ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಅವಶಕ, ನನ್ನ ಬೆಂಬಲ ಇದೆ ; ಶಾಸಕಿ ಹೆಬ್ಬಾಳಕರ್

ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ  ವಿಭಜನೆ ಅವಶಕ, ನನ್ನ ಬೆಂಬಲ ಇದೆ ; ಶಾಸಕಿ  ಹೆಬ್ಬಾಳಕರ್

ಬೆಳಗಾವಿ, ಏ, 4 : ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಮೂರು ಭಾಗಗಳಾಗಿ ವಿಭಜಿಸಬೇಕಾದ ಅವಶಕತೆ ಇದೆ. ಇದಕ್ಕೆ ನಮ್ಮ ಸಹಮತ ಇದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇಂದಿಲ್ಲಿ ತಿಳಿಸಿದ್ದಾರೆ.

    ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಸ್ಥಾನವಾಗಿರುವ ಬೆಳಗಾವಿಯಿಂದ  ಅಥಣಿ ಭಾಗದ ಜನರು ಬಹಳ ದೂರದಿಂದ ತಮ್ಮ ಕೆಲಸ ಕಾರ್ಯಗಳಿಗಾಗಿ ಬೆಳಗಾವಿಗೆ ಬಂದು ಹೋಗುವದು ಒಂದು ದಿನ ಕಳೆಯುತ್ತದೆ. ಜಿಲ್ಲಾ ಕೇಂದ್ರಕ್ಕೆ ಕೆಲಸಕ್ಕಾಗಿ ಜನರು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ಉದ್ದೇಶಕ್ಕೆ ಜಿಲ್ಲಾ ವಿಭಜನೆಗೆ ನಮ್ಮ ಸಹಮತವಿದೆ. 3 ಜಿಲ್ಲೆಗಳಾಗಿ ವಿಂಗಡಣೆಯಾಗಬೇಕು ಎಂದು ಹೇಳಿದರು. 

      ಬೆಳಗಾವಿ ಜಿಲ್ಲೆ ವಿಭಜನೆ ಸಂಬಂಧ ಸಚಿವ ಉಮೇಶ ಕತ್ತಿ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ನಿರ್ಧರಿಸಿದೆ. ಅದಕ್ಕೆ ನಿಮ್ಮ ಬೆಂಬಲವಿದೆಯೇ ಎನ್ನುವ ಪ್ರಶ್ನೆಗೆ, ಖಂಡಿತ ಬೆಂಬಲವಿದೆ ಎಂದರು. ಬೆಳಗಾವಿ ತಾಲೂಕು ಕೂಡ ಬಹಳ ದೊಡ್ಡದಿದೆ. ರಾಮನಗರ ಜಿಲ್ಲೆಯಷ್ಟು ಬೆಳಗಾವಿ ತಾಲೂಕಿದೆ. ಬೆಳಗಾವಿ ಗ್ರಾಮೀಣ ತಾಲೂಕಾಗಬೇಕು. ಅಲ್ಲಿಗೆ ಎಲ್ಲ ಕಚೇರಿಗಳು ಬರಬೇಕು. 

   ಈಗಾಗಲೇ ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಈ ನಿಟ್ಟಿನಲ್ಲಿ ಮನವಿ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಕ್ಷಣ ಬೆಳಗಾವಿ ತಾಲೂಕು ವಿಭಜನೆ ಮಾಡಲಾಗುವುದು. ಬೆಳಗಾವಿ ಗ್ರಾಮೀಣ ಭಾಗವನ್ನೇ ತಾಲೂಕನ್ನಾಗಿ ಮಾಡಿ ಪ್ರತಿಯೊಂದು ಇಲಾಖೆಯನ್ನು ಆರಂಭಿಸುತ್ತೇವೆ ಎಂದು ತಿಳಿಸಿದರು. ಈ ‌ಸಂದರ್ಭದಲ್ಲಿ ವಿನಯ ನಾವಲಗಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