ಎಲಬುರ್ಗ

ಕಾನೂನು ಅರಿವು ಕಾರ್ಯಕ್ರಮ

ಕಾನೂನು ಅರಿವು ಕಾರ್ಯಕ್ರಮ

ಯಲಬುರ್ಗ 05: ದೇಶದ  ಪ್ರತಿಯೊಬ್ಬ ನಾಗರಿಕರಿಗೂ ಕಾನೂನಿನ ಬಗ್ಗೆ ಅರಿವಿರಬೇಕು . ಅಂದಾಗ ಮಾತ್ರ ಸಮಾಜದಲ್ಲಾಗುವ ಅಪರಾಧಗಳನ್ನು ತಡೆಯಲು ಸಾಧ್ಯ ಎಂದು ವಕೀಲರಾದ  ಕೆಆರ್ಬೆಟಗೇರಿ ಹೇಳಿದರು.

ತಾಲೂಕಿನ ಕರಮುಡಿ ಗ್ರಾಪಂ ಸಭಾಂಗಣದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ನಾಗರಿಕರಿಗೆ ಯಾವುದೇ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ ಅನ್ಯಾಯವಾಗುತ್ತಿದೆ ಎನಿಸಿದರೆ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರಕ್ಕೆ ಲಿಖಿತವಾಗಿ ತಿಳಿಸಿದರೆ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ಒದಗಿಸಲಾಗುವುದು ಎಂದು ಹೇಳಿದರು.

ಮಕ್ಕಳಿಗೆ ತಮ್ಮ ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಹಿರಿಯ ನಾಗರಿಕರನ್ನು ನಿರ್ಲಕ್ಷಿಸಿದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಕೀಲ ಎ.ಎಂ.ಪಾಟೀಲ್ ಮಾತನಾಡಿ, ಗುರುಕುಲ ಸ್ಥಾಪಿಸಿ ವಿಶ್ವಕ್ಕೆ ಮಾದರಿಯಾಗಿದ್ದ ದೇಶದಲ್ಲಿ ಇಂದು ಅನಾಥಾಶ್ರಮಗಳು ಹೆಚ್ಚಾಗುತ್ತಿರುವುದು ವಿಷಾದಕರ. ಯುವಪೀಳಿಗೆ ಹಿರಿಯರನ್ನು ನಿರ್ಲಕ್ಷಿಸುತ್ತಿರುವುದು ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಕಾನೂನು ನೆರವು ಪಡೆಯುವ ಅಗತ್ಯವಿದೆ ಎಂದರು.

ಗ್ರಾಪಂ ಅಧ್ಯಕ್ಷ ಗೀತಾ ಸಂಗಪ್ಪ ತುಪ್ಪದ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಬಗ್ಗೆಯೂ ಅರಿವು ಮೂಡಿಸಬೇಕಾದ ಅಗತ್ಯವಿದೆ. ಕಾನೂನು ಅರಿವು ಕಾರ್ಯಕ್ರಮಗಳನ್ನು ತಾಲ್ಲೂಕಿನ ಎಲ್ಲಾ ಗ್ರಾಮಗಳ ಹಿರಿಯ ನಾಗರಿಕರಿಗೂ ತಿಳಿಸಿ ಕೊಡುವ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.

ಕರಮುಡಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಚನ್ನಬಸವನಗೌಡ್ರು ಪಾಟೀಲ್ ಮಾತನಾಡಿ, ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನು ಅಗತ್ಯ ಇದೆ. ನಮ್ಮ ದೈನಂದಿನ ಜೀವನಕ್ಕೆ ಅಡೆತಡೆ ಇಲ್ಲದೆ ನೆಮ್ಮದಿಯ ಬದುಕು ಸಾಗಲು ಅಲ್ಪ ಪ್ರಮಾಣದಲ್ಲಾದರೂ ಪ್ರತಿಯೊಬ್ಬರು ಕಾನೂನು ಜ್ಞಾನ ಪಡೆಯಬೇಕು ಆಥರ್ಿಕವಾಗಿ ತೊಂದರೆಗೊಳಗಾದವರಿಗೆ ಉಚಿತ ಕಾನೂನು ನೆರವು ನೀಡುತ್ತಿರುವ ತಾಲೂಕಿನ ಎಲ್ಲಾ ವಕೀಲರಿಗೆ ಹಾಗೂ ನ್ಯಾಯಾಧೀಶರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುವುದರ ಮೂಲಕ ಅಭಿನಂದನೆಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ವಕೀಲ ಗವಿಸಿದ್ದಪ್ಪ ಮಾನಶೆಟ್ಟರ್, ಪಂಚಾಯಿತಿ ಉಪಾಧ್ಯಕ್ಷರ ಅಂದವ್ವ ಯಲ್ಲಪ್ಪ ಮುಗುಳಿ, ಸದಸ್ಯರಾದ ಮೈಲಾರಪ್ಪ ಪಲ್ಲೆದ, ರಾಮಣ್ಣ ಹೊಕ್ಕಳ, ಕಲ್ಲಿನಾಥ ಲಿಂಗಣ್ಣವರ, ಗಾಳಪ್ಪ ದೊಡ್ಡಮನಿ, ಸಮುದಾಯದ ಮುಖಂಡರು ಪರಸಪ್ಪ ಲಮಾಣಿ, ಗಂಗಪ್ಪ ಹವಳಿ, ಮೈಬುಸಾಬ ಹಿರೇಮನಿ, ಗ್ರಾಮಲೆಕ್ಕಾಧಿಕಾರಿ ದೇವರಾಜ, ಆರೋಗ್ಯ ಸಹಾಯಕಿ ಶೋಭಾ ನಾಯಕ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರ ಇತರರು ಇದ್ದರು.

 

ಸುದ್ದಿ ಓದಿ