ಕೊರೊನಾ ಕಾಲಘಟ್ಟದಲ್ಲಿ ಭಗವಾನ್ ಬುದ್ದ ಅತ್ಯಂತ ಹೆಚ್ಚು ಪ್ರಸ್ತುತ; ಮೋದಿ
ನವದೆಹಲಿ, ಜುಲೈ 24 - ಕೊರೊನಾ ಸಾಂಕ್ರಾಮಿಕದಂತಹ ಕಾಲಘಟ್ಟದಲ್ಲಿ ಭಗವಾನ್ ಬುದ್ಧ ಅತ್ಯಂತ ಹೆಚ್ಚು ಪ್ರಸ್ತುತ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಬುದ್ಧನ ಮಾರ್ಗದಲ್ಲಿ ನಡೆದು ಅತ್ಯಂತ ಸಂಕಷ್ಟದ ಸವಾಲು ಹೇಗೆ ಎದುರಿಸಬಹುದು ಎಂಬುದನ್ನು ಭಾರತ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ನುಡಿದಿದ್ದಾರೆ.
ಅಷಾಢ ಪೂರ್ಣಿಮೆ- ಧಮ್ಮ ಚಕ್ರ ದಿನ ಕಾರ್ಯಕ್ರಮದ ಅಂಗವಾಗಿ ತಮ್ಮ ಸಂದೇಶದಲ್ಲಿ "ಬುದ್ಧನ ಮಾರ್ಗವನ್ನು ಅನುಸರಿಸಿ, ಅತ್ಯಂತ ಸಂಕಷ್ಟದ ಸವಾಲುಗಳನ್ನು ನಾವು ಹೇಗೆ ಎದುರಿಸಬಹುದು ಎಂಬುದನ್ನು ಭಾರತ ಜಗತ್ತಿಗೆ ತೋರಿಸಿಕೊಟ್ಟಿದೆ" ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ
ಭಗವಾನ್ ಬುದ್ಧನ ಬೋಧನೆಗಳನ್ನು ಅನುಸರಿಸುವ ಮೂಲಕ ಇಡೀ ಜಗತ್ತು ಐಕ್ಯಮತ್ಯದತ್ತ ಸಾಗುತ್ತಿದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಬೌದ್ದ ಒಕ್ಕೂಟದ "ಕಾಳಜಿಯೊಂದಿಗೆ ಪ್ರಾರ್ಥನೆ" ಉಪಕ್ರಮ ಶ್ಲಾಘನೀಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಮ್ಮ ಮನಸ್ಸು, ಮಾತು ಹಾಗೂ ನಿರ್ಣಯದ ನಡುವಣ ಸೌಹಾರ್ದತೆ , ನಮ್ಮ ಕ್ರಿಯೆ ಹಾಗೂ ಪ್ರಯತ್ನದ ಸಾಮರಸ್ಯ ನೋವಿನಿಂದ ಸಂತೋಷದ ಕಡೆಗೆ ನಮ್ಮನ್ನು ಮಾರ್ಗದರ್ಶಿಸುತ್ತದೆ. ಈ ಪ್ರೇರಣೆ ಒಳ್ಳೆಯ ಸಮಯದಲ್ಲಿ ಸಾಮಾನ್ಯ ಕಲ್ಯಾಣಕ್ಕಾಗಿ, ಸಂಕಷ್ಟ ಸಮಯದಲ್ಲಿ ಅದನ್ನು ಎದುರಿಸಲು ಶಕ್ತಿ ನೀಡುತ್ತದೆ. ಭಗವಾನ್ ಬುದ್ದ ಸೌಹಾರ್ಧತೆಯನ್ನು ಸಾಧಿಸಲು ಎಂಟು ಹಂತದ ಮಾರ್ಗವನ್ನು ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ.
ತ್ಯಾಗ ಹಾಗೂ ಸಹಿಷ್ಣುತೆ ಎಂಬ ಬೆಂಕಿಯಲ್ಲಿ ಅರಳಿದ ಭಗವಾನ್ ಬುದ್ಧ, ಇವು ಕೇವಲ ಪದಗಳಲ್ಲ 'ಧಮ್ಮ'ದ ಸಂಪೂರ್ಣ ಚಕ್ರದ ಆರಂಭ ಎಂದು ಹೇಳಿದ್ದಾರೆ. ಆತನಿಂದ ಹರಿಯುವ ಜ್ಞಾನ ವಿಶ್ವದ ಕಲ್ಯಾಣಕ್ಕೆ ಸಮಾನಾರ್ಥಕವಾಗುತ್ತದೆ. ಹಾಗಾಗಿ ಇಂದು ಪ್ರಪಂಚದಾದ್ಯಂತ ಅವರು ಅನುಯಾಯಿಗಳನ್ನು ಹೊಂದಿದ್ದಾರೆ, '' ಎಂದು ಹೇಳಿದ್ದಾರೆ.
"ಧಮ್ಮ ಪದ" ಉಲ್ಲೇಖಿಸಿರುವ ಪ್ರಧಾನಿ ಮೋದಿ, ದ್ವೇಷದಿಂದ ದ್ವೇಷವನ್ನು ನಿವಾರಿಸಲಾಗದು, ಬದಲಿಗೆ ದ್ವೇಷವನ್ನು ಪ್ರೀತಿ ಹಾಗೂ ದೊಡ್ಡ ಹೃದಯದಿಂದ ನಿವಾರಿಸಬಹುದಾಗಿದೆ ಎಂದು ಹೇಳಿದ್ದಾರೆ.
ಈ ದುರಂತ ಸಮಯದಲ್ಲಿ ಬುದ್ಧನ ಪ್ರೀತಿ ಹಾಗೂ ಸೌಹಾರ್ದತೆಯ ಶಕ್ತಿ ಏನು ಎಂಬುದನ್ನು ಇಡೀ ಜಗತ್ತಿನ ಅನುಭವಕ್ಕೆ ಬಂದಿದೆ. ಬುದ್ಧನ ಜ್ಞಾನ, ಮಾನವೀಯತೆಯ ಅನುಭವದಿಂದ ಜಗತ್ತು ಪ್ರಯೋಜನಪಡೆದು ಯಶಸ್ಸು ಹಾಗೂ ಸಮೃದ್ಧಿಯ ಹೊಸ ಎತ್ತರ ತಲುಪಬಹುದು ಎಂದು ಪ್ರಧಾನಿ ಆಶಿಸಿದ್ದಾರೆ.