ಮಹಲಿಂಗಪುರ

ಮಹಾಲಿಂಗಪುರ ಕೆಎಲ್‌ಇ ಕಾಲೇಜ್‌ಗೆ ಶೇ.96.11 ಫಲಿತಾಂಶ

ಮಹಾಲಿಂಗಪುರ ಕೆಎಲ್‌ಇ ಕಾಲೇಜ್‌ಗೆ ಶೇ.96.11 ಫಲಿತಾಂಶ

ಲೋಕದರ್ಶನ ವರದಿ 

ಪಿಯು ಫಲಿತಾಂಶ  

ಮಹಾಲಿಂಗಪುರ 10:  ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜಿನ ಪಿಯು ಫಲಿತಾಂಶ ಶೇ.96.11 ರಷ್ಟಾಗಿದೆ. ಕಲಾ ವಿಭಾಗದ ಫಲಿತಾಂಶ ಶೇ. 93.56 ಆಗಿದ್ದು, ಸನ್ಮತಿ ಇಟ್ನಾಳ (ಶೇ.96) ಪ್ರಥಮ, ಸುನಿತಾ ನಡುವಿನಮನಿ (ಶೇ.94.16) ದ್ವಿತೀಯ, ಶ್ರೀರಕ್ಷಾ ಪಾಟೀಲ (ಶೇ.93.83) ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದ ಫಲಿತಾಂಶ ಶೇ.100 ಆಗಿದ್ದು, ಕೌಸರ ಕಡಕೋಳ (ಶೇ.98) ಮತ್ತು ಪ್ರೀತಿ ಭರಮನಿ (ಶೇ.98) ಪ್ರಥಮ, ಮಹಾಲಿಂಗ ಕಿಡದಾಳ (ಶೇ.97.5) ದ್ವಿತೀಯ, ಸತ್ಯಪ್ಪ ಚನ್ನದಾಸರ (ಶೇ.96.66) ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದ ಫಲಿತಾಂಶ ಶೇ.94.66 ಆಗಿದ್ದು, ಆರತಿ ಕಾಗಿ (ಶೇ.91.66) ಪ್ರಥಮ, ಕಮಲಾ ಡುಮ್ಮನವರ (ಶೇ.91.16) ದ್ವಿತೀಯ, ಅಭಿಷೇಕ ಪಾಟೀಲ (ಶೇ.90.66) ತೃತೀಯ ಸ್ಥಾನ ಪಡೆದಿದ್ದಾರೆ. ಮೂರೂ ವಿಭಾಗ ಸೇರಿ 59 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, ಅರ್ಥಶಾಸ್ತ್ರದಲ್ಲಿ 8, ಕನ್ನಡದಲ್ಲಿ 4, ಸಮಾಜಶಾಸ್ತ್ರದಲ್ಲಿ 4,  ಗಣಿತ, ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನದಲ್ಲಿ ತಲಾ ಓರ್ವ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಎಂದು ಪ್ರಾಚಾರ್ಯ ಎಲ್‌.ಬಿ.ತುಪ್ಪದ ತಿಳಿಸಿದ್ದಾರೆ.  


ಸುದ್ದಿ ಓದಿ