ಎಲಬುರ್ಗ

ಜಿಲ್ಲಾಧ್ಯಕ್ಷರಾಗಿ ಮಹೇಶ ಆಯ್ಕೆ

ಜಿಲ್ಲಾಧ್ಯಕ್ಷರಾಗಿ ಮಹೇಶ ಆಯ್ಕೆ

ಯಲಬುರ್ಗಾ 28: ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಪಟ್ಟಣದ ಉದ್ಯಮಿ, ಯುವ ಮುಖಂಡ ಮಹೇಶ ಭೂತೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ ತಿಳಿಸಿದ್ದಾರೆ. 

ನೂತನ ಜಿಲ್ಲಾಧ್ಯಕ್ಷ ಮಹೇಶ ಭೂತೆ ಮಾತನಾಡಿ ಸಮಾಜದ ಯುವಕರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇನೆ. ಸಮಾಜಕ್ಕೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಹಲವಾರು ಮಹನೀಯರು ಸಮಾಜವನ್ನು ಕಟ್ಟಿ ಬೆಳಸಿದ್ದಾರೆ ಸಮುದಾಯದ ಹೋರಾಟ,ಕಾರ್ಯಗಳಿಗೆ ಪ್ರತಿಯೊಬ್ಬರು ಸದಾ ಸಿದ್ದರಾಗಿರಬೇಕು ಎಂದರು. 

ಯುವ ಘಟಕದ ರಾಜ್ಯ ಅಧ್ಯಕ್ಷ ದೇವರಾಜ ಹಾಲಸಮುದ್ರ, ಶರಣಪ್ಪ ಹ್ಯಾಟಿ, ಕೊಟ್ರೇಶ ಕಿಚಡಿ, ಪ್ರಭುಗೌಡ ಪಾಟೀಲ, ಬಸವರಾಜ ನಿಂಗೋಜಿ ಇತರರು ಇದ್ದರು. 


ಸುದ್ದಿ ಓದಿ