ನಗು ಅಳು
-ಉಮಾದೇವಿ. ಸು. ನಿಂಬಾಳಕರ
ಹಿರೇಮುನವಳ್ಳಿ
ತಾ. ಖಾನಾಪೂರ
ಜೀವನದ ಸಾಮರಸ್ಯಗಳೇ ನಗು ಅಳು ಇವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇದರ ಅನುಭವವನ್ನು ನಾವು ಸಮನಾಗಿ ಅನುಭವವಿಸಬೇಕಾಗುತ್ತದೆ ಆದರೆ ಕೆಲವರು ದುಃಖ ಬೇಡ ಕೇವಲ ಸುಖವಿರಲಿ ಎಂದು ಬಯಸುತ್ತಾರೆ. ಒಂದು ವೇಳೆ ಸುಖಕರ ಜೀವನವೇ ಇದ್ದರೆ ಈ ಮನುಷ್ಯ ಜಾತಿಗೆ ಈ ಜೀವನವೇ ಬೇಡಪ್ಪಾ ಎಂದು ಎನಿಸುವುದಾದರು ಯಾವಾಗ? ಅದಕ್ಕೆ ಸೃಷ್ಠಿಯ ನಿಮರ್ಾಣದಲ್ಲಿ ನಗುವಿನ ಹಿಂದೆ ಅಳು ಅಳುವಿ ಹಿಂದೆ ನಗು ಇವುಗಳನ್ನು ಸಮನಾಗಿ ನೀಡದಿದ್ದರೂ ಒಂದರ ಹಿಂದೆ ಒಂದನ್ನು ಸೃಷ್ಠಿಯಾಗಿವೆ.
ಕೆಲವರು ಹೇಳುತ್ತಾರೆ ನಾವೇನಾದರೂ ತುಂಬಾ ನಗುತ್ತಾ ಇದ್ದರೆ ಜಾಸ್ತಿನಗಬೇಡ ಮಲಗುವಾಗ ಅತ್ತು ಮಲಗ್ತಿಯಾ ನೋಡು ಅಂತಾರೆ... ಇನ್ನೂ ದುಃಖದಲ್ಲಿದ್ದಾಗ ಕಷ್ಟಗಳು ಮನುಷ್ಯರಿಗೆ ಬರದೆ ಮರಕ್ಕೆ ಬರುತ್ತವೆಯೇ? ಅತ್ತೆಗೊಂದು ಕಾಲವಾದರೇ ಸೊಸೆಗೊಂದು ಕಾಲ ಈಗ ಕಷ್ಟ ಮುಂದೊಂಮ್ಮೆ ಸುಖ ಅದೇ ಜೀವನ ಎಂದು ಹೇಳುತ್ತಾರೆ.
ಮನುಷ್ಯ ಜಿವನವೆಂದರೇ ಅವುಗಳನ್ನು ನಾವು ಪರಸ್ಪರ ಅನುಭವಿಸಬೇಕಾಗುತ್ತದೆ ನಮಗೆ ಸುಖವಿರಲಿ ದುಖಃ ಬೇಡಾ ಎಂದು ನಾವು ಬಯಸುವುದಾದರೆ ಅದು ನಮ್ಮ ಅತಿಆಸೆಯ ಬದುಕಾಗುತ್ತದೆ ಜೀವನದಲ್ಲಿ ನಮಗೆ ಬರುವ ಕಷ್ಟದ ಅನುಭವಗಳು ನಮ್ಮ ಗೆಲುವಿಗೆ ಕಾರಣವಾಗುತ್ತವೆ ಆದ್ದರಿಂದ ನಗುವನ್ನು ಸ್ವೀಕರಿಸುವಂತೆ ನಾವು ಅಳುವನ್ನು ಸ್ವಿಕರಿಸಬೇಕಾಗುತ್ತದೆ.
ಹಲವಾರು ಮಹನೀಯರ ಜೀವನದ ಪುಟಗಳನ್ನು ತೆರೆದು ನೊಡಿದಾಗ ದುಃಖದಿಂದ ಸುಖವಿರುವುದನ್ನು ನಾವು ನೋಡುತ್ತೇವೆಯೇ ಹೊರತು ಸುಖದಿಂದ ದುಃಖ ವಿರುವುದನ್ನು ನಾವು ನೋಡುವುದಿಲ್ಲ ನಮಗೆ ಒಂದು ಕಣ್ಣಿದ್ದರೆ ಜೀವನದಲ್ಲಿ ಅಸೂಯೆ ಪಟ್ಟುಕೊಳ್ಳುತ್ತೇವೆ ಎರಡು ಕಣ್ಣುಗಳಿದ್ದರೆ ಸಂತೋಷ ಪಟ್ಟುಕೊಳ್ಳುತ್ತೇವೆ ಜೀವನದಲ್ಲಿಯೂ ಹಾಗೆಯೇ ಒಂದನ್ನು ಸ್ವೀಕರಿಸಿ ಇನ್ನೊಂದನ್ನು ತೀರಸ್ಕರಿಸಬಾರದು ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಎಲ್ಲವನ್ನೂ ಸ್ವೀಕರಿಸಬೇಕು ಅವು ನಮ್ಮ ಜೀವನದ ಏಳಿಗೆಗೆ ಸಹಾಯಕವಾಗುತ್ತವೆ.
