ಮಹರ್ಷಿ ವಾಲ್ಮೀಕಿ ರಾಮಾಯಣ ಅಪ್ರತಿಮ: ಎಸ್ಪಿಬಿ ಮಹೇಶ
ಉಗರಗೋಳ 17: ಮಹಾಕವಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಅಂದಿನಿಂದ ಇಂದಿನವರೆಗೂ ಜಗತ್ತಿನಾದ್ಯಂತ ಅಪ್ರತಿಮವಾಗಿದೆ. ನಾರದ ಮುನಿಗಳಿಂದ ಆಶಿರ್ವಾದ ಪಡೆದುಕೊಂಡ ಮಹಾಕವಿ ಮಹರ್ಷಿ ವಾಲ್ಮೀಕಿಯವರ ಚರಿತ್ರೆ ಅದ್ವೀತಿಯ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ ಹೇಳಿದರು.
ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಮಹಾಕವಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಅಂಗವಾಗಿ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸುಸಂಸ್ಕೃತಿಗೆ ಹೆಸರಾದ ರಾಮಾಯಣ, ಮಹಾಭಾರತದಂತಹ ಗ್ರಂಥಗಳು ಜಗದ್ವಿಖ್ಯಾತಿ ಪಡೆದುಕೊಂಡಿವೆ ಎಂದರು.
ಅಲ್ಲಮಪ್ರಭು ಪ್ರಭುನವರ, ಸಿ ಎನ್ ಕುಲಕರ್ಣಿ, ಆರ್ ಎಚ್ ಸವದತ್ತಿ, ಜಗದೀಶ ರೇವಣ್ಣವರ, ಬಸವರಾಜ ಗುಜನಾಳ, ಆನಂದ ಗೊರವನಕೊಳ್ಳ, ಅನೀಲ ಗುಡಿಮನಿ, ಡಿ ಡಿ ನಾಗನಗೌಡ, ಕುಮಾರ ಗಾಣಿಗೇರ, ಪಂಡಿತ ಯಡೂರಯ್ಯ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.