ಮಹಾರಾಷ್ಟ್ರದಲ್ಲಿ ಕರ್ನಾಟಕದ ಸಾರಿಗೆ ಸಂಸ್ಥೆಯ ಬಸ್ ಗಳ ಮೇಲೆ ಮರಾಠಿ ಭಾಷೆಯ ಬರಹಗಳನ್ನು ಬರೆದು ಪುಂಡಾಟ ಮೆರೆದ ಝಾಪಾಗಳು

ಮಹಾರಾಷ್ಟ್ರದಲ್ಲಿ ಕರ್ನಾಟಕದ ಸಾರಿಗೆ ಸಂಸ್ಥೆಯ ಬಸ್ ಗಳ ಮೇಲೆ ಮರಾಠಿ ಭಾಷೆಯ ಬರಹಗಳನ್ನು ಬರೆದು ಪುಂಡಾಟ ಮೆರೆದ ಝಾಪಾಗಳು

ಬೆಳಗಾವಿ, ನ, 25 : ಗಡಿ ಜಿಲ್ಲೆ ಬೆಳಗಾವಿಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಇಂಗು ತಿಂದ ಮಂಗನಂತಾಗಿರುವ ಎಮ್ ಇ ಎಸ್ ತೆಪ್ಪಗೆ ಇದ್ಸರೆ ಅತ್ತ ಮಹಾರಾಷ್ಟ್ರದಲ್ಲಿ‌ ಕೆಲ ಪುಂಡರು ಕರ್ನಾಟಕ ರಾಜ್ಯ ಸಾರಿಗೆ ಬಸ್ ಗಳ ಮೇಲೆ ಜೈ‌ ಮಹಾರಾಷ್ಟ್ರ ಎಂದು ಬರೆಯುವ ಮೂಲಕ ಪುಂಡಾಟ ನಡೆಸಿದ್ದಾರೆ.


   ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗೆ ಕಪ್ಪು ಮಸಿ ಬಳಿದು ಕೆಲವು ಮರಾಠಿ ಭಾಷಿಕರು ಮತ್ತೆ ತಮ್ಮ ಪುಂಡಾಟಿಕೆ ಮುಂದುವರಿಸಿದ್ದಾರೆ.  ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ನಿಪ್ಪಾಣಿ ಘಟಕಕ್ಕೆ ಸೇರಿದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರಿಂದ ಮಸಿ ಬಡಿದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಕಳೆದ ದಿನನದ ಹಿಂದೆ ಸಿಎಂ ಬೊಮ್ಮಾಯಿ ಜತ್ತ ತಾಲೂಕಿನ 40 ಗ್ರಾಮ ಕರ್ನಾಟಕಕ್ಕೆ ಸೇರಬೇಕೆಂದು ಠರಾವು ಹೊರಡಿಸಿದ್ದರು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಕರುನಾಡಿನ ಬಸ್ಸಿನ ಮೇಲೆ ಜೈ ಮಹಾರಾಷ್ಟ್ರ ಎಂದು ಬರವಣಿಗೆ ಬರೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗುತ್ತಿದ್ದಾರೆ ಮಹಾ ಪುಂಡರು. 


ಸುದ್ದಿ ಓದಿ