ಮಹಲಿಂಗಪುರ

ಮಹಾಲಿಂಗಪುರ ಹಿಂದೂ ಮುಸ್ಲಿಂರ ಭಾವೈಕ್ಯತೆಯ ನೆಲೆವೀಡು

ಮಹಾಲಿಂಗಪುರ ಹಿಂದೂ ಮುಸ್ಲಿಂರ ಭಾವೈಕ್ಯತೆಯ ನೆಲೆವೀಡು

ಹಿಂದೂ ವ್ಯಕ್ತಿಯ ಧರ್ಮಾತೀತ ಸೇವೆ, ಮುಸ್ಲಿಂ ಬಾಂಧವರ ಕಂಬಿ ಮಲ್ಲಯನ ಪ್ರೀತಿ ಸಾಕ್ಷಿ 

ವರದಿ: ಮೀರಾ ಎಲ್‌. ತಟಗಾರ  

ಮಹಾಲಿಂಗಪುರ 28: ದಯವೇ ಧರ್ಮದ ಮೂಲವಯ್ಯ ಎಂಬ ವಚನವನ್ನು ಅಣ್ಣ ಬಸವಣ್ಣ ಅಂದು 12 ನೇ ಶತಮಾನದಲ್ಲಿ ಸಾರಿದ್ದರಿಂದಲೆ ಭರತಖಂಡ ವಿಶ್ವ ಮಾನ್ಯವಾಯಿತು. ಅದಕ್ಕೂ ಮುಂಚೆಯೂ ಕೂಡ ಭ್ರಾತೃತ್ವ ಇಲ್ಲಿ ನೆಲೆಗೊಂಡಿತ್ತು ಎನ್ನುವುದಕ್ಕೆ ಸಾವಿರ ಸಾವಿರ ವರ್ಷಗಳ ಹಿಂದೆಯೂ ಸೂಫಿಗಳು, ಸಂತರು, ಜನಸಾಮಾನ್ಯರು ಸಹಬಾಳ್ವೆ ನಡೆಸಿದ್ದರು ಎನ್ನುವುದಕ್ಕೆ ಇಂದಿಗೂ ಅವರ ತಡಿಗಳು ಸಾರಿ ಸಾರಿ ಹೇಳುತ್ತ ಸಾಕ್ಷೀಕರಿಸುತ್ತಿವೆ. 

ಅದಕ್ಕೆ ಉತ್ತಮ ಉದಾಹರಣೆಯಂತೆ ತಲೆ ತಲಾಂತರಗಳಿಂದ ಶ್ರೀಗುರು ಮಹಾಲಿಂಗೇಶ್ವರರು ನೆಲೆ ನಿಂತ ಮಹಾಲಿಂಗಪುರ ಪಟ್ಟಣದಲ್ಲಿ ಪರಸ್ಪರರ ಹಬ್ಬ ಹರಿದಿನಗಳಲ್ಲಿ, ಇನ್ನಿತರ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಿಂದು ಮುಸ್ಲಿಂರು ಐಕ್ಯತೆ ಭಾವವನ್ನು ಪ್ರದರ್ಶಿಸುತ್ತಾರೆ. ಪಟ್ಟಣದಲ್ಲಿ ಯಾವುದೇ ತಾರತಮ್ಯವಿಲ್ಲ. ಏನೆ ವ್ಯಾಜ್ಯಗಳು ಬಂದರೂ ಉಭಯ ಕಡೆಯ ಸ್ಥಳೀಯ ಗುರು ಹಿರಿಯರು ಸೇರಿ ಭ್ರಾತೃತ್ವಕ್ಕೆ ಮುನ್ನುಡಿ ಬರೆಯುತ್ತಾರೆ ಇದು ಇತರೆ ಊರುಗಳಿಗೆ ಹೋಲಿಸಿದಲ್ಲಿ ಇಲ್ಲಿಯ ಬದುಕು ಮಾದರಿಯಾಗಿದೆ. 

