ಎಲಬುರ್ಗ

ಸರ್ಕಾರದ ಯೋಜನೆ ಸದುಪಯೋಗ ಮಾಡಿಕೊಳ್ಳಿ

ಸರ್ಕಾರದ ಯೋಜನೆ ಸದುಪಯೋಗ ಮಾಡಿಕೊಳ್ಳಿ

ಯಲಬುರ್ಗಾ ಡಿಸೆಂಬರ್.೨೩: ಮಹಿಳೆಯರಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಅನೇಕ ಸೌಲಭ್ಯಗಳಿದ್ದು, ಸಂಬAದಿಸಿದವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಇಲಾಖೆಯ ಜಿಲ್ಲಾ ಸಂಯೋಜಕಿ ಸರಸ್ವತಿ ತಿಳಿಸಿದರು.

ಪಟ್ಟಣದ ೧ನೇ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡ ತೀರ ಅಪೌಷ್ಟಿಕತೆಹೊಂದಿದ ಮಕ್ಕಳ ಅಭಿವೃದ್ದಿಗೆ ನಮ್ಮ ಇಲಾಖೆಯಿಂದ  ಅನೇಖ ಸೌಲಭ್ಯಗಳನ್ನು ನೀಡುತ್ತಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಶೂನ್ಯವಾಗಲು ನಮ್ಮ ಸಿಬ್ಬಂದಿಗಳು, ಸಹಾಯಿಕಿಯರು ಪ್ರಾಮಾಣಿಕೆಯತೆಯಿಂದ ಸೇವೆ ಸಲ್ಲಿಸಬೇಕು. ಅಂದಾಗ ಮಾತ್ರ ಇದನ್ನು ಹೊಡೆದೋಡಿಸಲು ಸಾಧ್ಯ ಎಂದರು.

ಮಹಿಳಾ ಶಕ್ತಿ ಕೇಂದ್ರ ಕೌಶಲ್ಯ ಅಭಿವೃದ್ಧಿ, ಉದ್ಯೋಗ ಡಿಜಿಟಲ್ ಸಾಕ್ಷರತೆ, ಆರೋಗ್ಯ ಮತ್ತು ಪೌಷ್ಠಿಕತೆಗಳ ಮೂಲಕ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಬಂದೇ ಕಡೆ ಎಲ್ಲಾ ಸೇವೆಗಳನ್ನು ನೀಡುವ ಉದ್ದೇಶದಿಂದ ಮಹಿಳಾ ಶಕ್ತಿಕೇಂದ್ರ ಯೋಜನೆಯಾಗಿದೆ. ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ದೂರದೃಷ್ಠಯ ಹಿನ್ನೆಲೆಯಲ್ಲಿ, ಇಲಾಖೆಯು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಜಾರಿಯಲ್ಲಿರುವ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿ ಶ್ರಮಿಸುತ್ತಿದೆ. ಈ ಶ್ರಮವು ದೇಶದ ಮುಂದಿನ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಪ್ರಯೋಜನವಾಗಿದೆ.

ಈ ಸಂದರ್ಭದಲ್ಲಿ ಹಿರಿಯಾ ಕಾರ್ಯಕರ್ತೆ ಯೊಧ ಪಾರ್ವತಿ ಚಲವಾದಿ, ಶಾಂತಾ ಹಡಪದ, ಗೌರಮ್ಮ ಬೇಲೇರಿ, ನಾಗರತ್ನ , ಗವಿಸಿದ್ದಮ್ಮ ಕೊಡಗಲಿ, ಪ್ರೇಮಾ ಹುಬ್ಬಳ್ಳಿ, ಸುನಿತಾ, ಅನುಸೂಯಾ ಚವಡಿ, ಮೂಹನ್‌ಪಾಶಾ, ಯಮನಮ್ಮ ಲಂಗಟಿ, ಸುವರ್ಣಾ ಸಾಲಿಮಠ,  ಸಾವಿತ್ರಿ ಅಂಬ್ಲಿ, ದ್ರಾಕ್ಷಾಯಿಣಿ ಡಂಬಳ, ಮತ್ತು ಇತರರು ಇದ್ದರು

ಸುದ್ದಿ ಓದಿ