ಸೇವಾ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಿ : ಕಮಲ್ಸಿಂಗ್
ಮಹಾಲಿಂಗಪುರ: ಗ್ರಾಮೀಣ ಭಾಗದ ಜನರಿಗೆ ಅನುಕೂಲ ಹಾಗೂ ಬ್ಯಾಂಕ್ನಲ್ಲಿ ಜನದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಟ್ಟಣಗಳಲ್ಲಿ ಅಲ್ಲಲ್ಲಿ ಎಸ್ಬಿಐ ಗ್ರಾಹಕ ಸೇವಾ ಕೆಂದ್ರಗಳನ್ನು ತೆರೆದು ಸೇವೆ ನೀಡುತ್ತಿದೆ ಎಂದು ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖಾ ವ್ಯವಸ್ಥಾಪಕ ಕಮಲ್ಸಿಂಗ್ ಕಿಚ್ಚಿ ಹೇಳಿದರು.
ಪಟ್ಟಣದ ಅಂಗಡಿಯವರ ಜಾಗೆಯ ಎಸ್ಬಿಐ ಗ್ರಾಹಕ ಸೇವಾ ಕೆಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಬ್ಯಾಂಕ್ ಸೌಲಭ್ಯಗಳ ತಿಳಿವಳಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟಣದ ಸುತ್ತಮುತ್ತ ಇರುವ ರನ್ನಬೆಳಗಲಿ, ಕೆಸರಗೊಪ್ಪ, ನಾಗರಾಳ, ಚಿಮ್ಮಡ, ಕುಲಗೋಡ ಗ್ರಾಮಗಳಲ್ಲಿಯೂ ಕೂಡ ಎಸ್ಬಿಐ ತನ್ನ ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆದಿದೆ. ಹೊಸದಾಗಿ ವ್ಯಾಪಾರು ವಹಿವಾಟು ಮಾಡುವವರಿಗೆ 2 ಲಕ್ಷ ರೂ. ವರೆಗೆ ಸಾಲ ನೀಡಲಾಗುವುದು ಎಂದರು.
ಗ್ರಾಹಕ ಸೇವಾ ಕೆಂದ್ರದ ಕೋ-ಆರ್ಡಿನೇಟರ್ ಸದಾಶಿವ ಬಿರಾದಾರ ಮಾತನಾಡಿ, ಬಡವರ ಮನೆಗಳಿಗೆ ಬ್ಯಾಂಕ್ ಸೌಲಭ್ಯ ಸಿಗಬೇಕೆನ್ನುವ ದೃಷ್ಟಿಯಿಂದ ಸರ್ಕಾರ ಸೇವಾ ಕೇಂದ್ರಗಳನ್ನು ತೆರೆದಿದೆ. ಗ್ರಾಹಕರು ಅಲ್ಲಿ ತಮ್ಮ ಹಣ ಕಟ್ಟವುದು, ಚೆಕ್ ನೀಡುವುದು ಮತ್ತು ತಮ್ಮ ಹಣವನ್ನೂ ಸಹ ತೆಗೆದುಕೊಳ್ಳಬಹುದು. ಅಟಲ್ ಪೆನಷನ್, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಗಳ ಬಗ್ಗೆ ಗ್ರಾಹಕರಿಗೆ ವಿವರವಾಗಿ ಮಾಹಿತಿ ನೀಡಿದರು.
ಪುರಸಭೆ ಸದಸ್ಯ ಶೇಖರ ಅಂಗಡಿ, ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿ ಬ್ಯಾಂಕ್ ಮಾಡಿರುವ ಈ ವ್ಯವಸ್ಥೆಯಿಂದ ಸಣ್ಣಪುಟ್ಟ ವ್ಯವಹಾರದಾರರು ಕೂಗಳತೆಯಲ್ಲಿ ಹಣಕಾಸಿನ ಲೇವಾದೇವಿ ಮಾಡಬಹುದು ಎಂದರು.
ಗ್ರಾಹಕ ಸೇವಾ ಕೇಂದ್ರದ ಪೂರ್ಣಾನಂದ ಹುಲ್ಲೂರ ಮತ್ತು ಸಂಜು ಅಂಗಡಿ, ತಿಪ್ಪಣ್ಣ ಬಂಡಿವಡ್ಡರ, ಶ್ರೀಶೈಲ ದೊಡಮನಿ, ಶಿವಯ್ಯ ಮಠದ, ಮಹೇಶ ಆರಿ, ಎಸ್.ಎಸ್.ಈಶ್ವರ್ಪಗೋಳ, ಮೀರಾ ತಟಗಾರ, ಶಿವಯ್ಯ ಮಠದ, ನಾಗಲಿಂಗ ಬಡಿಗೇರ, ಹಣಮಂತ ನಾವಿ, ಸಾಗರ ಹಲಸಪ್ಪಗೋಳ, ಚನ್ನಪ್ಪ ಪಟ್ಟಣಶೆಟ್ಟಿ, ಅಶೋಕ ಅಂಗಡಿ ಇದ್ದರು.