ಅದರಂತೆ ಹಿಂದೂ ಮಹನೀಯರು ರಮ್ಜಾನ್ ಮತ್ತು ಮೋಹರಂ ಹಬ್ಬಗಳಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತಾ ಉಪವಾಸವಿರುವ ಮುಸ್ಲಿಂ ಬಾಂಧವರಿಗೂ ಸಂಜೆ ಭೋಜನ, ಉಪಹಾರ (ಇಫ್ತಾರ್ ಕೂಟ) ಏರಿ​‍್ಡಸಿ ಭಾವಗಳ ಸಮ್ಮಿಲನದ ಕ್ಷಣಗಳಿಗೆ ಸಾಕ್ಷಿಯಾಗುತ್ತಾರೆ. ಇದನ್ನು ಕಂಡ ಎರಡೂ ಸಮುದಾಯಗಳ ಜನರ ಕಣ್ಣಂಚುಗಳಲ್ಲಿ ಆನಂದ ಭಾಷ್ಪ ತುಂಬಿಕೊಂಡಿರುತ್ತದೆ. ಇದುವೆ ನಿಜವಾದ ಬಾಳ್ವೆ. 

ಹಿಂದೂ ವ್ಯಕ್ತಿಯ ಧರ್ಮಾತೀತ ಸೇವೆ : ದಾನ, ಧರ್ಮ, ಸೇವೆಗೆ ಯಾವತ್ತೂ ಜಾತಿ, ಮತ, ಪಂಥಗಳು ಅಡ್ಡಿಪಡಿಸುವುದಿಲ್ಲ ಎನ್ನುವುದಕ್ಕೆ, ಉದಾಹರಣೆ ಮಹಾಲಿಂಗಪುರ ಪಟ್ಟಣದ ಹೋಟೆಲ್ ಮಾಲೀಕರಾದ ಪ್ರಭು ಮಲಾಬಾದಿ. ತಮ್ಮ ಹೊಟೆಲ್ ನಲ್ಲಿ ರಮ್ಜಾನ್ ಹಬ್ಬದ ಪ್ರಯುಕ್ತ ಮೊನ್ನೆ ಸಂಜೆಯ ಇಫ್ತಾರ್ ಕೂಟ ಏರಿ​‍್ಡಸಿದ್ದರು. ಬರುವ ನೂರಾರು ಮುಸಲ್ಮಾನ್ ಬಾಂಧವರಿಗೆ ಹೋಳಿಗೆ, ಸೀಕರಣಿ, ಚಪಾತಿ, ಹಲವಾರು ತರಹಗಳ ಪಲ್ಯಗಳೊಂದಿಗೆ ಮೃಷ್ಟಾನ್ನ ಬಡಿಸಿ ಮುಸಲ್ಮಾನ ಬಾಂಧವರ ಆದರಕ್ಕೂ ಪಾತ್ರರಾದರು. ಊಟದ ನಂತರ ಪ್ರತಿಯಾಗಿ ಊಟ ಬಡಿಸಿದ ಪರಿವಾರಕ್ಕೆ ಅನ್ನದ ಕೊರತೆಯಾಗದಂತೆ ಅಲ್ಲಾಹ (ಪರಮಾತ್ಮ) ನಲ್ಲಿ ದುವಾ ಬೇಡಿದರು. ಈ ಪ್ರಸ್ತುತ ಸನ್ನಿವೇಶ ಹಿಂದು ಮುಸ್ಲಿಂರಲ್ಲಿ ಭಾವೈಕ್ಯತೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರೆ ಉತ್ಪ್ರೇಕ್ಷೆಯಲ್ಲ. 

