ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ರಾಯಬಾಗ : ತಾಲೂಕಿನ ಹಳೆದಿಗ್ಗೇವಾಡಿ ಗ್ರಾಮದ ದೇವರುಷಿಗಳಾದ ಮಹಾದೇವ ಗಂಗಾಯಿ (ಅಜ್ಜಾ)(76) ಅವರು ಅನಾರೋಗ್ಯದಿಂದ ಇಂದು ನಿಧನರಾದರು.
ಇವರಿಗೆ ಎರಡು ಗಂಡು, ಎರಡು ಹೆಣ್ಣು ಮಕ್ಕಳು ಇದ್ದರು. ಇವರ ಪಾರ್ಥಿವ ಶರೀರವನ್ನು ಗ್ರಾಮದಿಂದ ಮೆರವಣಿಗೆ ನಡೆಸಿ ಇಂದು ರಾತ್ರಿವೇಳೆ ಭಜನೆ ನಡೆಯಲಿದೆ. ನಿಧನಕ್ಕೆ ಹಳೆದಿಗ್ಗೇವಾಡಿ, ದಿಗ್ಗೇವಾಡಿ, ಬಾವನಸೌಂದತ್ತಿ, ಕಂಚಕರವಾಡಿ, ಯಡ್ರಾಂವ, ನಸಲಾಪುರ, ಜಲಾಲಪುರ ಸೇರಿದಂತೆ ಅನೇಕ ಗ್ರಾಮಸ್ಥರು ದುಃಖ ವ್ಯಕ್ತಪಡಿಸಿದ್ದಾರೆ.
ಶನಿವಾರ ಭಕ್ತಾಧಿಗಳ ದರ್ಶನಕ್ಕೆ ಹಳೆದಿಗ್ಗೇವಾಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ನಂತರ ಅಂತ್ಯಕ್ರಿಯೆ ಮಾಡಲಾಗುತ್ತದೆ.