ಪ್ರಪಂಚದಲ್ಲಿ ಅತೀ ಮಧುರವಾದ ಜೋಡಿ ಯಾವುದು ಗೋತ್ತಾ? ಒಂದು ನಗು ಇನ್ನೂಂದು ಅಳು... ಅವು ಎರಡೂ ಪರಸ್ಪರ ಯಾವತ್ತೂ ಬೇಟಿಯಾಗುವುದಿಲ್ಲ ಒಂದು ವೇಳೆ ಆಕಸ್ಮಾತ್ ಬೇಟಿಯಾದರೂ ಅಂತಹ ಕ್ಷಣವನ್ನು ನಾವು ಮರೆಯಲು ಸಾಧ್ಯವಿಲ್ಲ ಕೆಲವು ಕ್ಷಣದಲ್ಲಿ ನಾವು ಸಂತೋಷದ ಕಣ್ಣಿರನ್ನು ಹಾಕುತ್ತೇವೆ ಆದರೆ ನೋಡುಗರ ಕಣ್ಣಿಗೆ ಅದು ದುಃಖಕರ ಸಂಗತಿಯಾಗಿ ಭಾಸವಾಗುತ್ತದೆ ಇದೊಂದು ನಗು ಮತ್ತು ಅಳುವಿನ ಆಕಸ್ಮಿಕ ಬೇಟಿ ಎಂತಲೂ ಕರೆಯಬಹುದು.
ಜೀವನದಲ್ಲಿ ಮನುಷ್ಯ ಹೆಚ್ಚು ಆಶಾವಾದಿಯಾಗಿರುತ್ತಾನೆ ಆದರೆ ಅವುಗಳ ಈಡೇರಿಕೆಗಳು ಸಾಧ್ಯವಾಗುವುದು ದುಃಖವನ್ನು ಬೇಟಿಯಾದಾಗಲೆ ಹೊರತು ಸುಖದಿಂದಲ್ಲ ಹಾಗಂತ ನಗುವಿನಿಂದ ಏನನ್ನು ಸಾಧಿಸಲಾಗದು ಎಂದೆನಿಲ್ಲ ದ್ವೇಷದಿಂದ ಗೆಲ್ಲಲಾಗದನ್ನು ನಾವು ಪ್ರೀತಿಯಿಮದಲೂ ಗೆಲ್ಲಬಹುದು. ಮನುಷ್ಯ ಹುಟ್ಟಿದಾಗ ಎಲ್ಲರೂ ಸಂತೋಷದಿಂದ ನಗುತ್ತೇವೆ ಅದೇ ಮನುಷ್ಯ ಸಾವಿನಮರೆಯಲ್ಲಿ ಮರೆಯಾದಾಗ ದುಃಖ ಪಡುತ್ತೇವೆ. ಒಂದು ವೇಳೆ ಆಗಲೂ ನಾವು ನಗುವನ್ನು ಬಯಸಿದ್ದರೆ ನಮ್ಮ ನಗುವಿಗೆ ಅರ್ಥವಿಲ್ಲದಂತಾಗುತ್ತದೆ ನಗುವಿಗೆ ಒಂದು ಅರ್ಥವಿದ್ದರೆ ಅದು ಇನ್ನೂಬ್ಬರ ನಗುವಿಗು ಕಾರಣವಾಗುತ್ತದೆ.
ನಗುವಿನಲ್ಲಿ ಹಲವಾರು ಬಗೆಯ ಪ್ರಕಾರಗಳನ್ನು ನಾವು ಕಾಣುತ್ತೇವೆ ಮುಗುಳುನಗೆ, ಕಿರುನಗೆ, ಕೆಕೆನಗೆ, ಚೆಷ್ಟನಗೆ, ಕೋಳಿನಗೆ, ಮುಂತಾದವು. ಇನ್ನೂ ಅಳು, ಅಳುವಿನಲ್ಲಿಯೂ ನಾವು ಪ್ರಕಾರಗಳನ್ನು ಕಾಣುತ್ತೇವೆ ಕೆಲವರು ದೊಡ್ಡಧ್ವನಿಯಲ್ಲಿ ಅಳುತ್ತಾರೆ. ಇನ್ನೂ ಕೆಲವರು ಇನ್ನೊಬ್ಬರಿಗೆ ಗೊತ್ತಾಗದ ರೀತಿಯಲ್ಲಿ ಮನಸ್ಸಿನಲ್ಲಿಯೇ ನೊಂದು ಕಣ್ಣುಗಳಿಂದ ಕಂಬನಿಯನ್ನು ಮಾತ್ರ ಹಾಕುತ್ತಾರೆ ಇನ್ನೂ ಹಲವಾರು ನಗು-ಅಳುವಿನ ಪ್ರಕ್ರಿಯೆಗಳನ್ನು ನಾವು ಕಾಣುತ್ತೇವೆ.
ಇದೆಲ್ಲ ವಿಷಯಗಳನ್ನು ಮೀರಿ ನಗು-ಅಳುವಿನ ಸಂಗತಿಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ನಾವು ಕಾಣುತ್ತೇವೆ ಅವುಗಳನ್ನು ಮೆಲಕುಹಾಕುವುದರ ಮೂಲಕ ಅನುಭವಿಸುತ್ತ ಸಾಗಿದರೆ ಇಂತಹ ಹಲವಾರು ಸಂಗತಿಗಳನ್ನು ನಾವು ಕಂಡುಕೊಳ್ಳಲು ಸಾಧ್ಯ ಇದೆ ನಗು-ಅಳುವಿಗೂ ಮತ್ತು ಜೀವನಕ್ಕು ಇರುವ ಸಾಮರಸ್ಯ.