ಮಹಾಲಕ್ಷ್ಮೀ ಜಾತ್ರೆ ವಿಷಯದಲ್ಲು ಸ್ಥಳೀಯ ಮುಖಂಡರ ಹಗ್ಗ ಜಗ್ಗಾಟ : ಜನರಿಂದ ಛೀಮಾರಿ
ಪಾರೇಶ ಭೋಸಲೆ
ಬೆಳಗಾವಿ : ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ವಿದ್ಯುತ್ ಶಕ್ತಿ ಸಂಘದ ಚುನಾವಣೆಯಲ್ಲಿ ಶುರುವಾದ ರಾಜಕೀಯ ಬಣ ಬಡಿದಾಟವು ಇಂದಿಗೂ ಜೀವಂತವಾಗಿದ್ದು, ಮುಂದಿನ ವರ್ಷ ನಡೆಯಲಿರುವ ಸಂಕೇಶ್ವರ ಲಕ್ಷ್ಮೀದೇವಿ ಜಾತ್ರೆಗೂ ಕೂಡಾ ಬಣ ರಾಜಕೀಯದ ಬಿಸಿ ತಟ್ಟಿದ್ದು, ಜನ ಛೀಮಾರಿ ಹಾಕುವಂತಾಗಿದೆ.
ಹೌದು ಓದುಗರೆ ರಾಜಕೀಯ ಅನ್ನುವದು ಚುನಾವಣೆಗೆ ಮಾತ್ರ ನಿಯಮಿತವಾಗಿರಬೇಕು ಹೊರತು ಅಭಿವೃದ್ಧಿ ಕಾರ್ಯಗಳಲ್ಲಿ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಅಲ್ಲ. ಆದರೆ ಹುಕ್ಕೇರಿ ತಾಲೂಕಿನ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ವೇಳೆಯಲ್ಲಿ ಸಂಕೇಶ್ವರ ಪಟ್ಟಣದಲ್ಲಿ ಸ್ಥಳೀಯ ಮುಂಡರಲ್ಲಿ ಎರಡು ಬಣಗಳಾಗಿದ್ದು, ಆ ಬಣಗಳು ಇಲ್ಲಿಯ ವರೆಗೆ ಯಾವದೇ ಕಾರ್ಯಗಳಲ್ಲಿಯು ಕೂಡಾ ದ್ವಿಮುಖ ನೀತಿ ಅನುಸರಿಸುತ್ತಿದ್ದು, ಮುಂದಿನ ವರ್ಷ ನಡೆಬೇಕಿರುವ ಸಂಕೇಶ್ವರ ಮಹಾಲಕ್ಮೀ ಯಾತ್ರೆಯ ಸಭೆಗಳಲ್ಲು ಬಣ ರಾಜಕೀಯ ಜೋರಾಗಿದೆ. ಇದರಿಂದ ರೋಷಿಹೋಗಿರುವ ಸಂಕೇಶ್ವರದ ಜನರು ಸ್ಥಳೀಯ ಮುಖಂಡರರಿಗೆ ಛೀಮಾರಿ ಹಾಕುವಂತಾಗಿದೆ.
ಪಟ್ಟಣದ ಕೆಲವು ಭಾಗಗಳಲ್ಲಿ ಸ್ಥಳೀಯ ಮುಖಂಡರ ನಡೆಗೆ ಚರ್ಚೆ ಗಳು ನಡೆಯುತ್ತಿದ್ದು, ಸ್ಥಳೀಯ ಮುಖಂಡರ ವಿರುದ್ದ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ. ಒಂದು ಕಡೆ ಜಾತ್ರೆಯ ಹಕ್ಕುದಾರರ ಕಮಿಟಿ ಇದೇ ದಿನಾಂಕ 24ರಂದು ಸಂಕೇಶ್ವರ ಪಟ್ಟಣದ ಎಲ್ಲ ಸಮುದಾಯದ ಸಭೆ ಕರೆದು ಒಂದು ತೀರ್ಮಾನ ಮಾಡುವ ಚಿಂತನೆಯಲ್ಲಿ ಇದ್ದರೆ ಇನ್ನೊಂದು ಬಣದ ರಾಜಕೀಯ ತಂಡ ತಾವು ಮಹಾಲಕ್ಷ್ಮಿ ಜಾತ್ರೆಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ತವಕದಲ್ಲಿ ಇದ್ದು, ಈ ಎರಡು ಬಣಗಳಲ್ಲಿ ಸಭೆಯ ಮೇಲೆ ಸಭೆಗಳು ಜೋರಾಗಿ ನಡೆದಿವೆ.
ಆದರೆ ಈ ಎರಡು ಬಣಗಳ ರಾಜಕೀಯ ಕಿತ್ತಾಟಕ್ಕಾಗಿ ಶ್ರೀ ಮಹಾಲಕ್ಷ್ಮೀ ಯಾತ್ರೆಯನ್ನು ಮುಂದೂಡುವದು ಅಥವಾ ಯಾತ್ರೆ ನಡೆಯದಂತೆ ಮಾಡಿದ್ದೆ ಆದಲ್ಲಿ ಪಟ್ಟಣ ನಾಗರಿಕರು ಸ್ಥಳೀಯ ರಾಜಕೀಯ ನಾಯಕರ ವಿರುದ್ದ ದಂಗೆ ಎಳುವದರಲ್ಲಿ ಸಂದೇಹ ಇಲ್ಲ ಎನ್ನುವದು ಇಲ್ಲು ಸ್ಪಷ್ಟವಾಗಿ ಗೋಚರಿಸತಾ ಇದೆ.