ಶ್ರೀರಾಮ ದೇಗುಲಕ್ಕೆ ಶಾಸಕ ಯಾದವಾಡ 5 ಲಕ್ಷ ರೂ. ದೇಣಿಗೆ
ರಾಮದುರ್ಗ 01: ಮರ್ಯಾದಾ ಪುರುಷೋತ್ತಮ, ದೇಶದ ಅಸ್ಮಿತೆ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣಕ್ಕೆ ಶಾಸಕರಾದ ಮಹಾದೇವಪ್ಪ ಯಾದವಾಡ ತಮ್ಮ ಗೃಹ ಕಚೇರಿಯಲ್ಲಿ501100ರೂಪಾಯಿ ಚೆಕ್ ಮೂಲಕ ದೇಣಿಗೆ ನೀಡಿದರು.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ಸಮಸ್ತ ಹಿಂದೂ ಸಮಾಜ ಕೈಜೋಡಿಸಬೇಕು, ಪ್ರತಿ ಮನೆ-ಮನಗಳು ಈ ನಿಧಿ ಸಮರ್ಪಣಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಮಹಾದೇವಪ್ಪ ಯಾದವಾಡ ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಯ ಜೋಶಿ,ರಾಜು ಶಿರೋಳ,ರಾಜು ಬೀಳಗಿ ಜಗದೀಶ್ ಲಾಹೋಟಿ, ಶಂಭು ಮಾಳವಾಡ, ಎಸ್.ಎಸ್.ದಡೇದ, ಶ್ರೀನಿಧಿ ಸಪಳಿಗ,ಚಿದಾನಂದ ತಾಂಬೆ, ಚಂಬಣ್ಣಾ ಬೈಲವಾಡ,ಪುರಸಭೆ ಸದಸ್ಯ ನಾಗರಾಜ ಕಟ್ಟಿಮನಿ, ಅಕ್ಷಯ ಹಲ್ಯಾಳ ಇತರರು ಹಾಜರಿದ್ದರು.