ಸಂಕೇಶ್ವರದ ನಡುರಸ್ತೆಯಲ್ಲಿ ಬೆಂಕಿ ಹತ್ತಿ ಉರಿದ ಮಾರುತಿ ಓಮಿನಿ ವ್ಯಾನ್ : ವಾಹನ ಬಿಟ್ಟು ಓಡಿದ ಚಾಲಕ ಪ್ರಾಣಾಪಾಯದಿಂದ ಪಾರು

ಸಂಕೇಶ್ವರದ ನಡುರಸ್ತೆಯಲ್ಲಿ ಬೆಂಕಿ ಹತ್ತಿ ಉರಿದ ಮಾರುತಿ ಓಮಿನಿ ವ್ಯಾನ್ : ವಾಹನ ಬಿಟ್ಟು ಓಡಿದ ಚಾಲಕ ಪ್ರಾಣಾಪಾಯದಿಂದ ಪಾರು

ಸಂಕೇಶ್ವರ, ಆ, 5 : ಸಂಚರಿಸುತ್ತಿದ್ದ ಮಾರುತಿ ಓಮಿನಿ ವ್ಯಾನ್ ಒಂದು ಬೆಂಕಿ ಹೊತ್ತಿಕೊಂಡು ನಡುರಸ್ತೆಯಲ್ಲಿ ಉರಿದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

     ನಗರದ ಬಸ್ ನಿಲ್ದಾಣ ಹತ್ತಿರ ಸಂಚರಿಸುತ್ತಿದ್ದ ಮಾರುತಿ ಓಮಿನಿ ವ್ಯಾನ್ ನಲ್ಲಿ ಆಕಸ್ಮಿಕ ವಾಗಿ ಬೆಂಕಿ ಕಾನಿಸಿಕೊಂಡಿದೆ. ಇದನ್ನು ಕಂಡ ಓಮಿನಿ ಚಾಲಕ ವಾಹನವನ್ನು ಬಿಟ್ಟು ಹೊರಗೆ ಓಡಿ ಹೋಗಿದ್ದಾನೆ. 

   ಒಮಿನಿ ವಾಹನದಲ್ಲಿ ಚಾಲಕನ ಹೊರತುಪಡಿಸಿ ಮತ್ತೆ ಬೇರೆ ಯಾರು ಇದ್ದಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಾಲಕ ವಾಹನ ಬಿಟ್ಟು ಓಡಿ ಹೋದ ಹಿನ್ನೆಲೆಯಲ್ಲಿ ಯಾವ ಪ್ರಾಣ ಹಾನಿ ಸಂಭವಿಸಿಲ್ಲ. 

   ಈ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನೊಂದಿಸಲು ಶ್ರಮಪಟ್ಟರು. ಆದರು ಓಮಿನಿ ವಾಹನ ಸಂಪೂರ್ಣ ಅಗ್ನಿಗೆ ಆಹುತಿಯಾಗಿದೆ.

ಸುದ್ದಿ ಓದಿ