ರಾಮದುರ್ಗ

ಕೋವಿಡ್ ಕೇರ್ ಸೆಂಟರಗೆ ಶಾಸಕ ಮಹಾದೇವಪ್ಪ ಯಾದವಾಡ

ಕೋವಿಡ್ ಕೇರ್ ಸೆಂಟರಗೆ ಶಾಸಕ ಮಹಾದೇವಪ್ಪ ಯಾದವಾಡ
ಪಟ್ಟಣದ ಬಿಸಿಎಂ ಹಾಸ್ಟೇಲದಲ್ಲಿ ಪ್ರಾರಂಭಿಸಿದ ಕೊವಿಡ್ ಕೇರ್ ಸೆಂಟರಗೆ ಶಾಸಕ ಮಹಾದೇವಪ್ಪ ಯಾದವಾಡ ತಾಲೂಕ ಆಡಳಿತದೊಂದಿಗೆ

ರಾಮದುರ್ಗ 30: ಪಟ್ಟಣದ ಬಿಸಿಎಂ ವಸತಿ ನಿಲಯದಲ್ಲಿ ಪ್ರಾರಂಭಿಸಿದ ಕೊವಿಡ್ ಕೇರ್ ಸೆಂಟರಗೆ ಶಾಸಕ ಮಹಾದೇವಪ್ಪ ಯಾದವಾಡ ತಾಲೂಕ ಆಡಳಿತದೊಂದಿಗೆ ಭೇಟಿ ನೀಡಿ ರೋಗಿಗಳ ಕುಂದುಕೊರತೆ ಆಲಿಸಿದ ಅವರು ಕೊವಿಡ್‌ನಿಂದಾ ಕ್ವಾರಂಟೈನ್‌ನಾದ ರೋಗಿಗಳಿಗೆ ಗುಣಮಟ್ಟದ ಊಟ, ಉಪಹಾರದ ಜೊತೆಗೆ ಸೋಪ ತೆಂಗಿನ ಎಣ್ಣೆ ಹಾಗೂ ಓಷಧಿಯನ್ನು ನೀಡುತ್ತಿದೆ ಹಾಗೂ ಮೇಲಿಂದ ಮೇಲೆ ನುರಿತ ವೈದ್ಯರು ಬಂದು ರೋಗಗಳ ಆರೋಗ್ಯ ತಪಾಸಣೆ ಮಾಡುತ್ತಾರೆ, ಕಾರಣ ರೋಗಿಗಳು ಭಯಭೀತರಾಗದೆ ನೆಮ್ಮದಿಯಿಂದಾ ಇದ್ದು ಗುಣಮುಖರಾಗಬೇಕು. ಒಂದು ವೇಳೆ ಇನ್ನು ತಮಗೆ ಏನಾದರೂ ಬೇಕಾದರೆ ನಾವು ಪೂರೈಸಲು ಸಿದ್ದ ಎಂದು ಶಾಸಕ ಯಾದವಾಡ ಭರವಸೆ ನೀಡಿದರು.  

 ಕೊವಿಡ್ ಕೇರ್ ಸೆಂಟರ್‌ದಲ್ಲಿ ತಾಲೂಕ ಆಡಳಿತದಿಂದಾ ಉತ್ಮಮ ರೀತಿಯ ಚಿಕಿತ್ಸ್ಸೆ ಹಾಗೂ ಊಟದ ವ್ಯವಸ್ಥೆ ಇದೆ ಎಂದು ಹೂಲಿಗೊಪ್ಪ ಗ್ರಾಮದ ರೋಗಿ ಮಾತನಾಡ ನಾವು ಅರಾಮ ಅದೇವ್ರಿ ಸಾಹೇಬ್ರ ಆದ್ರ ನಮ್ದ ಮನಿಕಡೆಗೆ ಮತ್ತ ಹೊಲದ ಕಡೆಗೆ ಜೀವ ಅತೀ ಲಗುಣ ಆರಾಮ ಆಕ್ಕೆವಿ ಎಂದು ನಡಿದರು. ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರಳೀದರ ದೇಶಪಾಂಡೆ ಡಾ. ಶಶಿಧರ ಹೆಗ್ಗನಾಯಕ. ಕಂದಾಯ ನೀರೀಕ್ಷಕ ಶಿವು ಗೊರವನಕೊಳ್ಳ ಉಪಸ್ಥಿತರಿದ್ದರು. 

ಸುದ್ದಿ ಓದಿ