ಮಹಲಿಂಗಪುರ

ದೇಶವನ್ನು ಜಾತಿ ಮೇಲಲ್ಲ, ನೀತಿ ಮೇಲೆ ಕಟ್ಟಿದರೆ ಬದುಕು ಸುಂದರ: ಗವಿಸಿದ್ದೇಶ್ವರಶ್ರೀ

ದೇಶವನ್ನು ಜಾತಿ ಮೇಲಲ್ಲ, ನೀತಿ ಮೇಲೆ ಕಟ್ಟಿದರೆ ಬದುಕು ಸುಂದರ: ಗವಿಸಿದ್ದೇಶ್ವರಶ್ರೀ

ಮಹಾಲಿಂಗಪುರ 10: ದೇಶವನ್ನು ಜಾತಿ ಮೇಲೆ ಕಟ್ಟದೆ ನೀತಿ ಮೇಲೆ ಕಟ್ಟಿದರೆ ಪ್ರತಿಯೊಬ್ಬರ ಬದುಕು ಸುಂದರಮಯವಾಗುತ್ತದೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಹೇಳಿದರು. 

ಶನಿವಾರ ಸಂಜೆ ಸ್ಥಳೀಯ ಬನಶಂಕರಿದೇವಿ ದೇವಸ್ಥಾನದಲ್ಲಿ ದಸರಾ ನಿಮಿತ್ಯ ನಡೆದ ದೇವಿ ಪುರಾಣ ಪೂರ್ವದಲ್ಲಿ ಆಶಿರ್ವಚನ ನೀಡಿದ ಅವರು, ಹುಟ್ಟುವಾಗ ಮತ್ತು ಸಂಕಷ್ಟದ ಸಮಯ ಜಾತಿ, ಮತ, ಪಂಥವನ್ನು ಎನಿಸದ ನಾವು ಮುಂದೆಯೂ ತಲೆಯಲ್ಲಿ ಈ ಮಾರಕ ಕಸಗಳನ್ನು ತುಂಬಿಕೊಳ್ಳಬಾರದು. ಇದರಿಂದ ಜೀವನ ದುಖಮಯವಾಗುತ್ತದೆ. ಪ್ರೇಮದ ಹೃದಯದಲ್ಲಿ ದೇವ ನೆಲೆಸಿದ್ದಾನೆ, ಆದ ಕಾರಣ ಪ್ರತಿಯೊಬ್ಬರು ಪರಸ್ಪರ ಪ್ರೀತಿ ವಿಶ್ವಾಸ, ಸೌಹಾರ್ದತೆಯಿಂದ ಬದುಕು ಸಾಗಿಸಬೇಕು ಇದರಿಂದ ನಮ್ಮ ನಿಮ್ಮ ಜೀವನವು ಆನಂದ ಯಾತ್ರೆಯಾಗುತ್ತದೆ ಎಂದರು.  

ಜೀವನದಲ್ಲಿ ಯಾವುದು ಶಾಶ್ವತವಲ್ಲ ಎಲ್ಲವೂ ಬಯಲು (ನಶ್ವರ). ತನ್ನಿಚ್ಛೆ ಬದುಕುವವ ದುಃಖಿತ, ನಿಸರ್ಗಿಚ್ಛೆ (ದೇವನಿಚ್ಛೆ), ಸಾವನ್ನು ಅರ್ಥೈಸಿಕೊಂಡು ಬದುಕು ಸಾಗಿಸುವವ ನಿಜವಾದ ಭಕ್ತ ಮತ್ತು ಸುಖಿಮಯಿ ಎಂದು ಆ ಪರಮ ದಯಾಳು ಪರಮಾತ್ಮನ ಆಜ್ಞೆಯಂತೆ ನಡೆದುಕ್ಕೊಳ್ಳಲು ಭಕ್ತ ಸಮೂಹಕ್ಕೆ ಕರೆ ನೀಡಿದರು. 

ಪ್ರತಿಯೊಬ್ಬರಿಗೂ ತಾವು ಮಾಡುವ ಕೆಲಸಗಳ ಮೇಲೆ ಅಪಮಾನ ಮತ್ತು ನಿಂದೆಗಳು ಬಂದೆ ಬರುತ್ತವೆ, ಇವುಗಳನ್ನು ಎದುರಿಸಿ, ಶ್ರದ್ಧೆ, ಭಕ್ತಿಯನ್ನು ಅಳವಡಿಸಿಕ್ಕೊಳ್ಳಬೇಕು, ಆಗ ದೇಶ, ಊರು ಅಭಿವೃದ್ಧಿ ಕಾಣುಗುತ್ತವೆ, ಇತ್ತಿಚೆಗೆ ಜನತೆಯಲ್ಲಿ ಇದು ಬಹಳ ಕ್ಷೀಣಿಸುತ್ತ ಸಾಗಿರುವುದು ಬೇಸರ ಸಂಗತಿ ಎಂದರು.  

ಅಮಲಜೆರಿ ಜ್ಞಾನಮಯಾನಂದ ಶ್ರೀಗಳು ಆಶೀರ್ವಚನ ನೀಡಿ, ಜ್ಞಾನ, ಸಂಪತ್ತು, ಅಧಿಕಾರ, ಶಕ್ತಿ ಮತ್ತು ಧರ​‍್ ಎಲ್ಲವೂ ಜೀವನದಲ್ಲಿ ಕ್ಷಣಿಕ. ನಾವು ಇವುಗಳ ಹಿಂದೆ ಬಿದ್ದಲ್ಲಿ ಉಯ್ಯಾಲೆಯಂತೆ ನಮ್ಮ ಬದುಕೆ ಗೊಂದಲಮಯವಾಗುತ್ತದೆ, ಆದ್ದರಿಂದ ಇವುಗಳಿಂದ ದೂರವಿರಬೇಕೆಂದು ಸಲಹೆ ನೀಡಿದರು. 

ಪೂರ್ವ ಪುರುಷರು, ಮಹಿಳೆಯರು ಮೊಂಬತ್ತಿ ಬೆಳಗಿ ಮಹಾತ್ಮರಿಗೆ ಸ್ವಾಗತ ಕೋರಿದರು. ಸಿದ್ಧೇಶ್ವರ ಸ್ವಾಮೀಜಿಯವರ ಭಾವ ಚಿತ್ರಕ್ಕೆ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು, ಸಹಜಾನಂದ ಶ್ರೀಗಳು ಮತ್ತು ಇತರರು ಜ್ಯೋತಿ ಬೆಳಗಿ ಪುಷ್ಪಾರ್ಚನೆ ಮಾಡಿದರು.ಈ ಸಂದರ್ಭದಲ್ಲಿ ಅಮಲಜೆರಿ ಜ್ಞಾನಮಯಾನಂದ ಶ್ರೀಗಳು, ಬೆಂಗಳೂರಿನ ಅನ್ನದಾನಿ ಶ್ರೀಗಳು, ಸದಾಶಿವ ಗುರೂಜಿ ಮತ್ತು ಕಜ್ಜಿಡೋಣಿ ಕೃಷ್ಣಾನಂದ ಶ್ರೀಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