ರಬಾಕಾವಿಬನಹಟ್ಟಿ

ಸಾರ್ವಜನಿಕರು ಶುಚಿತ್ವಕ್ಕೆ ಅಧಿಕ ಮಹತ್ವ ನೀಡಲಿ: ವಿದ್ಯಾಧರ ಸವದಿ

ಸಾರ್ವಜನಿಕರು ಶುಚಿತ್ವಕ್ಕೆ ಅಧಿಕ ಮಹತ್ವ ನೀಡಲಿ: ವಿದ್ಯಾಧರ ಸವದಿ

ರಬಕವಿ-ಬನಹಟ್ಟಿ 24: ಸರಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಅಪಾರವಾದ ವೆಚ್ಚದಲ್ಲಿ ಸುಸಜ್ಜಿತವಾದ ಶೌಚಾಲಯಗಳನ್ನು ನಿರ್ಮಿಸುತ್ತದೆ. ಅವುಗಳನ್ನು ನಮ್ಮಗಳ ಸ್ವತ್ತು ಎಂದು ತಿಳಿದು ಸಾರ್ವಜನಿಕರು ಸ್ವಚ್ಚವಾಗಿಟ್ಟುಕೊಳ್ಳಬೇಕು. ಶುಚ್ಚಿತ್ವಕ್ಕೆ ಹೆಚ್ಚು ಮಹತ್ವ ನೀಡಿ, ಪರಿಸರವನ್ನು ಶುದ್ದವಾಗಿಟ್ಟುಕೊಳ್ಳಲು ಸಾಧ್ಯ ಎಂದು ಬಾಗಲಕೋಟೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಸವದಿ ಹೇಳಿದರು. 

ಬನಹಟ್ಟಿ ನಗರದ ವಾರ್ಡ ನಂ. 11 ರಲ್ಲಿ 2017-18 ನೇ ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಿರ್ಮಿಸಿದ ಮಹಿಳಾ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದ ಸವದಿ, ವಾರ್ಡ ನಂ. 11 ರ ಮಹಿಳೆಯರು ಸರಕಾರ ನಿರ್ಮಿಸಿದ ಶೌಚಾಲಯಗಳನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು. ವಿನಾಕಾರಣ ನೈಮರ್ಲ್ಯಯುಂಟು ಮಾಡಿದರೆ ರೋಗ-ರುಜಿನ ಉಂಟಾಗಲು ಕಾರಣವಾಗುತ್ತದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಮಹಿಳೆಯರು ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡಬೇಕೆಂದರು. 

ರ-ಬ ನಗರ ಘಟಕದ ಬಿಜೆಪಿ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ನಗರಸಭಾ ಸದಸ್ಯ ಶಿವಾನಂದ ಬುದ್ನಿ, ರೇವಪ್ಪ ಗುಣಕಿ, ರಮೇಶ ಮನಗೂಳಿ, ಸದಾಶಿವ ಬಡಿಗೇರ, ಬಸು ಮನಗೂಳಿ, ರವಿ ಮನಗೂಳಿ, ಸದ್ದಾಮಹುಸೇನ ಮುಜಾವರ, ಇಂಧುಮತಿ ಸಾಲ್ಗುಡೆ, ಕಮಲಾಕ್ಷಿ ಕೊಣ್ಣೂರ, ಭಾರತಿ ತೆಲಸಂಗ, ಪ್ರಿಯಾ ಮುಂಡಾಸ, ಸುರಯಾ ಮುಜಾವರ, ಸೈರಾ ಮುಜಾವರ, ನೂರಜಾನ ನದಾಫ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