ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಯಾದವಾಡ
ರಾಮದುರ್ಗ ಜನೇವರಿ 12: ಗ್ರಾಮ ಪಂಚಾಯತ ಚುನಾವಣೆಯಲ್ಲಿ ಎಲ್ಲರೂ ತಮ್ಮ ತಮ್ಮ ಪಕ್ಷಕ್ಕೆ ಹೊರಾಡಿದ್ದು ಆಗಿದೆ, ಇನ್ನು ಅಭಿವೃದ್ದಿಗೆ ಕಡೆ ಗಮನ ನೀಡಿಬೇಕು ಅಲ್ಲದೆ ಅಭಿವೃದಿ ವಿಷಯದಲ್ಲಿ ರಾಜಕೀಯ ಬೆರಸಬಾರದು ಇದರಿಂದಾ ಅಭಿವೃದ್ದಿ ಕಾಮಗಾರಿಗಳಿಗೆ ಹಿನ್ನಡೆಯಾಗುತ್ತದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಕಟಕೋಳ ಗ್ರಾಮದಲ್ಲಿ ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರಿಗೆ ಸನ್ಮಾನ ಮತ್ತು ಕಟಕೋಳ ನಾಗರಾಳಿ ರಸ್ತೆ ಅಭಿವೃದಿಗೆ ರೂ. 1.70 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಅಭಿವೃದ್ದಿ ಕಾಮಗಾರಿ ಕಳಪೆಯಾದರೆ ನಾನು ಸಹಿಸುವುದಿಲ್ಲ, ಅದಕೆ ನೇರವಾಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರರೆ ಹೊಣೆಗಾರರನ್ನಾಗಿಸಿ ಕ್ರಮಕೈಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ನೂತನ ಗ್ರಾಮ ಪಂಚಾಯತ ಸದಸ್ಯರು ಪಕ್ಷಪಾತ ಮಾಡದೇ ಗ್ರಾಮದ ಅಭಿವೃದ್ದಿಗೆ ಶ್ರಮಿಸಿ ಮತ ನೀಡಿದ ಪ್ರಭುಗಳ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನಮಾಡಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಯಾವುದೇ ಮೀಸಲಾತಿ ಬಂದರೂ ಎಲ್ಲರೂ ಒಗ್ಗಟ್ಟಾಗಿ ಗ್ರಾಮದ ಅಭಿವೃದ್ದಿಗಾಗಿ ಆಯ್ಕೆ ಮಾಡಲು ತಿಳಿಸಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್ ಎಸ್ ಡವಣ, ಜಿಲ್ಲ ಪಂಚಾಯತ ಸದಸ್ಯ ಮಾರುತಿ ತುಪ್ಪದ, ಪಿಕೆಪಿಎಸ್ ಅಧ್ಯಕ್ಷ ಮಹಾದೇವ ಅತಾರ, ಎಸ್ ಎಸ್ ಮುದೇನೂರ ಹಾಗೂ ಗ್ರಾಮ ಪಂಚಾಯತ ನೂತನ ಸದಸ್ಯರು ಉಪಸ್ಥಿತರಿದ್ದರು.