ಸಾಲಮುಕ್ತ ಕಾರ್ಖಾನೆಯನ್ನಾಗಿಸಿದ್ದು ಸಾಧನೆ: ಶಾಸಕ ಯಾದವಾಡ
ರಾಮದುರ್ಗ: 28.75 ಕೋಟಿ ಇದ್ದ ಸಾಲವನ್ನು ಪಾವತಿಸಿ ಕೇವಲ 5 ವರ್ಷದಲ್ಲಿ ಸಾಲಮುಕ್ತ ಕಾರ್ಖಾನೆಯನ್ನಾಗಿಸಿ, ಪ್ರತಿ ಶೆರ್‌ದಾರರಿಗೂ 1 ಕ್ವಿಂಟಲ್ ಗುಣಮಟ್ಟದ ಸಕ್ಕರೆಯನ್ನು ಪ್ರತಿ ವರ್ಷವು ನೀಡಲಾಗುತ್ತದೆ ಇದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಶಾಸಕ ಹಾಗೂ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಹೇಳಿದರು.
ಇದೆ ತಿಂಗಳ ದಿ. 24 ರಂದು ನಡೆಯುವ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಚುನಾವಣೆಗೆ ರೈತ ಪೆನಲ್‌ದಿಂದಾ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು ಪ್ರತಿ ವರ್ಷ ಕರೆದ ಸಾಮಾನ್ಯ ಸಭೆಗೆ ಹಾಜರಾಗಲು ಎಲ್ಲ ಶೇರದಾರರಿಗೆ ಮನವಿ ಮಾಡಿ ಪತ್ರ ವ್ಯವಹಾರವನ್ನು ಮಾಡಿದ್ದರು ಬಹಳಷ್ಟು ಜನ ಹಾಜರಾಗಿದೆ ಇದ್ದದ್ದರಿಂದಾ ಮತದಾನದಿಂದಾ ವಂಚಿತರಾಗಿದ್ದಾರೆ, ವೈದ್ಯನಾಥ ವರದಿ ಪ್ರಕಾರ ಶೆರದಾರರು ಕನಿಷ್ಠ 5 ವರ್ಷದಲ್ಲಿ ಮೂರ ಭಾರಿಯಾದರೂ ಸಾಮಾನ್ಯ ಸಭೆಗೆ ಹಾಜರಾಗಿ ತಮ್ಮ ಸಹಿ ಮಾಡಿದರೆ ಮಾತ್ರ ಮತ ಚಲಾವಣೆಯ ಹಕ್ಕು ಇರುತ್ತದೆ ಹಾಗಾಗಿ ಕೇವಲ 4500 ಜನ ಮಾತ್ರ ಮಹದಾನದ ಹಕ್ಕು ಪಡೆದಿದ್ದಾರೆ ಎಂದು ನುಡಿದರು.
ಶಾಸಕ ಮಹಾದೇವಪ್ಪ ಯಾದವಾಡರ ರೈತ ಪೆನಲದಿಂದಾ ಒಟ್ಟು 16 ಜನ ಮತ್ತು 1 ಪಕ್ಷೇತರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾಣಾಧಿರಿ ಗೀರಿಶ ಸ್ವಾದಿ ತಿಳಿಸಿದರು.
ಅ ವರ್ಗದ ಕಬ್ಬು ಬೆಳೆಗಾರರ ಸಾಮಾನ್ಯ ಮತಕ್ಷೇತ್ರ. ಮಹಾದೇವಪ್ಪ