ಮಹಲಿಂಗಪುರ

ಗೃಹ ರಕ್ಷಕ ದಳದ ಸಿಬ್ಬಂದಿ ಹಿತರಕ್ಷಣೆಯತ್ತ ಸರ್ಕಾರ ಗಮನ ಹರಿಸಲಿ : ಮಹಾಲಿಂಗೇಶ್ವರ ಶ್ರೀ.

ಗೃಹ ರಕ್ಷಕ ದಳದ ಸಿಬ್ಬಂದಿ ಹಿತರಕ್ಷಣೆಯತ್ತ ಸರ್ಕಾರ ಗಮನ ಹರಿಸಲಿ : ಮಹಾಲಿಂಗೇಶ್ವರ ಶ್ರೀ.

ಮಹಾಲಿಂಗಪುರ 06: ಯಾವುದೇ ಫಲಾಪೇಕ್ಷೆಯಿಲ್ಲದೇ ದೇಶ ಸೇವೆಯಲ್ಲಿ ತೊಡಗಿರುವ ರಾಜ್ಯದ 37,770 ಸಿಬ್ಬಂದಿ ಸೇರಿದಂತೆ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿರು ಗೃಹ ರಕ್ಷಕ ದಳದ ಸಿಬ್ಬಂದಿ ಹಿತರಕ್ಷಣೆಯತ್ತ ಸರ್ಕಾರ ಗಮನ ಹರಿಸಲಿ ಎಂದು  ಮಹಾಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀ ಹೇಳಿದರು. 

ಸ್ಥಳೀಯ ಭಗತ್ ಸಿಂಗ್ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಗೃಹ ರಕ್ಷಕ ದಳ ನಿವೇಶನ ಉದ್ಘಾಟಿಸಿ ಮಾತನಾಡಿದರು. ಗೃಹ ರಕ್ಷಕ ದಳ ಬಾಗಲಕೋಟೆ ಜಿಲ್ಲಾ ಬೋಧಕ ಎ.ಎಲ್‌.ಸಾವಕಾರ ಮಾತನಾಡಿ, 2 ನೇ ಮಹಾಯುದ್ಧ ಸಂದರ್ಭ ಕಾಲದಲ್ಲಿ ಕೇವಲ ನಿಷ್ಕಾಮ ಸೇವಾ ಕಾರ್ಯಕ್ಕಾಗಿ ಜನ್ಮತಾಳಿದ ಸ್ವಯಂ ಸೇವಾ ಸಂಸ್ಥೆ ಗೃಹ ರಕ್ಷಕ ದಳ ತನ್ನ ನಿರಂತರ ಸೇವಾ ಕಾರ್ಯದಿಂದ ಇಂದು ಬೃಹದಾಕಾರವಾಗಿ ಬೆಳದಿದೆ, ಗೃಹ ರಕ್ಷಕ ದಳದ ಸೇವಾ ಕಾರ್ಯ ಮೆಚ್ಚಿ ಮಹಾಲಿಂಗಪುರ ಘಟಕಕ್ಕೆ 100*50 ಅಳತೆಯ ನಿವೇಶನವನ್ನು ಉಚಿತವಾಗಿ ನೀಡಿದ ಅಂದಿನ ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮತ್ತು ಸರ್ವ ಸದಸ್ಯರ ಕಾರ್ಯ ಅವಿಸ್ಮರಣೀಯ ಅವರ ವಿಶ್ವಾಸಕ್ಕೆ ತಕ್ಕಂತೆ ನಡೆಯಬೇಕಿರುತ್ತದೆ ಎಂದರು. 

ಪುರಸಾಭಾ ಮಾಜಿ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮಾತನಾಡಿ, ಕೇವಲ ಅಲ್ಪ ಸಂಭಾವನೆ ಪಡೆದು ನಿಸ್ವಾರ್ಥದಿಂದ ನಾಡಿಗಾಗಿ ತಮ್ಮನ್ನು ಸಮರ​‍್ಿಸಿಕೊಂಡಿರುವ ಗೃಹ ರಕ್ಷಕ ಸಿಬ್ಬಂದಿ ಮಾದರಿ, ಅವರ ಸೇವೆ ನಮ್ಮ ಭಾಗ್ಯ ಎಂದರು. ಮುಖಂಡ ಹನಮಂತ ಕೊಣ್ಣೂರ ಮಾತನಾಡಿ, ಗೃಹ ರಕ್ಷಕ ದಳಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ಭರವಸೆ ನೀಡಿದರು.  

ರಮೇಶ ಕೆಸರಗೊಪ್ಪ ಮಹಾಲಿಂಗಪುರ ಘಟಕದ 30 ಸಿಬ್ಬಂದಿಗಳಿಗೆ ಸಮವಸ್ತ್ರ ವಿತರಿಸಿದರು, ಪುರಸಭಾ ಸದಸ್ಯ ಶೇಖರ ಅಂಗಡಿ ಮಾತನಾಡಿದರು. ಜಮಖಂಡಿ ಘಟಕಾಧಿಕಾರಿ ಎಂ.ಯು.ಠಾಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು ಉದ್ಘಾಟಿಸಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಪುರಸಭಾ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಸ್ಥಾಯಿ ಸಮಿತಿ ಅಧ್ಯಕ್ಷ ಬಲವಂತಗೌಡ ಪಾಟೀಲ, ಸದಸೈ ರವಿ ಜವಳಗಿ, ಮಂಜು ಬಕರೆ, ಚನ್ನಪ್ಪ ದಳವಾಯಿ, ಕವಿತಾ ಬಾಡನವರ, ಎಎಸ್‌ಐ ಎಲ್‌.ಕೆ.ಅಗಸರ,ಎಸ್‌.ಎಂ.ಮಠಪತಿ, ಐ.ಬಿ.ಹುನಗುಂದ ಇದ್ದರು.ಕು.ಕಾವ್ಯ ಮಾಳಿ ಪ್ರಾರ್ಥಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು. 


ಸುದ್ದಿ ಓದಿ