಾಯಂಕಾಲ ರಥೋತ್ಸವ ಜರುಗಿತು. ಗಂಗಪ್ಪ ಹವಳಿ ನಿರೂಪಿಸಿದರು. ವೀರಣ್ಣ ಅಬ್ಬಿಗೆರಿ ವಂದಿಸಿದರು. 


ಸುದ್ದಿ ಓದಿ