ಸಿರುಗುಪ್ಪ

ಮಕ್ಕಳಲ್ಲಿ ಪತ್ರಿಕೆ ಪುಸ್ತಕ ಓದುವ ಹವ್ಯಾಸ ಬೆಳೆಸಿ: ಅಬ್ದುಲ್ ನಬಿ

ಮಕ್ಕಳಲ್ಲಿ ಪತ್ರಿಕೆ ಪುಸ್ತಕ ಓದುವ ಹವ್ಯಾಸ ಬೆಳೆಸಿ: ಅಬ್ದುಲ್ ನಬಿ

ಲೋಕದರ್ಶನ ವರದಿ 

ಸಿರುಗುಪ್ಪ 15: ಮಕ್ಕಳಲ್ಲಿ ದಿನಪತ್ರಿಕೆ ಗ್ರಂಥ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸಾಕ್ಷರತಾ ಸೇನಾನಿ ಹಾಗೂ ಸಾರ್ವಜನಿಕ ಗ್ರಂಥಾಲಯ ಸಲಹಾ ಸಮಿತಿ ಸದಸ್ಯ ಎ.ಅಬ್ದುಲ್ ನಬಿ ಹೇಳಿದರು.  


ಇಬ್ರಾಹಿಮ್ ಮಂಜಿಲ್ ನಲ್ಲಿ ಅವರು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ  ನವೆಂಬರ್ 14ರಿಂದ 20ರ ವರೆಗೆ ನಡೆಯುವ ದಿನವನ್ನು ನೆನಪಿಸಿ ಅವರು ಮಾತನಾಡುತ್ತಾ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಸಂಡೂರು, ಕುರುಗೋಡು, ತಾಲ್ಲೂಕುಗಳು ವಿಜಯನಗರ ಜಿಲ್ಲೆಯ ಹೊಸಪೇಟೆ ಕೂಡ್ಲಿಗಿ ಹರಪನಹಳ್ಳಿ ಹಡಗಲಿ ಹಗರಿಬೊಮ್ಮನಹಳ್ಳಿ ಕೊಟ್ಟೂರು ತಾಲ್ಲೂಕುಗಳ ಸಾರ್ವಜನಿಕ ಗ್ರಂಥಾಲಯಗಳಲ್ಲಿ ನಡೆಯುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಪತ್ರಿಕೆ ಪುಸ್ತಕಗಳು ಪ್ರದರ್ಶನಕ್ಕೆ ಕಾರ್ಯಕ್ರಮ ಆರಂಭಿಸಿದೆ. ಜಿಲ್ಲಾ ಉಪನಿರ್ದೇಶಕರು ಪ್ರಕಟಿ ಸಿದ್ದಾರೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಸಪ್ತಾಹವನ್ನು ಯಶಸ್ವಿ ಗೊಳಿಸಬೇಕು ಎಂದು ಅಬ್ದುಲ್ ನಬಿ ಅವರು  ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಶುಭಾಶಯ ತಿಳಿಸಿದ್ದಾರೆ. 


ಸುದ್ದಿ ಓದಿ