ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಶಾಸಕ ಅಮರೇಗೌಡ ಬಯ್ಯಾಪುರ
ಕುಷ್ಟಗಿ 23: ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ನೂತನ ಪೊಲೀಸ್ ಠಾಣೆಯ ಕಟ್ಟಡ ಕಾಮಗಾರಿಯ ಗುತ್ತಿಗೆದಾರರಿಗೆ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ಹಾಗೂ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಬೆಳಗ್ಗೆ ಇಲ್ಲಿನ ಪೊಲೀಸ್ ಠಾಣೆ ನಿವೇಶನದಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ನೂತನ
ಕಟ್ಟಡದ ಅಡಿಗಲ್ಲು ಸಮಾರಂಭದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಕುಷ್ಟಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾದ ನೂತನ ಪೊಲೀಸ್ ಠಾಣೆ ಕಟ್ಟಡದ ಅಭಿವೃದ್ಧಿ ಕಾಮಗಾರಿಯು ತ್ವರಿತವಾಗಿ ಮುಕ್ತಗೊಳಿಸಿ ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ನಿರ್ದೇಶಿಸಿದರು.
ಕುಷ್ಟಗಿ, ತಾವರಗೇರಿ, ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇದೆ ಇದನ್ನು ಸರಕಾರದ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದು ಹೇಳಿದರು.
ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಕಲಬುರ್ಗಿ ವಿಭಾಗದ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ದೇವಿ ಪಾಟೀಲ್ ಮಾತನಾಡಿ ಬಜೆಟ್ ಸ್ಕೀಮ್ ಯೋಜನೆ ಅಡಿ ಕುಷ್ಟಗಿ ಪಟ್ಟಣದಲ್ಲಿ ಸುಮಾರು 2.60 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಪೊಲೀಸ್ ಕಟ್ಟಡ, ಆವರಣ ಗೋಡೆಯ ಕಾಮಗಾರಿಯನ್ನು ಅಂದಾಜು ಪತ್ರಿಕೆ ಪ್ರಕಾರ 11 ತಿಂಗಳಲ್ಲಿ ಸಮರ್ಕವಾಗಿ ನಿರ್ವಹಿಸಿ ಇಲಾಖೆಗೆ ಹಸ್ತಾಂತರಿಸಬೇಕು.
ಪೋಲಿಸ್ ಠಾಣೆ ಕಟ್ಟಡದ ಕಾಮಗಾರಿ ಗುಣಮಟ್ಟ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಆದೇಶಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾತನಾಡಿ ಪೊಲೀಸರ ಕಣ್ಣುತಪ್ಪಿಸಿ ತಾಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದೆ ಕೊಡಲೇ ನೀಗಾವಹಿಸಿ ಹತೋಟಿಗೆ ತರಲಾಗುತ್ತದೆ.
ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು 112 ಪೊಲೀಸ್ ಠಾಣೆಯ ಸಹಾಯ ವಾಣಿ ಉಪಯೋಗಿಸಿ ಕಾನೂನು ನೆರವು ಪಡೆದು ಕೊಳ್ಳಬೇಕು.
ಕುಷ್ಟಗಿ ಪಟ್ಟಣದಲ್ಲಿ ನಡೆಯುತ್ತಿರುವ ಕಳ್ಳರ ಹಾವಳಿಗಳನ್ನು ಪತ್ಯೆ ಹಚ್ಚಲು ಪಟ್ಟಣದ ವಿವಿಧ ಕಡೆಗಳಲ್ಲಿ ಪುರಸಭೆಯ ಸಹಯೋಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಸದಸ್ಯ ಸಯ್ಯದ್ ಮೈನುದ್ದೀನ್ ಮುಲ್ಲಾ, ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಹೊಸಪೇಟೆ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ವೀರಭದ್ರ್ಪ, ಸಹಾಯಕ ಇಂಜನೀಯರ್ ರವಿ, ಗುತ್ತಿಗೆದಾರ ಸೈಯದ್ ಅಬೀದ್ ಪಾಷಾ, ಗಂಗಾವತಿ ಉಪವಿಭಾಗದ ಡಿ.ವಾಯ್.ಎಸ್.ಪಿ ರುದ್ರೇಶ್ ಉಜ್ಜನಕೊಪ್ಪ, ಡಿ.ಸಿ.ಆರಿ್ಬ.ಡಿ.ವಾಯ್.ಎಸ್ ಪಿ ಶ್ರೀಧರ್ ಹಿರೇಮಠ, ಸಿಪಿಐ ನಿಂಗಪ್ಪ ರುದ್ರ್ಪಪ್ಪಗೋಳ,
ಪಿ.ಎಸ್.ಐ ತಿಮ್ಮಣ್ಣ ನಾಯಕ್, ಭಗತ್ ಸಿಂಗ್ ಅಧ್ಯಕ್ಷ ವಜೀರ ಅಲಿ ಗೋನಾಳ, ಉಮೇಶ್ ಮಂಗಳೂರು, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.