ಪರಿಹಾರ ವಿತರಿಸಿದ ಶಾಸಕ ಮಹಾದೇವಪ್ಪ ಯಾದವಾಡ
ರಾಮದುರ್ಗ ಜನೇವರಿ 12 : ಮಲಪ್ರಭಾ ನದಿ ಪ್ರವಾಹದ ನೀರು ನುಗ್ಗಿ ಹಾನಿಯಾಗಿದ್ದರಿಂದಾ ಮನನೊಂದ ಆತ್ಮಹತ್ಯೆಗೆ ಶರಣಾದ ಹಲಗತ್ತಿ ಗ್ರಾಮದ ನೇಕಾರ ರಮೇಶ ನೀಲಕಂಠಪ್ಪ ಹವಳಕೊಡರ ಪತ್ನಿಗೆ ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಂದಾ ಮಂಜೂರಾದ ರೂ. 90 ಸಾವಿರ ಚೆಕ್ಕನ್ನು ಶಾಸಕ ಮಹಾದೇವಪ್ಪ ಯಾದವಾಡ ನೀಡಿ ಮಾತನಾಡಿದ ಅವರು ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸಲು ಸಲಹೆ ನೀಡಿದ ಅವರು ಸರಕಾರದಿಂದಾ ಮನೆ ಮಂಜೂರ ಮಾಡಿಸುವುದಾಗಿ ಭರವಸೆ ನೀಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಉಪಕಾರ್ಯದರ್ಶಿ ವಾಸುದೇವ ದೊಡಮನಿ, ಸತೀಶ ಕಾಪ್ಸೆ, ಶ್ರೀನಿವಾಸ ಕುರುಡಗಿ, ಮೃತನ ತಂದೆ ನೀಲಕಂಠೆಪ್ಪ ಹವಳಕೊಡ ಬಸಪ್ಪ ಸದಾಶಿವನವರ ಹಾಜರಿದ್ದರು.