ಕೊರೋನ, ಸರ್ಕಾರ ತಜ್ಞರ ವರದಿ ಪಾಲಿಸಲಿ: ಕಿಮ್ಮನೆ ರತ್ನಾಕರ್
ಚಿಕ್ಕಮಗಳೂರು , ಸೆ 1 ಕೊರೋನ ನಿವಾರಣೆ ಮತ್ತು ಲಸಿಕಾ ವಿತರಣೆಯಲ್ಲಿ ಮೋದಿ ಸರ್ಕಾರ ಮಾಡಿದ ತಪ್ಪನ್ನೆ ರಾಜ್ಯ ಸಹ ಮಾಡುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೊರೋನ ವಿಚಾರದಲ್ಲಿ ತಜ್ಞರು ಕೊಡುವ ವರದಿಯನ್ನು ಸರಕಾರ ಮೊದಲು ಅನುಸರಿಸಲಿ ಎಂದು ಹೇಳಿದರು.
ಶಾಲಾ – ಕಾಲೇಜು ಆರಂಭಕ್ಕೆ ಕರ್ನಾಟಕ ಸರಕಾರ ಹಸಿರು ನಿಶಾನೆ ನೀಡಿದ ಹಿನ್ನೆಲೆಗೆ ಪ್ರತಿಕ್ರೀಯಿಸಿದ ಮಾಜಿ ಸಚಿವರು, ಸರ್ಕಾರ ತಜ್ಞರ ವರದಿಯ ವಿರುದ್ಧ ಕಾರ್ಯಕ್ರಮಗಳನ್ನ ಮಾಡಬಾರದು, ತಜ್ಞರ ವರದಿ ವಿರುದ್ಧ ನಡೆದಿರುವುದೇ ಎಲ್ಲಾ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದು ದೂರಿದರು. ಜನರು ಲಸಿಕಾ ಕೇಂದ್ರಕ್ಕೆ ತೆರಳಿದರೆ ಲಸಿಕೆ ಲಭ್ಯವಿಲ್ಲ ನಾಳೆ ಬನ್ನಿ ಹೇಳುತ್ತಾರೆ, ಮರುದಿನ ಬೆಳಿಗ್ಗೆ ಹೋದರೆ ಲಸಿಕೆ ಇಲ್ಲ ಎಂದು ಹೇಳುತ್ತಾರೆ ಎಂದು ಕಿಮ್ಮನೆ ಆರೋಪಿಸಿದರು.