ಮಹಲಿಂಗಪುರ

ಕೋವಿಡ್ ಮಹಾಮಾರಿಯ ಕಾರಣ ಇತಿಹಾಸ ಪ್ರಸಿದ್ದ ಮಹಾಲಿಂಗೇಶ್ವರ ಜಾತ್ರೆ ರದ್ದು

ಕೋವಿಡ್ ಮಹಾಮಾರಿಯ ಕಾರಣ ಇತಿಹಾಸ ಪ್ರಸಿದ್ದ ಮಹಾಲಿಂಗೇಶ್ವರ ಜಾತ್ರೆ ರದ್ದು

ಮಹಾಲಿಂಗಪುರ13:  ಇತಿಹಾಸ ಪ್ರಸಿದ್ದ ಪಟ್ಟಣದ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರೆ ಈ ಸಾಲಿನಲ್ಲಿ ಕೂಡ ರದ್ದು ಪಡಿಸಲಾಗಿದೆ. 

ಕಾರಣ ಮಹಾರೋಗಾಣು ಕೊರೋನಾದ 3ನೇ ಅಲೆ ರಾಜ್ಯದಲ್ಲಿ ವ್ಯಾಪಿಸುವ ಮುನ್ಸೂಚನೆ ಇರುವುದರಿಂದ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಆದೇಶದಂತೆ ಈ ಜಾತ್ರೆಯನ್ನು ಪೆÇಲೀಸ್ ಇಲಾಖೆ ಹಾಗೂ ಜಾತ್ರಾ ಕಮೀಟಿಯವರು ಊರ ಪ್ರಮುಖರ ಸಮಕ್ಷಮದಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಈ ಮೇಲಿನ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಾತ್ರಾ ಕಮೀಟಿ ಅಧ್ಯಕ್ಷ ಲಕ್ಷ್ಮಣಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಅವರು ಮಹಾಲಿಂಗೇಶ್ವರ ದೇವಸ್ಥಾನದ ಮಠದ ಆವರಣದಲ್ಲಿ ನಡೆದ ಜಾತ್ರೆ ರದ್ದು ಪಡಿಸುವ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಮಹಾಲಿಂಗಪ್ಪ ಕೋಳಿಗುಡ್ಡ, ಅಶೋಕ ಅಂಗಡಿ, ಪ್ರಭು ಹಟ್ಟಿ, ಮಹಾದೇವಪ್ಪ ಬಂಡಿ, ನಿಂಗಪ್ಪ ಬಾಳಿಕಾಯಿ, ಸಂತೋಷ ಹುದ್ದಾರ, ಮುತ್ತಪ್ಪ ಪಟ್ಟಣಶೆಟ್ಟಿ, ಮಹಾದೇವ ನುಚ್ಚಿ, ಶ್ರೀನಿವಾಸ ಮಾಲಬಸರಿ, ಚನ್ನಪ್ಪ ಕೋಳಿಗುಡ್ಡ, ಮಹಾಲಿಂಗ ಮಾಳಿ, ಹಣಮಂತ ಬುರುಡ, ಬಸವರಾಜ ಬೀರನಗಡ್ಡಿ, ಪ್ರಹ್ಲಾದ ಹುಕ್ಕೇರಿ ಇನ್ನಿತರ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಓದಿ