ಮಹಾನಟಿ ಜಯಂತಿಯವರದು ಮಗುವಿನಂತಹ ಮನಸ್ಸು : ನಟ ಜಗ್ಗೇಶ್

ಮಹಾನಟಿ ಜಯಂತಿಯವರದು ಮಗುವಿನಂತಹ ಮನಸ್ಸು : ನಟ ಜಗ್ಗೇಶ್

ಬೆಂಗಳೂರು, ಜುಲೈ 26  ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಅವರ ನಿಧನಕ್ಕೆ ಸಿನಿಮಾ ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
 
ಹಿರಿಯ ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿ ಭಾವುಕರಾಗಿದ್ದಾರೆ. ಕೆಲವೊಮ್ಮೆ ನನ್ನ ಹಾಸ್ಯಕಂಡು ಮಗುವಂತೆ ನಗುತ್ತಿದ್ದರು. ಹೋದ ಅನೇಕ ಹಿರಿನಟರ ಸಾಲಿಗೆ ಜಯಮ್ಮ ಸೇರಿಬಿಟ್ಟರು. ನಿಮ್ಮ ಆತ್ಮ ಶಾರದೆಯಲ್ಲಿ ಲೀನವಾಗಲಿ. loveyou ಅಮ್ಮ ಎಂದು ಹೇಳಿದ್ದಾರೆ.
 
ಸಾಲು ಸಾಲು ಟ್ವೀಟ್ ಗಳನ್ನು ಮಾಡಿರುವ ಜಗ್ಗೇಶ್, "ಆನಂದಿಸಿ you are my favorite actor ಎಂದು ಮುತ್ತಿಕ್ಕಿದ್ದರು. ಕೆಲವೊಮ್ಮೆ ನನ್ನ ಹಾಸ್ಯಕಂಡು ಮಗುವಂತೆ ನಗುತ್ತಿದ್ದರು. ಮನಸ್ಸು ಮಗುವಂತೆ.  ಇಂದು ಆ ಮಹಾನಟಿ ಇಲ್ಲಾ ಎಂದಾಗ ಮನಸ್ಸಿಗೆ ನೋವಾಯಿತು. ಹೋದ ಅನೇಕ ಹಿರಿನಟರ ಸಾಲಿಗೆ ಜಯಮ್ಮ ಸೇರಿಬಿಟ್ಟರು. ನಿಮ್ಮ ಆತ್ಮ ಶಾರದೆಯಲ್ಲಿ ಲೀನವಾಗಲಿ. loveyou ಅಮ್ಮ" ಎಂದಿದ್ದಾರೆ.
 
 
 
-ಡಾ. ರಾಜ್ ಜತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ!
 
1963ರಲ್ಲಿ ತೆರೆಕಂಡ 'ಜೇನು ಗೂಡು' ಕನ್ನಡದಲ್ಲಿ ಜಯಂತಿ ಅವರ ಮೊದಲ ಚಿತ್ರ.
 
ರಾಜ್ ಕುಮಾರ್ ಜೊತೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಖ್ಯಾತಿ ಜಯಂತಿ ಅವರದ್ದು. ಪಂಡರಿಬಾಯಿ, ಲೀಲಾವತಿ, ಭಾರತಿ, ಕಲ್ಪನಾ, ಬಿ ಸರೋಜಾದೇವಿ, ಆರತಿ ಹೀಗೆ ಅನೇಕ ನಟಿಯರು ವರನಟನ ಜೊತೆ ನಟಿಸಿದ್ದರೂ, ಜಯಂತಿ ಸ್ವಲ್ಪ ವಿಶೇಷ ಮತ್ತು ವಿಶಿಷ್ಠ ಎನಿಸಿಕೊಂಡಿದ್ದರು.
 
ಸಾಮಾನ್ಯವಾಗಿ ರಾಜ್ ಕುಮಾರ್ ಅವರನ್ನು ಯಾವ ನಟಿಯರು ಹೆಸರಿಡಿದು ಮಾತನಾಡಿಸುತ್ತಿರಲಿಲ್ಲವಂತೆ. ಆದರೆ, ಜಯಂತಿ ಅವರು ಮಾತ್ರ 'ರಾಜ್' ಎಂದು ಹೆಸರು ಹೇಳಿಯೇ ಕರೆಯುತ್ತಿದ್ದರು. ಅವರ ಬಗ್ಗೆ ಯಾವುದೇ ಸಂದರ್ಭದಲ್ಲೂ ಮಾತನಾಡುವಾಗಲೇ 'ರಾಜ್' ಎಂದೇ ಸಂಭೋದಿಸುತ್ತಿದ್ದರು. ಸಂದರ್ಶನ, ಕಾರ್ಯಕ್ರಮಗಳ ಭಾಷಣ ಹೀಗೆ ಎಲ್ಲಾ ಕಡೆಯೂ 'ರಾಜ್' ಎಂದು ಹೇಳುತ್ತಿದ್ದರು.
 
ಜಯಂತಿ ಮತ್ತು ರಾಜ್ ಕುಮಾರ್ ನಟಿಸಿದ ಮೊದಲ ಚಿತ್ರ 'ಚಂದವಳ್ಳಿ ತೋಟ'. 1964ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಟಿವಿ ಸಿಂಗ್ ಠಾಕೂರ್ ನಿರ್ದೇಶಿಸಿದ್ದರು.

ಸುದ್ದಿ ಓದಿ