ರಬಾಕಾವಿಬನಹಟ್ಟಿ

ಯಲ್ಲಟ್ಟಿ ಗ್ರಾಮದಲ್ಲಿ ಮಾರುತೇಶ್ವರ ಹಾಲೋಕಳಿ

ಯಲ್ಲಟ್ಟಿ ಗ್ರಾಮದಲ್ಲಿ ಮಾರುತೇಶ್ವರ ಹಾಲೋಕಳಿ

ಲೋಕದರ್ಶನ ವರದಿ 

ರಬಕವಿ-ಬನಹಟ್ಟಿ 26: ಸಮೀಪದ ಯಲ್ಲಟ್ಟಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರೆ ನಿಮಿತ್ಯ ಗ್ರಾಮೀಣ ಪರಂಪರೆಯನ್ನು ಬಿಂಬಿಸುವ ಸಂಭ್ರಮದ ಹಾಲೋಕಳಿ ಕಾರ‌್ಯಕ್ರಮ ಜರುಗಿತು.  

ಸಂಜೆ ಜರುಗಿದ ಹಾಲೋಕಳಿ ಸಂದರ್ಭದಲ್ಲಿ ಹಾಲಗಂಬ ಏರಲು ಅನೇಕ ಯುವಕರು ಹರಸಹಾಸ ಮಾಡಿದರು. ಇವರು ಹಾಲಗಂಬ ಏರುತ್ತಿದ್ದಂತೆ ಮೇಲೆ ಕುಳಿತವರೊಬ್ಬರು ಕಂಬ ಜಾರಲೆಂದೇ ಹಾಲು, ತುಪ್ಪ, ಬಾಳೆಹಣ್ಣಿನ ರಸ್ ಸೇರಿದಂತೆ ಇನ್ನೀತರ ಜಾರುವ ಪದಾರ್ಥಗಳನ್ನು ಏರಚುತ್ತಾರೆ. ಇವೆಲ್ಲವನ್ನು ದಿಕ್ಕರಿಸಿ ಯುವಕರು ಕೊನೆಗೂ ಮೇಲೇರಿ ಯಶಸ್ಸು ಕಂಡರು. 

ಊರಿನ ಪ್ರಮುಖರಾದ ರಾಚಯ್ಯ ಹಿರೇಮಠ, ಬಾಬಣ್ಣಗೌಡ ಪಾಟೀಲ, ಚನ್ನಪ್ಪ ಮಗದುಮ್, ವಸಂತ ಪಾಟೀಲ, ಗುರುಪಾದ ಕಿತ್ತೂರ, ಬಸಪ್ಪ ಸೊಡ್ಡಗಿ, ಸುರೇಶ ಮೋಪಾಗರ, ಸದಾಶಿವ ಬಳವಾಡ, ಪದ್ಮಣ್ಣ ಕಾಸರ, ಆಲಪ್ಪ ಮಗದುಮ್, ಗಂಗಯ್ಯ ಮಠಪತಿ,ಬಸಪ್ಪ ಝಳಕಿ, ಗುರುಪಾದ ಮೊಪಗಾರ, ಸಿದ್ದಪ್ಪ ಮದರಖಂಡಿ, ಸತ್ಯಪ್ಪ ಮನಗುಳಿ, ಶಂಕರ ಸಂತಿ ಮತ್ತು ಓಕಳಿ ಕಮಿಟಿಯ ಎಲ್ಲ ಹಿರಿಯರು ಹಾಗೂ ಸಮಸ್ತ ಯಲ್ಲಟ್ಟಿ ಗ್ರಾಮಸ್ಥರು ಇದ್ದರು. ಓಕಳುಇಯ ನಿಮಿತ್ಯ ನಾಟಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಜರುಗಿದವು. 


ಸುದ್ದಿ ಓದಿ