ಕೇಂದ್ರ ಸಚಿವ ನಿತೀನ ಗಡಕರಿಗೆ ಜೀವ ಬೆದರಿಕೆ, ಹಣ ಬೇಡಿಕೆ ಪ್ರಕರಣ : ಹಿಂಡಲಗಾ ಜೈಲಿನ ಮೇಲೆ ಮಹಾರಾಷ್ಟ್ರ ಪೊಲೀಸರ ದಾಳಿ
ಬೆಳಗಾವಿ : ಕೇಂದ್ರ ಸಚಿವ ನಿತೀನ ಗಡಕರಿ ಅವರಿಗೆ ಜೀವ ಬೆದರಿಕೆ ಹಾಕಿ 100 ಕೋಟಿ ರೂ. ಬೆಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಮಹಾರಾಷ್ಟ್ರದ ಪೊಲೀಸರು ನಗರದ ಹಿಂಡಲಗಾ ಜೈಲಿನ ಮೇಲೆ ದಾಳಿ ನಡೆಸಿ ಕೆಲವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಹಿಂಡಲಗಾ ಜೈಲಿನಲ್ಲಿರುವ ಖೈದಿಯೋರ್ವರು ಕೇಂದ್ರ ಸಚಿವ ನಿತೀನ ಗಡಕರಿ ಅವರ ಕಚೇರಿಗೆ ಕರೆ ಹಾಗೂ ಸಂದೇಶ ಕಳಿಸಿದ್ದರು. ಕರೆ ಮಾಡಿದ್ದ ಈ ಮೊಬೈಲ್ ಸಂಖ್ಯೆ ಯು ಮತ್ತೆ ಬೆಳಗಾವಿ ಹಿಂಡಲಗಾ ಜೈಲು ವ್ಯಾಪ್ತಿಯ ಟಾವರ್ ಲೋಕೇಶನ್ ತೋರಿರುವ ಹಿನ್ನೆಲೆ ಮಹಾರಾಷ್ಟ್ರದ ಮೀರಜ್‌ನ ಪೊಲೀಸರು ಗುರುವಾರ ತಡ ರಾತ್ರಿ 11 ಹಿಂಡಲಗಾ ಜೈಲಿಗೆ ತಲುಪಿ ಸಚಿವ ನಿತೀನ ಗಡಕರಿ ಅವರಿಗೆ ಸಂದೇಶ ಹಾಗೂ ಕರೆ ಮಾಡಿದ್ದ ಮೊಬೈಲ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.
ತಮ್ಮ ‘ಗೂಗಲ್ ಪೇ’ಗೆ 10 ಕೋಟಿ ಕಳಿಸಿ, ಪೊಲೀಸರಿಗೆ ಹೇಳಬೇಡಿ’ ಎಂದು ಬೆಳಗಾವಿ ಜೈಲಿನಲ್ಲಿರುವ ಕುಖ್ಯಾತ ಆರೋಪಿಯೊಬ್ಬರು ಮಂಗಳವಾರ ಬೆಳಗ್ಗೆ ಮತ್ತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಎರಡನೇ ಬಾರಿಗೆ ದೂರವಾಣಿ ಕರೆ ಮಾಡಿದ್ದಾರೆ. ಕರೆ ಮಾಡಿದ್ದ ಆರೋಪಿಯ ಹೆಸರು ಜಯೇಶ್ ಅಲಿಯಾಸ್ ಜಯೇಶ್ ಕಾಂತ. ಅವರು ಈ ಹಿಂದೆ ಜನವರಿ 14, 2023ರಂದು ಗಡ್ಕರಿ ಅವರ ಕಚೇರಿಗೆ ಮೂರು ಕರೆಗಳನ್ನು ಮಾಡಿದ್ದರು ಎನ್ನಲಾಗಿದೆ.
