ಮಹಲಿಂಗಪುರ

ಮಹಾಲಿಂಗಪುರ ತಾಲೂಕು ಆಗಲಿ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಒತ್ತಾಯ.

ಮಹಾಲಿಂಗಪುರ ತಾಲೂಕು ಆಗಲಿ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಒತ್ತಾಯ.


ಮಹಾಲಿಂಗಪುರ:ಮಹಾಲಿಂಗಪುರ ಕೂಡಲೇ ತಾಲೂಕು ಆಗಬೇಕು ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಏನೇನು ಒತ್ತಾಯ ಮಾಡಬೇಕು ಅದನ್ನು ನಾನು ಮಾಡುತ್ತೇನೆ ಎಂದು ಅಂತರ ರಾಷ್ಟ್ರಮಟ್ಟದ ಮಹಿಳಾ ಹೋರಾಟಗಾರ್ತಿ ರೈತಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು. 

ಮಹಾಲಿಂಗಪುರ ತಾಲೂಕು ಹೋರಾಟ ವೇದಿಕೆಗೆ ರವಿವಾರ ಸಂಜೆ ಭೇಟಿ ನೀಡಿ ಮಾತನಾಡಿದ ಅವರು ಸರ್ಕಾರ ಕೂಡಲೇ ತಾಲೂಕು ಘೋಷಣೆ ಮಾಡಬೇಕು ನಿಮ್ಮ ಬೇಡಿಕೆಗೆ ರೈತ ಸಂಘದ ಸಂಪೂರ್ಣ ಬೆಂಬಲ ಇದೆ ಎಂದರು. 

ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ.ಗಂಗಾಧರ ಮಾತನಾಡಿ ಈ ಭಾಗದ ವ್ಯವಹಾರ ವಹಿವಾಟು,ಹಳ್ಳಿಗಳು ನೋಡಿದರೆ ಮಹಾಲಿಂಗಪುರ ತಾಲೂಕು ಆಗಲು ಯೋಗ್ಯ ಪಟ್ಟಣವಾಗಿದ್ದು ಗ್ರಾಮೀಣ ಭಾಗದ ಜನತಗೆ ಸರ್ಕಾರದ ಸವಲತ್ತುಗಳು ಬೇಗ ಸಿಗಬೇಕಾದರೆ ಮಹಾಲಿಂಗಪುರ ತಾಲೂಕು ಆಗಬೇಕು.ಈ ಭಾಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂಬರು ಬಜೆಟ್ ಅಧಿವೇಶನದಲ್ಲಿ ನಲ್ಲಿ ಮಹಾಲಿಂಗಪುರ ತಾಲೂಕು ಘೋಷಿಸಿಸಲಿ ಈ ಭಾಗಕ್ಕೆ ನ್ಯಾಯ ಒದಗಿಸಿ ತಮ್ಮ ಅಧಿಕಾರದ ಹೆಜ್ಜೆ ಗುರುತು ಮೂಡಿಸಲಿ ಎಂದರು. 

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ,ಹೋರಾಟ ಸಮಿತಿಯ ಸಿದ್ದು ಶಿರೋಳ,ಜಯರಾಮ ಶೆಟ್ಟಿ ಮಾತನಾಡಿದರು. 

ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ,ರಾಜ್ಯ ಸಂಚಾಲಕ ಗಂಗಾಧರ ಮೇಟಿ,ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಶಿವಾನಂದ ಮುಗಳಿಹಾಳ,ಬೆಳಗಾವಿ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಕ,ಜಿಪಂ ಮಾಜಿ ಅಧ್ಯಕ್ಷ ಮುತ್ತಪ್ಪ ಕೋಮಾರ,ಸುಬಾಸ ಶಿರಬೂರ,ಶ್ರೀಕಾಂತ ಗೂಳನ್ನವರ, ಮುರಿಗೆಪ್ಪ ತಾರದಾಳೆ,ಪರಮಾನಂದ ಸನದಿ,ಕರೆಪ್ಪ ಮೇಟಿ,ಮಹ್ಮದ ರಫೀಕ ಮಾಲದಾರ,ಪರಮೇಶ್ವರ​‍್ಪ ಮುಂತಾದವರು ಇದ್ದರು. 

ರವಿವಾರದ 291 ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹದಲ್ಲಿ ಸಂಗಾನಟ್ಟಿ ಗ್ರಾಮದ ವಿವಿಧ ಮಹಿಳಾ ಸಂಘಗಳ ಸದಸ್ಯರು ಭಾಗವಹಿಸಿದ್ದರು. 

ಫೋಟೋ:ಎಂಎಲ್‌ಪಿ:29-1:ಮಹಾಲಿಂಗಪುರ ತಾಲೂಕು ಹೋರಾಟದ ಧರಣಿ ಸತ್ಯಾಗ್ರಹ ವೇದಿಕೆಗೆ ಭೇಟಿ ನೀಡಿದ ರಾಷ್ಟ್ರಮಟ್ಟದ ಮಹಿಳಾ ಹೋರಾಟಗಾರ್ತಿ ರೈತಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿದರು.ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ,ಗಂಗಾಧರ ಮೇಟಿ ಇದ್ದರು. 


ಸುದ್ದಿ ಓದಿ