ಮುಸ್ಲಿಂರ ಮಲ್ಲಿಕಾರ್ಜುನನ ಪ್ರೀತಿ : ಒಂದು ತಿಂಗಳವರೆಗೆ ಪಟ್ಟಣದ ಪ್ರತಿಯೊಂದು ಭಕ್ತರ ಮನೆಗೆ ಮಲ್ಲಿಕಾರ್ಜುನ ( ಮಲ್ಲಯ್ಯ) ಭೇಟಿ ನೀಡಿ ಪೂಜೆಗೈದುಕೊಂಡು ಹೋಳಿ ಹಬ್ಬದ ಕೊನೆಯ ದಿನ ಆಂಧ್ರದ ಶ್ರೀಶೈಲಂ ಸಿರಿಗಿರಿ ಬೆಟ್ಟಕ್ಕೆ ಸಹಸ್ರ ಸಹಸ್ರ ಭಕ್ತ ಸಮೂಹದೊಂದಿಗೆ ಪಾದಯಾತ್ರೆ ಮೂಲಕ ಹೋಗಲು ಅನಿಯಾದಾಗ, ಮಹಾಲಿಂಗೇಶ್ವರ ದೇವಸ್ಥಾನದ ಜಗದ್ಗುರು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಮ್ಮುಖ ಪಟ್ಟಣದ ಜೋಡು ರಸ್ತೆಯಲ್ಲಿ ಸ್ಥಳೀಯ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಸಜನಸಾಬ ಪೆಂಡಾರಿ ಅವರು ಸಮಸ್ತ ಮುಸ್ಲಿಂ ಸಮಾಜದ ಪರವಾಗಿ ಕಂಬಿ ಮಲ್ಲಯ್ಯನಿಗೆ ಪುಷ್ಪ ಹಾರ ಸಮರ​‍್ಿಸಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಳ್ಳುತ್ತಾರೆ. ನಂತರ ಮುಸ್ಲಿಂರಿಂದ ಪಾದಯಾತ್ರಿಕರಿಗೆ ಶುದ್ಧ ಕುಡಿಯುವ ನೀರು, ಬಿಸ್ಕತ್ತು, ಪೇಪರ ಮಿಠಾಯಿ ಅಲ್ಲದೆ ಇನ್ನೂ ಹಲವಾರು ವಸ್ತುಗಳನ್ನು ವಿತರಿಸಲಾಗುತ್ತದೆ. ಈ ಒಂದು ಅಳಿಲು ಸೇವೆ ಮಾಡಿ ಪಟ್ಟಣದ ಜನತೆಯ ಪ್ರಶಂಸೆಗೆ ಪಾತ್ರರಾಗುತ್ತಾರೆ. 

ಒಟ್ಟಾರೆ ಇದರ ತಾತ್ಪರ್ಯ ಇಷ್ಟೇ ಸರ್ವೇಜನ ಸುಖಿನೋ ಭವಂತು. ಅಣ್ಣ ಬಸವಣ್ಣರು ಹೇಳಿದಂತೆ ಇವನಾರವ ಇವನಾರವ ಎನಿಸದೆ, ಇವ ನಮ್ಮವ ಇವ ನಮ್ಮ ಎನಿಸಯ್ಯಾ ಎಂಬ ವಚನ ಸಾರ್ವಕಾಲಿಕ ಸತ್ಯ ಮತ್ತು ಇದುವೇ ಭಾವೈಕ್ಯವಾಗಿದೆ. ಆದ್ದರಿಂದ ಎಲ್ಲ ಧರ್ಮಗಳ ತಿರುಳು ಒಂದೇ ಆಗಿದ್ದು ಒಬ್ಬನೇ ಪರಮಾತ್ಮ (ಏಕ ಅಲ್ಲಾಹ) ಹಜಾರ ನಾಮ. ಜ್ಞಾನೋದಯ ಕಾಲದವರೆಗೆ ಭಾವಗಳಿಗೆ ತಕ್ಕ ಪರಮಾತ್ಮನಾಗಿದ್ದಾನೆ. 


ಸುದ್ದಿ ಓದಿ