ಎಲಬುರ್ಗ

ಕಾರ್ತಿಕೋತ್ಸವ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ತರಲಿ: ಕಂಬಳಿ

ಕಾರ್ತಿಕೋತ್ಸವ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ತರಲಿ: ಕಂಬಳಿ

ಯಲಬುರ್ಗಾ 03: ಕಾರ್ತಿಕೋತ್ಸವ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ತರಲಿ, ಕೊರೊನಾ ದೂರವಾಗಲಿ ಜಗತ್ತು ನೆಮ್ಮದಿಯಿಂದ ಕೂಡಿರಲಿ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು. 

ಕುಕನೂರ ತಾಲೂಕಿನ ಸಿದ್ನೇಕೊಪ್ಪ ಗ್ರಾಮದಲ್ಲಿ  ಶಿದ್ದೇಶ್ವರ ಕಾರ್ತಿಕೋತ್ಸವದ ನಿಮಿತ್ಯ ಯುವ ನಾಟ್ಯ ಸಂಘದ ಪದಾಧಿಕಾರಿಗಳು ಹಮ್ಮಿಕೊಂಡ ಕೂಡಿ ಬೆಳೆದ ಜೋಡು ಹುಲಿಗಳು ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು. ಶಿದ್ದೇಶ್ವರನ ಆರ್ಶೀವಾದದಿಂದ ನೆಮ್ಮದಿಯಿಂದ ಜೀವನ ನಡೆಸುವಂತಾಗಿ ರೈತ ಸಮೂಹದ ಕಷ್ಟಗಳು ದೂರವಾಗಲಿ ಎಂದರು. 

ಸಿದ್ನೇಕೊಪ್ಪ ಚಿಕ್ಕ ಗ್ರಾಮವಾದರೂ ಇಲ್ಲಿ ಕಲಾವಿದರು ಇದ್ದಾರೆ, ಇದೊಂದು ಒಳ್ಳೆಯ ಗ್ರಾಮ ಪ್ರತಿಯೊಬ್ಬರು ಸಮನ್ವಯತೆ ಸಹೋದರತೆ, ಪ್ರೀತಿ, ವಿಶ್ವಾಸದಿಂದ ಪ್ರತಿಯೊಬ್ಬರು ಒಗ್ಗಟ್ಟಾಗಿ  ಜೀವನ ನಡೆಸುವಂತಹದ್ದು ವಿಶಿಷ್ಟವಾಗಿದ್ದು ಮಾದರಿಯಾಗಿದೆ.ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಮೂಲಕ ನವ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಅತ್ಯಂತ ಮಹತ್ತರವಾಗಿವೆ, ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ ಪುರಾತನ ಕಾಲದಲ್ಲಿ ಸಮಾಜದಲ್ಲಿ ಮನೆ ಮಾಡಿದ್ದ ಮೌಡ್ಯವನ್ನು ನಾಟಕಗಳ ಮೂಲಕ ಎತ್ತಿ ತೊರಿಸಲಾಗುತ್ತಿತ್ತು.ಕಾವ್ಯೇಶು ನಾಟಕಂ ರಮ್ಯಂ ಎನ್ನುವಂತೆ ಕಾವ್ಯಕ್ಕಿಂತ ನಾಟಕವು ರಮ್ಯವಾದದು.ಇತ್ತಿಚೀನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದ್ದು,ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ನಾಟಕ ಹೆಚ್ಚೆಚ್ಚು ನೋಡುವುದರ ಮೂಲಕ ನಾಟಕ ಕಲೆ ಉಳಿಸಿಬೆಳೆಸಿಕೊಂಡು ಹೋಗಬೇಕಾಗಿದೆ, ನಾಟಕಗಳು ಸಮಾಜದಲ್ಲಿನ ವಿದ್ಯಮಾನಗಳನ್ನು ಪ್ರತಿಬಿಂಬಿಸುತ್ತವೆ.ಅವುಗಳ ಮೂಲಕ ಕಲಿಯುವುದು ಬಹಳಷ್ಟಿದೆ ನಾಟಕಗಳು ಕೇವಲ ಮನರಂಜನೆಯಲ್ಲ. ಅವುಗಳು ಪ್ರಸ್ತುತ ಸಮಾಜದ ಅಭಿವ್ಯಕ್ತಿಯಾಗಿ ಕೆಲಸ ಮಾಡುತ್ತವೆ ಎಂದರು. 

ನಿವೃತ್ತ ಶಿಕ್ಷಕ ಎಸ್‌.ಎಂ.ಕಂಬಾಳಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ನಾಟಕದಲ್ಲಿ ಬರುವ ಒಳ್ಳೆಯ ಗುಣಗಳನ್ನು ಕಲಾಭಿಮಾನಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ನಾಟಕದಲ್ಲಿ ಬರುವ ಕೆಟ್ಟ ದೃಶ್ಯಗಳನ್ನು ಯಾರು ಮನಸ್ಸಿನಲ್ಲಿ ಇಟ್ಟು ಕೊಳ್ಳದೆ ಒಳ್ಳೆಯ ಗುಣಗಳನ್ನು ಮಾತ್ರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. 

ಗ್ರಾಪಂ ಅಧ್ಯಕ್ಷೆ ಮಹಾದೇವಿ ಆಲೂರು, ಫಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಭೀಮರಡ್ಡಿ ಶ್ಯಾಡ್ಲಗೇರಿ, ಎಪಿಎಂಸಿ ಸದಸ್ಯ ಮುತ್ತಣ್ಣ ಗದಗಿನ, ಸಮಾಜಸೇವಕ ಶರಣಪ್ಪ ಗೂಂಗಾಡಿ, ಎಂ.ಡಿ.ದೇಸಾಯಿ, ಈಶಪ್ಪ ಆರೇರ, ಗ್ರಾಪಂ ಸದಸ್ಯರಾದ ಶರಣಯ್ಯ ಹಿರೇಮಠ, ಕಾಶೀಮಸಾಬ ಹುಡೇದ, ವಿಶಾಲಾಕ್ಷಿ ಕೋಡಿಕೊಪ್ಪ, ಸುರೇಶ ಹೈದ್ರಿ, ರಫಿಸಾಬ ನಧಾಪ, ಅಡಿವೆಪ್ಪ ಚಲವಾದಿ, ಮಲ್ಲಪ್ಪ ಮನಗೂಳಿ, ಅಂದಾನಸ್ವಾಮಿ ಲಕ್ಕಲಕಟ್ಟಿ, ಪತ್ರಕರ್ತ ಮಲ್ಲು ಮಾಟರಂಗಿ, ರಮೇಶ ಹಡಗಲಿ, ಸಿದ್ದರಡ್ಡಿ, ಅಲ್ಲಾಸಾಬ ಓಲೇಕಾರ, ಶರಣಪ್ಪ ಬೀಡನಾಳ, ಸೇರಿದಂತೆ ಗ್ರಾಮದ ಗುರು-ಹಿರಿಯರು, ಯುವಕರು ಇತರರು ಇದ್ದರು. 


ಸುದ್ದಿ ಓದಿ