ಎಲಬುರ್ಗ

ಮೈಲಾರಗೌಡ ಶಾಂತಗೇರಿಗೆ ಸನ್ಮಾನ

ಮೈಲಾರಗೌಡ ಶಾಂತಗೇರಿಗೆ ಸನ್ಮಾನ

ಲೋಕದರ್ಶನ ವರದಿ

ಯಲಬುರ್ಗಾ  24: ಕರಮುಡಿ ಗ್ರಾಮದ ಸಮಾಜ ಸೇವಕ ಮೈಲಾರಗೌಡ ಶಾಂತಗೇರಿ ಇವರ ಸಮಾಜ ಸೇವೆ ಹಾಗೂ ಇವರ ಕಾಯಕ ನಿಷ್ಠೆಗೆ ಮೆಚ್ಚಿ ವಿಶ್ವದರ್ಶನ ಪತ್ರಿಕಾ ಬಳಗದ ವತಿಯಿಂದ 22 ರಂದು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಮೈಲಾರಗೌಡ ಶಾಂತಗೇರಿ ಇವರು ತಮಗೆ ದೊರೆತಿರುವ ಸನ್ಮಾನ ಮತ್ತು ಪುರಸ್ಕಾರ ನನ್ನನ್ನು ಮತ್ತಿಷ್ಟು ಸಮಾಜ ಸೇವೆ ಮಾಡಬೇಕೆಂಬ ಬಯಕೆ ಮೂಡಿದೆ ಎಂದರು. ಈ ಸಂದರ್ಭದಲ್ಲಿ ಕರಮುಡಿಯ  ಗ್ರಾಮ ಪಂಚಾಯತಿ ಸದಸ್ಯರಾದ ರಾಮಣ್ಣ ಪ್ರಭಣ್ಣವರ, ಕಾಂಗ್ರೇಸ್ ಮುಖಂಡ ಕಳಕಪ್ಪ ಸಿದ್ದಪ್ಪ ಕುರಿ, ನೀಲಪ್ಪ ಡಿ. ದುಡದಣ್ಣವರ, ಪರಸಪ್ಪ ಗಡ್ಡದ, ಇನ್ನಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