ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಿ, ಉತ್ತಮ ಪ್ರಜೆಯನ್ನಾಗಿಸಿ: ಕುದರಿಮೋತಿ ಸ್ವಾಮೀಜಿ
ಯಲಬುರ್ಗಾ 18: ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಂಸ್ಕಾರನ್ನಾಗಿ ಮಾಡಿ, ನಾಡಿಗೆ ಉತ್ತಮ ಪ್ರಜೆಯನ್ನಾಗಿಸುವಲ್ಲಿ ತಂದೆ ತಾಯಿಗಳು ಮುಂದೆ ಬರುವಂತೆ ಕುದರಿಮೋತಿಯ ಮೈಸೂರು ಸಂಸ್ಥಾನಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಶಿರಗುಂಪಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಏಳನೇ ವರ್ಷದ ಕರಿಬಸವೇಶ್ವರ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ, ಪುರಾಣ ಮಹಾ ಮಂಗಲೋತ್ಸವ, ಮತ್ತು ನೂತನವಾಗಿ ನಿರ್ಮಾಣವಾಗಿರುವ ಮಹಾ ರಥೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಶ್ರೀಗಳು, ತಾನು ಗಳಿಸಿದ ಹಣದಲ್ಲಿ ಮಠ ಮಂದಿರಗಳಿಗೆ ದಾನ ಮಾಡುವ ಪ್ರವೃತ್ತಿ ಪ್ರತಿಯೊಬರಲ್ಲಿ ಬರಬೇಕು ಎಂದರು.
ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮಲ್ಲಿ ಪರಿಶುದ್ದ ಭಕ್ತಿ, ಧಾರ್ಮಿಕತೆ ಬರಬೇಕು. ಧರ್ಮದ ತಳಹದಿಯಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದರು. ಜಿಗೇರಿಯ ಹಿರೇಮಠದ ಗುರುಸಿದ್ದೇಶ್ವರ ಸ್ವಾಮೀಜಿ, ಮಾತೋಶ್ರೀ ನೀಲಮ್ಮ ಹೂಗಾರ, ಬಸಮ್ಮ ಹೂಗಾರ ಸಾನಿಧ್ಯ ವಹಿಸಿದ್ದರು. ಯಲಬುರ್ಗಾದ ಸಪ್ರದ ಕಾಲೇಜಿನ ಪ್ರಾಚಾರ್ಯ ಡಾ,ಶಿವರಾಜ ಗುರಿಕಾರ, ಶಿವಪುತ್ರಯ್ಯ ಹಿತ್ತಲಮನಿ, ಶರಣಪ್ಪ ಹೂಗಾರ, ಬಸವರಾಜ ಕಮ್ಮಾರ, ಬೈರಪ್ಪ ಹಿರೇಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.