ಆ ವೇಳೆ ತಾನು ಡಿ ಗ್ಯಾಂಗ್‌ನ ಸದಸ್ಯ ಎಂದು 100 ಕೋಟಿಗೆ ಬೇಡಿಕೆ ಇಟ್ಟಿದ್ದ. ಆದರೆ ಈಗ ಬೆಳಗಾವಿ ಜೈಲಿನಿಂದ ಈ ಕರೆ ಬಂದಿರುವುದು ಪತ್ತೆಯಾಗಿದೆ. ಮಂಗಳವಾರ ಬೆಳಗ್ಗೆ 10.53 ಮತ್ತು 11.08ಕ್ಕೆ ಕೇಂದ್ರ ಸಚಿವ ಗಡಕರಿ ಅವರಿಗೆ ಮತ್ತೆ ಬೆದರಿಕೆ ಕರೆಗಳು ಬಂದಿವೆ. ಆ ಬಳಿಕ ಜಯೇಶ್ ರಜಿಯಾ ಎಂಬ ಬಾಲಕಿಯ ಮೊಬೈಲ್ ನಂಬರ್ ನೀಡಿ ಗೂಗಲ್ ಪೇ ಮೂಲಕ 10 ಕೋಟಿ ರೂ. ತಾನು ದಾವೂದ್ ಗ್ಯಾಂಗ್ ಸದಸ್ಯ ಎಂದು ಪುನರುಚ್ಚರಿಸಿದ್ದಾರೆ ಎನ್ನಲಾಗಿದೆ.
ಸ್ಥಳ ಪರಿಶೀಲನೆ ನಡೆಸಿದಾಗ ಅದು ಬೆಳಗಾವಿ ಜೈಲು ಎಂದು ತಿಳಿದುಬಂದಿದೆ. ಕೇಂದ್ರೀಯ ಸಂಸ್ಥೆಗಳು ಮತ್ತು ನಗರ ಪೊಲೀಸರು ಸಚಿವ ಗಡ್ಕರಿ ಅವರ ಭದ್ರತೆಯ ಮೇಲೆ ನಿಗಾ ಇರಿಸಿದರು ಮತ್ತು ಅಗತ್ಯವಿರುವಂತೆ ಭದ್ರತೆಯನ್ನು ಹೆಚ್ಚಿಸಿದರು.
ರಜಿಯಾ ಯಾರು? : ರಜಿಯಾ ಸಾಮಾನ್ಯ ಕುಟುಂಬದ ಯುವತಿ. ಅವಳು ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಾಳೆ ಎಂದು ತಿಳಿದು ಬಂದಿದೆ. ಆಕೆಯ ಗೆಳೆಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಅವಳು ಮತ್ತು ಜಯೇಶ್ ಪರಸ್ಪರ ಪರಿಚಯ ಮಾಡಿಕೊಂಡರು ಎನ್ನಲಾಗಿದೆ. ಜಯೇಶ್ ನ ಮೊಬೈಲ್ ನಿಂದ ರಜಿಯಾಳ ಬಾಯ್ ಫ್ರೆಂಡ್ ಆಕೆಯನ್ನು ಸಂಪರ್ಕಿಸಿದ್ದ ಎಂದು ಹೇಳಲಾಗಿದೆ. ನಿತೀನ ಗಡಕರಿ ಅವರಿಗೆ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದಿದೆ.
ಈ ಪ್ರಕರಣದಲ್ಲಿ ಇದೀಗ ಯುವತಿಯನ್ನು ಮಂಗಳೂರು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಹೇಳಲಾಗುತ್ತಿದೆ. ಮೀರಜ್ ಪೊಲೀಸರ ತಂಡವು ಗುರುವಾರ ತಡ ರಾತ್ರಿ 11 ಗಂಟೆಯ ಸುಮಾರಿಗೆ ಬೆಳಗಾವಿಗೆ ತೆರಳಿ ಹಿಂಡಲಾಗ ಜೈಲಿನಲ್ಲಿ ತಪಾಸನೆ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನಾಗಪುರದ ಧಂತೋಲಿ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಮತ್ತು ಸುಲಿಗೆ ಪ್ರಕರಣ ದಾಖಲಾಗಿದೆ.